ಯಶ್ ರಾಧಿಕಾ ದಂಪತಿಯ ಪುತ್ರಿ ಐರಾ ಬೇಬಿ ಇಡೀ ರಾಜ್ಯದಲ್ಲಿ ಎಲ್ಲರ ಪ್ರೀತಿಯನ್ನು ಗೆದ್ದಿದ್ದಾಳೆ. ಯಶ್ ಅವರ ಮುದ್ದು ಮಗಳ ಫೋಟೋಗಳನ್ನು ಅಸಂಖ್ಯಾತ ಜನರು ಇಷ್ಟ ಪಟ್ಟಿದ್ದಾರೆ. ಇಂತಹ ಮುದ್ದಾದ ಮಗುವನ್ನು ಆರೈಕೆ ಮಾಡುವ ವಿಷಯದಲ್ಲಿ ಯಶ್ ದಂಪತಿ ಸದಾ ಬಹಳ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಐರಾ ಬೇಬಿಗೆ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀಕೃಷ್ಣನ ವೇಷ ತೊಡಿಸಿ ಫೋಟೋ ಶೂಟ್ ಮಾಡಿಸಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಜನರ ಮೆಚ್ಚುಗೆಯನ್ನು ಪಡೆದಿತ್ತು‌. ಈಗ ಮತ್ತೊಂದು ವಿಷಯವನ್ನು ಅವರು ರಾಧಿಕಾ ಪಂಡಿತ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಐರಾ ಬೇಬಿಗೆ ಕಿವಿ ಚುಚ್ಚುವ ಸಂಪ್ರದಾಯವನ್ನು ಮಾಡಿಸಿದ್ದಾರೆ ಯಶ್ ದಂಪತಿ‌‌. ಪುಟ್ಟ ಮಗುವಿನ ಕಿವಿಗೆ ಬಂಗಾರದ ಓಲೆಯನ್ನು ಹಾಕಿ ಸಂಭ್ರಮಿಸಿದ್ದಾರೆ ಯಶ್ ಹಾಗೂ ರಾಧಿಕಾ ಅವರು. ಆ ಕಿವಿ ಚುಚ್ಚುವ ಸಂದರ್ಭದಲ್ಲಿ ತಂದೆ ತಾಯಿ ಆದವರು ಎಷ್ಟು ಭಾವುಕರಾಗುತ್ತಾರೆ ಎನ್ನುವ ವಿಷಯವನ್ನು ರಾಧಿಕಾ ಅವರು ತಮ್ಮ ಪೋಸ್ಟ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಗುವಿನ ಅಪ್ಪ ಅಮ್ಮ ಆದವರಿಗೆ ಆ ಸಂದರ್ಭದಲ್ಲಿ ಮಗುವಿನ ಅಳು ಕೇಳುವುದು ಕಷ್ಟ ಎಂದಿದ್ದಾರೆ ರಾಧಿಕಾ.

ಅವರು ತಮ್ಮ ಪೋಸ್ಟ್ ನಲ್ಲಿ ನಾವು ಐರಾಗೆ ಕಿವಿ ಚುಚ್ಚಿಸಿದ್ದೇವೆ. ಪೋಷಕರಾಗಿ ಇಂತಹ ವಿಷಯಗಳಿಗೆ ಸಾಕ್ಷಿಯಾಗುವುದು ಬಹಳ ಕಷ್ಟ ಎಂದಿರುವ ಅವರು, ಮಗಳು ಅಳುವಾಗ ನಮ್ಮ ಹೃದಯ ಒಡೆದಂತೆ ಭಾಸವಾಗಿತ್ತು. ಅಲ್ಲದೆ ಇದೇ ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಅವರ ಕಣ್ಣಲ್ಲಿ ಕೂಡಾ ಕಣ್ಣೀರು ನೋಡಿದೆ ಎಂದಿದ್ದಾರೆ. ಈ ಬಂಧವು ಎಷ್ಟು ಅಮೂಲ್ಯವಾದುದು ಎಂದು ನನಗೆ ಅರ್ಥವಾಗಿದೆ ಎಂದಿರುವ ಅವರು ಕಡೆಗೆ , ಭಯಪಡುವ ಅಗತ್ಯವಿಲ್ಲ ಈಗ ಅಪ್ಪ ಮಗಳು ಇಬ್ಬರೂ ಆರಾಮವಾಗಿದ್ದರೆ ಎಂದು ತಮ್ಮ ಖಾತೆಯಲ್ಲಿ ಫೋಸ್ಟ್ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here