ಸ್ಯಾಂಡಲ್ ವುಡ್ ನ ಸಿಂಡ್ರೆಲಾ ಎಂದೇ ಹೆಸರು ಗಳಿಸಿರುವ ಕನ್ನಡ ನಟಿ ರಾಧಿಕಾ ಪಂಡಿತ್. ಮದುವೆಯ ನಂತರ ಸಿನಿಮಾಗಳಿಂದ ಕೊಂಚ ದೂರವಾಗಿಯೇ ಉಳಿದ ನಟಿ ಅವರು. ರಾಕಿಂಗ್ ಸ್ಟಾರ್ ಯಶ್ ಜೊತೆ ವಿವಾಹದ ನಂತರ ಕೌಟುಂಬಿಕ ಜೀವನದ ಸವಿ ಅನುಭವಿಸುತ್ತಾ, ಮಾತೃತ್ವದ ಸವಿಯನ್ನು ಹೊಂದಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಹೀಗೆ ಅಭಿಮಾನಿಗಳ ಕಣ್ಣಿಗೆ ತೆರೆಯ ಮೇಲೆ ಕಾಣದೆ ಎರಡು ವರ್ಷಗಳೇ ಉರುಳಿ ಹೋಗಿವೆ. ಆದರೆ ಈಗ ಎರಡು ವರ್ಷಗಳ‌ ನಂತರ ಈ ನಟಿ ಮತ್ತೆ ರಜತ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಸಂತಸವನ್ನು ತರಲಿದ್ದಾರೆ.

2 ವರ್ಷಗಳ ನಂತರ ರಜತ ತೆರೆಯ ಮೇಲೆ ಮತ್ತೆ ಪ್ರತ್ಯಕ್ಷವಾಗಿ ಅಭಿಮಾನಿಗಳಿಗೆ ಸಂತಸ ನೀಡಲಿದ್ದಾರೆ ರಾಧಿಕಾ ಪಂಡಿತ್. ಇನ್ನು ಇವರು ಯಾರ ಜೊತೆ ನಟಿಸಿರುವ ಚಿತ್ರ ಬರಲಿದೆ ಎಂದರೆ, ಅದು ರಂಗಿತರಂಗ ಖ್ಯಾತಿಯ ನಟ ನಿರೂಪ್‌ ಭಂಡಾರಿ ಜೊತೆ ನಟಿಸಿರುವಂತಹ ಚಿತ್ರ ಆದಿಲಕ್ಷ್ಮಿ ಪುರಾಣ. ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಗೊಂಡಿದೆ. ನಿರೂಪ್ ಭಂಡಾರಿ ಈ ಚಿತ್ರದಲ್ಲಿ ಒಬ್ಬ ಜಬರ್ದಸ್ತ್ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆ ಶಿಸ್ತಿನ ಪೊಲೀಸ್ ಅಧಿಕಾರಿಯ ಮನಸ್ಸನ್ನು ದೋಚುವ ಹೆಣ್ಣಿನ ಪಾತ್ರದಲ್ಲಿ ರಾಧಿಕಾ ಪಂಡಿತ್ ಬಹಳ ಅಂದವಾಗಿ ಕಂಡಿದ್ದಾರೆ . ಈ ಚಿತ್ರದ ತಾರಾಗಣದಲ್ಲಿ ಒಂದು ದೊಡ್ಡ ಸ್ಟಾರ್ ಬಳಗವೇ ಇದೇ ಎಂಬುದು ಕೂಡಾ ಒಂದು ವಿಶೇಷವಾಗಿದೆ.

ಈಗಾಗಲೇ ಬಿಡುಗಡೆಯಾಗಿರು ಟ್ರೈಲರ್‌ ನಲ್ಲಿ ನಮಗೆ ನೋಡಲು ಸಿಗುವ ಆ್ಹಕ್ಷನ್ ದೃಶ್ಯಗಳು, ಪಂಚ್ ನೀಡುವ ಡೈಲಾಗ್ ಗಳು,.. ಕೊಡೋ ಡೈಲಾಗ್ಸ್, ಹಾಗೂ ಹಾಡಿನ ಸಾಲುಗಳು ಈ ಸಿನಿಮಾ ಕಥೆ ಬಗ್ಗೆ ಕುತೂಹಲ ಹೆಚ್ಚಿಸುವಂತಿದೆ. ಸಿನಿಮಾದ ಕೊನೆಯಲ್ಲಿ ಡೈಲಾಗ್ ಈಗ ಸಿಕ್ಕಾಪಟ್ಟೆ ಹೆಸರು ಮಾಡಿದೆ. . ಕಳೆದ 2016 ಡಿಸೆಂಬರ್‌ನಲ್ಲಿ ರಾಧಿಕಾ ಯಶ್‌ರ ಮದುವೆ ಅದಕ್ಕೆ ಕೇಳಿದ್ದು. ವಿವಾಹದ ನಂತರ ಆಕೆ ಚಿತ್ರರಂಗದಿಂದ ತುಸು ಬಿಡುವನ್ನು ಮಾಡಿಕೊಂಡಿದ್ದರು. ಈಗ 2017ರಲ್ಲಿ ವಿ.ಪ್ರಿಯಾ ನಿರ್ದೇಶನದ ‘ಆದಿಲಕ್ಷ್ಮಿ ಪುರಾಣ’ ಚಿತ್ರದಲ್ಲಿ ನಟಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here