ರಾಧಿಕಾ ಪಂಡಿತ್ ಅವರು ಸಾಮಾನ್ಯವಾಗಿ ಯಾವುದೇ ವಿವಾದವನ್ನು ಮೈಮೇಲೆ ಎಳೆದುಕೊಂಡವರಲ್ಲ. ಅನಾವಶ್ಯಕ ವಿಷಯಗಳಿಗೆ ಅವರು ತಲೆ ಹಾಕುವುದೂ ಇಲ್ಲ. ಆದರೆ ಇತ್ತೀಚಿನ ದಿನಗಳ ಕೆಲವು ಘಟನೆಗಳಿಂದಾಗಿ ಅವರ ಅಭಿಮಾನಿಗಳು ರಾಧಿಕಾ ಅವರ ಬಗ್ಗೆ ಅಸಮಾಧಾನ ಹೊರಹಾಕಿರುವುದು ನಿಜ. ಯಶ್ ದಂಪತಿ ತಮ್ಮ ಮುದ್ದಿನ ಮಗಳು ಐರಾಳ ಫೋಟೋ, ವಿಡಿಯೋಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹಾಗೆ ಶೇರ್ ಮಾಡಿದ ಒಂದು ವಿಡಿಯೋ ಈಗ ಅಭಿಮಾನಗಳ ಅಸಮಾಧಾನಕ್ಕೆ ಕಾರಣವಾಗಿದೆ.

ರಾಧಿಕಾ ಅವರು ಅಕ್ಟೋಬರ್ 2 ರಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಪುಟ್ಟ ಮಗಳು ಐರಾ ಜೊತೆ ಕೊಂಕಣಿಯಲ್ಲಿ ಮಾತನಾಡಿರುವ ವಿಡಿಯೋ ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ಮಗುವನ್ನು ಅಮ್ಮ ಎಲ್ಲಿದ್ದಾರೆ? ಅಪ್ಪ ಎಲ್ಲಿದ್ದಾರೆ? ಎಂದು ಕೊಂಕಣಿಯಲ್ಲಿ ಕೇಳಿದ್ದು, ಮಗು ಫೋಟೋದಲ್ಲಿ ಅದನ್ನು ಗುರುತಿಸುವ ವಿಡಿಯೋ ಅದು. ವಿಡಿಯೋ ಬಹಳ ಸುಂದರವಾಗಿ ಕಂಡರೂ, ಅಭಿಮಾನಿಗಳು ರಾಧಿಕಾ ಅವರು ಕೊಂಕಣಿಯಲ್ಲಿ ಮಾತನಾಡಿದ್ದನ್ನು ನೋಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ರಾಧಿಕಾ ಅವರು ಮಗಳ ಜೊತೆಗೆ ಕೊಂಕಣಿ ಮಾತನಾಡಿದ ವಿಡಿಯೋ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

”ಐರಾ ತನ್ನ ತಂದೆಯ ಮಾತೃಭಾಷೆ ಕನ್ನಡ ಹಾಗೂ ತಾಯಿಯ ಮಾತೃಭಾಷೆ ಕೊಂಕಣಿ ಎರಡಕ್ಕೂ ತುಂಬ ಚೆನ್ನಾಗಿಯೇ ಪ್ರತಿಕ್ರಿಯೆ ನೀಡುತ್ತಾಳೆ. ತಮ್ಮ ಮೇಲೆ ಅನುಮಾನ ಪಡುವವರಿಗೆ ಈ ಮಾತು.” ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಹಿಂದೆ ಕೂಡಾ ಯಶ್ ದಂಪತಿ ತಮ್ಮ ಮಗಳಿಗೆ ಬಂದ ಉಡುಗೊರೆ ಬಗ್ಗೆ ಕೂಡಾ ಸಂಪೂರ್ಣವಾಗಿ ಇಂಗ್ಲೀಷ್ ನಲ್ಲಿ ಮಾತನಾಡಿ ಅಭಿಮಾನಗಳ ಅಸಮಾಧಾನಕ್ಕೆ ಕಾರಣವಾಗಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here