ಕೀಕಿ ಚಾಲೆಂಜ್ ಆದ್ಮೇಲೆ ಇತ್ತೀಚಿಗೆ ಸೋಷಿಯಲ್​​ ಮೀಡಿಯಾದಲ್ಲಿ ದಿನಕ್ಕೊಂದು ಹೊಸ ಹೊಸ ಚಾಲೆಂಜ್ ಆಟಗಳು ಹುಟ್ಟಿಕೊಳ್ತಿವೆ. ಅದರ ಸಾಲಿಗೆ ಇದೀಗ ‘ಬಾಟಲ್​​​​ ಕ್ಯಾಪ್ ಚಾಲೆಂಜ್’ ಅನ್ನೋ ಆಟ ಕೂಡ ಒಂದು. ಅಂದ್ದಾಗೆ ಬಹುತೇಕ ಸಿನಿಮಾ ಸ್ಟಾರ್​​ಗಳು ಜಿಮ್​ನಲ್ಲಿ ಬೆವರು ಸುರಿಸಿ ವರ್ಕೌಟ್ ಮಾಡೋದನ್ನ ನೋಡಿರ್ತಿವಿ ಆ ಮೂಲಕ ತಾವು ಫಿಟ್ನೇಸ್ ಆಗಿದ್ದೀವಿ ಅನ್ನೋದನ್ನು ಸಾಬೀತುಪಡಿಸ್ತಾರೆ. ಆ್ಯಕ್ಷನ್​ ಕಿಂಗ್ ಅರ್ಜುನ್ ಸರ್ಜಾ, ಗಣೇಶ್​​, ಚಿರಜೀವಿ ಸರ್ಜಾ, ಬಾಲಿವುಡ್ ಸ್ಟಾರ್ ಅಕ್ಷಯ್​ ಕುಮಾರ್​ ಸೇರಿದಂತೆ ಬಹುತೇಕ ಹೀರೋಗಳು ಈ ಚಾಲೆಂಜ್ ಸ್ವೀಕರಿಸಿ ಗೆದ್ದಿದ್ರು ಇದೀಗ ಸ್ಯಾಂಡಲ್​ವುಡ್​​ ರಾಣಿ ಡಿಂಪಲ್​ ಕ್ವೀನ್ ರಚಿತಾರಾಮ್ ಕೂಡ ಈ ಹೊಸ ಸಾಹಸ ಮಾಡೋ ಮೂಲಕ ತಾನೂ ಫಿಟ್ನೇಸ್ ಅನ್ನೋದನ್ನ ಸಾಬೀತು ಮಾಡಿದ್ದಾರೆ.

ಸಾಮಾನ್ಯವಾಗಿ ಹೀರೋಗಳಂತೆ ಹೀರೋಯಿನ್​ಗಳು ಫಿಟ್ನೆಸ್​ಗೆ ತುಂಬಾನೇ ಮಹತ್ವ ನೀಡ್ತಾರೆ. ಅದ್ರಲ್ಲಿ ರಚಿತಾ ಕೂಡ ಒಬ್ರು. ಆಹಾರ, ನಿದ್ರೆಯ ಮೂಲಕ ದೇಹದ ಸಮತೋಲನ ಕಾಯ್ದುಕೊಳ್ಳೋ ರಚಿತಾ ಹೊಸ ಚಾಲೆಂಜ್ ಸ್ವೀಕರಿಸಿ ಗೆದಿದ್ದಾರೆ. ಜಿಮ್ ವರ್ಕೌಟ್ ಮಾಡೋ ಸೆಟ್​​ನಲ್ಲಿ ರಚಿತಾ ಒಂದು ಸುತ್ತು ತಿರುಗಿ ಬಾಟಲ್​ ಕ್ಯಾಪ್ ಹಾರಿಹೋಗುವಂತೆ ಕಾಲಿನಿಂದ ಕಿಕ್ ಮಾಡಿದ್ದಾರೆ. ಸದ್ಯ ರಚಿತಾ ಮಾಡಿರೋ ಹೊಸ ಸಾಹಸದ ಚಾಲೆಂಜ್ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಕಂಡು ಇನ್ನಷ್ಟು ನಟಿಯರಿಗೆ ಉತ್ಸಾಹ ತುಂಬಿ ಬಂದಿದೆ ಜೊತೆಗೆ ರಚ್ಚು ಫಿಟ್ನೆಸ್ ಕಂಡು ಅಭಿಮಾನಿಗಳೆಲ್ಲಾ ಹುಬ್ಬೇರಿಸುವಂತಾಗಿದೆ.ಅಂದಾಗೆ ಹಾಲಿವುಡ್​ನಿಂದ ಆರಂಭವಾದ ಚಾಲೆಂಜ್ ಆಟ ಇದೀಗ ಸ್ಯಾಂಡಲ್​ವುಡ್​​​ಗೂ ತಟ್ಟಿದೆ. ಈ ಬಾಟಲ್ ಕ್ಯಾಪ್ ಚಾಲೆಂಜ್ ಅನ್ನೋದು ಫಿಟ್ನೇಸ್ ಸಾಬೀತು ಪಡಿಸೋಕೆ ಇರುವಂತಿದೆ. ಟೇಬಲ್ ಮೇಲೆ ಬಾಟಲಿಯೊಂದನ್ನು ಇಡಬೇಕು. ಅದರ ಮುಚ್ಚಳವನ್ನು ಬಾಟಲಿ ಮೇಲೆ ಸಡಿಲವಾಗಿ ತಿರುಗಿಸದಂತೆ ಇಡಬೇಕು. ಇದಿಷ್ಟು ಆದ ಬಳಿಕ ಸ್ವಲ್ಪ ದೂರದಲ್ಲಿ ನಿಂತು ಒಂದು ಸುತ್ತು ತಿರುಗಿ ಕಾಲಿನಿಂದ ಬಾಟಲಿ ಕ್ಯಾಪನ್ನು ಒದೆಯಬೇಕು. ಆದರೆ ಈ ವೇಳೆಯಲ್ಲಿ ಬಾಟಲಿ ಕೆಳಗೆ ಬೀಳಬಾರದು ಇದಿಷ್ಟು ಸಮರ ಕಲೆಯನ್ನು ಸಲೀಸಾಗಿ ಮಾಡಿದರೆ ಈ ಚಾಲೆಂಜ್ ಗೆದ್ದಂತೆ. ಸದ್ಯ ಬಹುತೇಕ ಸ್ಟಾರ್​​ಗಳು ಈ ಚಾಲೆಂಜ್ ಸ್ವೀಕರಿಸಿ ಗೆದ್ದಿರೋ ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಳ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here