ಸ್ಯಾಂಡಲ್ ವುಡ್ ನ ಸ್ವೀಟಿ, ಅಂದಕ್ಕೆ ಕೇರಾಫ್ ಅಡ್ರೆಸ್ ಅನ್ನುವ ಹಾಗೆ ಕಾಣುವ ನಟಿ ಎಂದರೆ ಅವರು ರಾಧಿಕಾ ಕುಮಾರ ಸ್ವಾಮಿ. ಸದ್ಯಕ್ಕೆ ರಾಧಿಕಾ ಅವರು ದಮಯಂತಿ ಸಿನಿಮಾದ ವಿಚಾರದಲ್ಲಿ ಬ್ಯುಸಿಯಾಗಿದ್ದು, ವರ್ಷಗಳ ನಂತರ ತೆರೆಯ ಮೇಲೆ ಒಂದು ವಿಭಿನ್ನ ಗೆಟೆಪ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ ರಾಧಿಕಾ ಕುಮಾರಸ್ವಾಮಿ. ಮೂರು ಭಾಷೆಗಳಲ್ಲಿ ಬರುತ್ತಿರುವ ಸಿನಿಮಾ ತನ್ನ ಟ್ರೈಲರ್, ಪೋಸ್ಟರ್ ಹಾಗೂ ರಾಧಿಕಾ ಅವರ ವಿಭಿನ್ನ ಗೆಟೆಪ್ ನಿಂದಾಗಿ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ದಮಯಂತಿ ಸಿನಿಮಾದ ಆಡಿಯೋ ಬಿಡುಗಡೆಗೆ ಈಗಾಗಲೇ ಕ್ಷಣಗಣನೆ ನಡೆಯುತ್ತಿದೆ.

ಆಡಿಯೋ ರಿಲೀಸ್ ನ ವಿಶೇಷತೆ ಏನೆಂದರೆ ಅದನ್ನು ಬಿಡುಗಡೆ ಮಾಡಲಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು. ವರ್ಷಗಳ ನಂತರ ದರ್ಶನ್ ಮತ್ತು ರಾಧಿಕಾ ಅವರು ರಲ್ಲಿ ಒಂದೇ ವೇದಿಕೆಯ ಮೇಲೆ ಕಾಣಲಿದ್ದಾರೆ. ಇಂತಹ ವಿಶೇಷ ಸಂದರ್ಭದಲ್ಲಿ ರಾಧಿಕಾ ಅವರು ಕೂಡಾ ವಿಶೇಷ ಹಾಗೂ ಆಸಕ್ತಿಕರವಾದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ರಾಧಿಕಾ ಅವರ ಮಗಳು ಶಮಿಕಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದೊಡ್ಡ ಅಭಿಮಾನಿಯಂತೆ. ಶಮಿಕಾಗೆ ದರ್ಶನ್ ಮತ್ತು ರಾಧಿಕಾ ಅವರ ಅನಾಥರು ಸಿನಿಮಾ ಬಹಳ ಇಷ್ಟವಂತೆ.

ಆಗಾಗ ಅನಾಥರು ಸಿನಿಮಾ ನೋಡುವ ಶಮಿಕಾ ಅವರ ಅಮ್ಮನಿಗೆ ದರ್ಶನ್ ಅವರ ಜೊತೆ ಸಿನಿಮಾ ಮಾಡುವಂತೆ ಹೇಳುತ್ತಾಳಂತೆ. ಮಗಳಿಗಾಗಿಯೇ ಈಗ ರಾಧಿಕಾ ಅವರು ದಮಯಂತಿ ಸಿನಿಮಾದ ಆಡಿಯೋವನ್ನು ದರ್ಶನ್ ಅವರಿಂದ ಬಿಡುಗಡೆ ಮಾಡಿಸುತ್ತಿದ್ದಾರೆ ಎನ್ನುವುದು ಕೂಡಾ ವಿಶೇಷ. ದರ್ಶನ್ ಮತ್ತು ರಾಧಿಕಾ ಅವರು ಅನಾಥರು ಮತ್ತು ಮಂಡ್ಯ ಸಿನಿಮಾದಲ್ಲಿ ಜೊತೆಯಾಗಿ ನಟಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದರು. ಅದಾದ ನಂತರ ಈ ಜೋಡಿ ಒಟ್ಟಾಗಿ ಯಾವ ಸಿನಿಮಾದಲ್ಲೂ ಕಂಡಿಲ್ಲ. ಆದರೆ ಈಗ ದಮಯಂತಿ ಆಡಿಯೋ ಬಿಡುಗಡೆ ಗೆ ಇಬ್ಬರೂ ಒಂದೆಡೆ ಸೇರಲಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here