ಕಿರು ತೆರೆಯ ನಟಿ ರಾಧಿಕಾ ರಾವ್ ಅವರ ವಿವಾಹ ನಹೋತ್ಸವವು ನಡೆದಿದ್ದು, ಅವರು ತಮ್ಮ ಗೆಳೆಯನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರು ಮೂಲದವರಾದ ರಾಧಿಕಾ ರಾವ್ ಅವರು ಬುಧವಾರ ತಮ್ಮ ಗೆಳೆಯ ಆಕರ್ಷ್ ಭಟ್ ಅವರ ಜೊತೆಗೆ ಸಪ್ತಪದಿಯನ್ನು ತುಳಿದಿದ್ದಾರೆ. ಇವರ ಮದುವೆ ಮೂಡ ಬಿದಿರೆಯಲ್ಲಿ ನಡೆದಿದೆ. ಗುರು-ನಿಶ್ಚಿಯರು ನಿರ್ಧರಿಸಿ ಮಾಡಿದ ಅದ್ದೂರಿ ವಿವಾಹ ಮಹೋತ್ಸವದಲ್ಲಿ ಆಕರ್ಷ್ ಮತ್ತು ರಾಧಿಕಾ ಅವರು ತಮ್ಮ ಹೊಸ ಜೀವನಕ್ಕೆ ಅಡಿಯನ್ನು ಇರಿಸಿದ್ದಾರೆ. ಇವರ ವಿವಾಹಕ್ಕೆ ಸ್ನೇಹಿತರು, ಸಂಬಂಧಿಕರು ಹಾಗೂ ಕಿರುತೆರೆ ಕಲಾವಿದರು ಬಂದು ವಧು ವರನಿಗೆ ಶುಭ ಹಾರೈಸಿದ್ದಾರೆ.

ರಾಧಿಕಾ ಅವರ ಪತಿ ಆಕರ್ಷ್ ಭಟ್ ಇಂಜಿನಿಯರಿಂಗ್ ಮಾಡಿದ್ದಾರೆ‌. ಅವರು ಇಂಟರ್ ನ್ಯಾಷನಲ್ ಮೆಜಿಷಿಯನ್ ಮತ್ತು ಮೈಂಡ್ ರೀಡರ್ ಕೂಡಾ ಎಂಬುದು ವಿಶೇಷ. ರಾಧಿಕಾ ಅವರಿಗೆ ಅವರ ಸ್ನೇಹಿತರ ಮೂಲಕ ಆಕರ್ಷ್ ಅವರ ಪರಿಚಿತವಾಗಿತ್ತು. ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೇಮವಾಗಿ ಇದೀಗ ವಿವಾಹ ಬಂಧನವಾಗಿ ಮಾರ್ಪಟ್ಟಿದೆ. ತಮ್ಮ ಪ್ರೇಮ ವಿಷಯವನ್ನಾಗಿ ಮನೆಯಲ್ಲಿ ತಿಳಿಸಿ, ಮನೆಯವರ ಒಪ್ಪಿಗೆಯೊಂದಿಗೆ ಕಳೆದ ಅಕ್ಟೋಬರ್‌ ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು‌.

ರಾಧಿಕಾ ತನ್ನ ನಿಶ್ಚಿತಾರ್ಥದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದರು. ರಾಧಿಕಾ ರಾವ್ ಅವರು ಮಂಗಳೂರು ಹುಡ್ಗಿ ಬೆಂಗಳೂರು ಹುಡ್ಗ ಎನ್ನುವ ಸೀರಿಯಲ್ ನಲ್ಲಿ ನಟಿಸಿದ್ದರು‌. ಆ ಧಾರಾವಾಹಿಯಲ್ಲಿ ಅವರು ಅಮೂಲ್ಯ ಎಂಬ ತಮ್ಮ ಪಾತ್ರದಿಂದಲೇ ಹೆಸರಾದವರು. ಇದೀಗ ಅವರು ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ರಾಧಾ ಪಾತ್ರಧಾರಿಯಾಗಿ ಜನರ ಮನಸ್ಸನ್ನು ಗೆದ್ದಿದ್ದಾರೆ.

 

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here