ಇತ್ತೀಚಿಗಷ್ಟೇ ನಟ ರಿಷಿ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ರಂತ ಸ್ಯಾಂಡಲ್ ವುಡ್ ನ ಖ್ಯಾತ ನಾಮರ ವಿವಾಹಗಳು ಸಂಭ್ರಮದಿಂದ ನಡೆದು, ನವ ದಂಪತಿಗಳು ಹೊಸ ಬದುಕಿಗೆ ಅಡಿ ಇಟ್ಟಿದ್ದಾರೆ. ಈಗ ಅದೇ ಸಾಲಿನಲ್ಲಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಕೂಡಾ ಸಾಕಷ್ಟು ಹೆಸರು ಮಾಡಿರುವ ನಿತ್ಯ ರಾಮ್ ಅವರು ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿಯೂ ಆಗಿರುವ ನಿತ್ಯ ರಾಮ್ ಅವರ ವಿವಾಹ ಮಹೋತ್ಸವವು ಅದ್ಧೂರಿಯಾಗಿ ಹಾಗೂ ಸಾಂಪ್ರದಾಯಿಕವಾಗಿ ನಡೆದಿದೆ.

ನಿತ್ಯ ರಾಮ್ ಅವರು ಗೌತಮ್ ಅವರೊಡನೆ ಇಂದು ಬೆಳಗ್ಗೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸಪ್ತ ಪದಿ ತುಳಿದು ಜೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ ನಿತ್ಯ ರಾಮ್ ಅವರು. ಕಳೆದ ಐದು ದಿನಗಳ ಹಿಂದೆಯಷ್ಟೇ ಗೌತಮ್ ಅವರೊಡನೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಿತ್ಯ ಅವರ ವಿವಾಹ ಇಂದು ಶಾಸ್ತ್ರೋಸ್ತವಾಗಿ, ಶುಭ ಪ್ರದವಾಗಿ ನಡೆದಿದೆ.
ನಿತ್ಯ ಅವರ ಮದುವೆಗೆ ಕಿರುತೆರೆ ಲೋಕದ ಹಲವು ನಟ ನಟಿಯರು ಬಂದು ವಧು ವರರಿಗೆ ಶುಭ ಹಾರೈಸಿದ್ದಾರೆ.

ನಿತ್ಯ ರಾಮ್ ಅವರ ಮದುವೆಗೆಂದೇ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಒಂದು ಸುಂದರವಾದ ಸೆಟ್ ಹಾಕಲಾಗಿತ್ತು. ನಿತ್ಯರಾಮ್ ಅವರು ವಿವಾಹ ವಾಗಿರುವ ಗೌತಮ್ ಅವರು ಮೂಲತಃ ಕರ್ನಾಟಕದವರೇ ಆದರೂ, ಆಸ್ಟ್ರೇಲಿಯಾದಲ್ಲಿ ಅವರು ಸೆಟಲ್ ಆಗಿದ್ದು, ಅಲ್ಲಿ ಉದ್ಯಮಿಯಾಗಿದ್ದಾರೆ. ವಿವಾಹದ ನಂತರ ನಿತ್ಯ ಅವರು ತಮ್ಮ ಪತಿಯೊಡನೆ ಆಸ್ಟ್ರೇಲಿಯಾದಲ್ಲೇ ನೆಲೆಸಲಿದ್ದಾರೆ ಎನ್ನಲಾಗಿದೆ. ಕುಟುಂಬದವರು ನಿಶ್ಚಯಿಸಿದ ವಿವಾಹ ಇದಾಗಿದೆ.

 

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here