I Love you ಇದು ಆರ್.ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾರಾಮ್ ಅಭಿನಯದ ಬಹುನಿರೀಕ್ಷೆಯ ಕನ್ನಡ ಹಾಗೂ ತೆಲುಗು ಚಿತ್ರ. ನಾಳಿದ್ದು ಅಂದರೆ ಶುಕ್ರವಾರ ತೆರೆಗೆ ಬರುತ್ತಿರುವ ಐ ಲವ್ ಯು ಚಿತ್ರದ ಬಗ್ಗೆ ಕಳೆದ ಮೂರು ದಿನಗಳಿಂದ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿವೆ. ಚಿತ್ರದಲ್ಲಿ ರಚಿತಾರಾಮ್ ಯದ್ವಾತದ್ವಾ ಗ್ಲಾಮರ್ ಆಗಿ ಕಾಣಿಸಿಕೊಂಡಿರುವುದೇ ಪ್ರಮುಖ ಕಾರಣ. ಹಾಡಿನಲ್ಲಿ ರಚಿತಾರಾಮ್ ಬೋಲ್ಡ್ ಆಗಿ ಕಾಣಿಸಿರುವುದರ ಬಗ್ಗೆ  ಮೊನ್ನೆಯಷ್ಟೇ ಪ್ರಿಯಾಂಕ ಉಪೇಂದ್ರ ಮಾತನಾಡಿದ್ದರು. ಪ್ರಿಯಾಂಕಾ ಅವರು ರಚಿತಾ ರಾಮ್ ಯಾವಾಗಲೂ ಹಾಟ್ ಹಾಡಿನ ಬಗ್ಗೆ ಮಾತನಾಡುವಾಗ ಉಪೇಂದ್ರ ಅವರೇ ಈ ಹಾಡನ್ನ ನಿರ್ದೇಶನ ಮಾಡಿದ್ದಾರೆ ಎಂದು ರಚಿತಾ ಹೇಳಿಕೆ

ಕೊಡುತ್ತಿದ್ದಾರೆ ಎಂದು ಗರಂ ಆಗಿದ್ದರು ಸದ್ಯ ರಚಿತಾ ರಾಮ್ ಇದಕ್ಕೆಲ್ಲಾ ಸ್ಪಷ್ಟನೆಯನ್ನು ನೀಡಿದ್ದಾರೆ .ಪ್ರಿಯಾಂಕಾ ಉಪೇಂದ್ರ ರಚಿತಾ ರಾಮ್ ಬಗ್ಗೆ, ಅವರ ಮಾತುಗಳ ಬಗ್ಗೆ ಸಿಟ್ಟಾಗಿರುವುದಕ್ಕೆ ರಚಿತಾ ರಾಮ್ ಹೇಳಿರೋದಿಷ್ಟು. ನಾನು ಎಲ್ಲಿಯೂ ಆ ಹಾಡನ್ನು ಉಪ್ಪಿ ಸರ್ ನಿರ್ದೇಶನ ಮಾಡಿದ್ದಾರೆ ಎಂದು ಹೇಳಿಲ್ಲ. ಆ ಪಾತ್ರ ಮಾಡಬಾರದಾಗಿತ್ತು ಎಂದೂ ಹೇಳಿಲ್ಲ. ಆ ರೀತಿಯ ಹೇಳಿಕೆಗಳನ್ನು ನಾನು ಕೊಟ್ಟಿಲ್ಲ.ನಾನು ಹೇಳಿದ್ದು ಆ ಒಂದು ಸೀನ್ ಮಾಡುವಾಗ ಕಂಫರ್ಟ್ ತುಂಬಾ ಮುಖ್ಯ ಎಂದು.

ಆ ರೀತಿಯ ಕಂಫರ್ಟ್ ಉಪ್ಪಿ ಸರ್ ಕಡೆಯಿಂದ ಚೆನ್ನಾಗಿದ್ದ ಕಾರಣಕ್ಕೆ ಸುಲಭವಾಗಿ ನಟಿಸಲು ಸಾಧ್ಯವಾಯಿತು ಎಂದಿದ್ದೇನೆ ಅಷ್ಟೆ. ಇನ್ನು ಮುಂದೆ ಬೋಲ್ಡ್ ಪಾತ್ರ ಮಾಡಲ್ಲ ಎಂದಿದ್ದು ಐ ಲವ್ ಯೂ ಚಿತ್ರದ ಪಾತ್ರದ ಕುರಿತು ಅಲ್ಲ. ನನ್ನ ಫ್ಯಾನ್ಸ್ ಗೆ ಅಂತಹ ಪಾತ್ರ ಇಷ್ಟ ಆಗಲ್ಲ. ಹಾಗಾಗಿ ಇನ್ನು ಮುಂದೆ ಅಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳಲ್ಲ  ಅಷ್ಟೇ ಹೊರತು ಮತ್ತೇನಿಲ್ಲ  ಎಂದು ರಚಿತಾರಾಮ್ ಹೇಳಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here