ರಚಿತಾ ರಾಮ್ ಅವರ ಸುತ್ತಾ ಒಂದಲ್ಲಾ ಒಂದು ವಿವಾದ ಸುತ್ತುತ್ತಿದೆಯೇನೋ ಎಂಬಂತಿದೆ ಇತ್ತೀಚಿನ ದಿನಗಳಲ್ಲಿ.‌ ಅವರು ಮಾತನಾಡುವ ಮಾತುಗಳೆಲ್ಲಾ ವಿವಾದಗಳಾಗುತ್ತಿವೆಯಾ? ಎನ್ನುವಂತಿದೆ‌. ಅದರಲ್ಲೂ ಐ ಲವ್ ಯೂ ಸಿನಿಮಾ ಬಂದ ನಂತರ ಆ ಚಿತ್ರದ ಒಂದು ರೊಮ್ಯಾಂಟಿಕ್ ಹಾಡಿನಿಂದ ಆರಂಭವಾದ ಕಾಂಟ್ರವರ್ಸಿ ಇನ್ನೂ ಅವರನ್ನು ಬಿಟ್ಟಿಲ್ಲ. ಒಂದು ಹಾಡು ಇಷ್ಟೆಲ್ಲಾ ಸುದ್ದಿಯಾಗುತ್ತದೆ ಎಂದು ಬಹುಶಃ ಯಾರೂ ಊಹಿಸಿಯೂ ಇರಲಿಲ್ಲ ಎನ್ನಬಹುದು. ರಚಿತಾ ಅವರು ಬಹಳ ಬೋಲ್ಡ್ ಆಗಿ ನಟಿಸಿರುವ ಹಾಡು ಈಗಾಗಲೇ ಬಹಳಷ್ಟು ಸದ್ದು ಮಾಡಿದ್ದು ಗೊತ್ತಿರುವ ವಿಷಯ‌. ಅದರ ಬಗ್ಗೆ ರಚಿತಾ ನೀಡಿದ್ದ ಹೇಳಿಕೆಗೆ ಪ್ರಿಯಾಂಕ ಉಪೇಂದ್ರ ಅವರು ಗರಂ ಆಗಿದ್ದು ಹೌದು.

ಈಗ ರಚಿತಾ ರಾಮ್ ಆ ಹಾಡಿಗೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಅವರ ಕುಟುಂಬದವರ ಮನಸ್ಸಿಗೆ ನೋವಾಗಿದೆ, ವಿಶೇಷವಾಗಿ ಅವರ ತಂದೆ-ತಾಯಿ ಮನಸ್ಸಿಗೆ ಮಗಳನ್ನು ಈ ರೀತಿ ನೋಡಿ ದುಃಖವಾಗಿದೆ ಎಂದು ರಚಿತಾ ಅವರು ಮಾದ್ಯಮವೊಂದರಲ್ಲಿ ಮಾರನಾಡುತ್ತಾ ಅವರ ತಂದೆಯ ಕ್ಷಮೆ ಕೇಳಿದ್ದಾರೆ. ರಚಿತಾ ಅವರ ಮನೆಯಲ್ಲಿ ಅವರ ತಾಯಿ ಮಗಳು ನಟಿಯಾಗಿ ಮಾಡಿರುವ ಪಾತ್ರ ಓಕೆ, ಆದರೆ ಮಗಳಾಗಿ ಅದನ್ನು ಸ್ವೀಕರಿಸುವುದು ಕಷ್ಟ ಎಂದರೆ, ಅವರ ತಂದೆ ತಾವು ಆ ಚಿತ್ರವನ್ನು ನೋಡುವುದಿಲ್ಲ ಎಂದಿದ್ದಾರೆ ಎಂದು ರಚಿತಾ ರಾಂ ಹೇಳಿದ್ದಾರೆ.

ಅವರ ತಂದೆ ತಮ್ಮನ್ನು ಇನ್ನೂ ಒಂದು ಪುಟ್ಟ ಮಗು ಎಂತಲೇ ಭಾವಿಸಿರುವುದರಿಂದ ಅವರಿಗೆ ಈಗ ರಚಿತಾ ಅವರ ಪಾತ್ರ ಆ ಹಾಡಿನಲ್ಲಿ ಬೇಸರ ತಂದಿದೆ ಎಂದ ರಚಿತಾ, ಜೀವನದಲ್ಲಿ ಕಷ್ಟ ಎಂದರೆ ತಂದೆ ತಾಯಿ, ಸಹೋದರ, ಸಹೋದರಿಯರು ಬಿಟ್ಟರೆ ಬೇರೆ ಯಾರೂ ಬರೋದಿಲ್ಲ. ಅದಕ್ಕೆ ಇನ್ನು ಮುಂದೆ ಅವರ ಮನ ನೋಯಿಸಲು ಬಯಸುವುದಿಲ್ಲ ಎಂದು ಅವರ ತಂದೆಗೆ ಕ್ಷಮಾಪಣೆ ಕೇಳಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಇನ್ನು ಮುಂದೆ ಬೋಲ್ಡಾಗಿ ನಟಿಸುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here