ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು, ನಟ-ನಟಿಯರು ಹಣದ ಸಹಾಯವನ್ನು ಮಾಡಿದ್ದು, ಅದೇ ಹಾದಿಯಲ್ಲಿ ನಡೆದಿರುವ ದಕ್ಷಿಣ ಭಾರತದ ಖ್ಯಾತ ನೃತ್ಯ ನಿರ್ದೇಶಕ, ನಟ, ನಿರ್ಮಾಪಕ ರಾಘವ ಲಾರೆನ್ಸ್ ಅವರು ತಮಗೆ ತಮ್ಮ ಮುಂದಿನ ಸಿನಿಮಾಕ್ಕಾಗಿ ಮುಂಗಡವಾಗಿ ಬಂದಿದ್ದ ಮೂರು ಕೋಟಿ ಹಣವನ್ನು ಕೋವಿಡ್-19 ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ. ತಮ್ಮ ಚಾರಿಟೆಬಲ್ ಟ್ರಸ್ಟ್ ಮೂಲಕ ಈಗಾಗಲೇ ಅನೇಕ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿರುವ ಅವರು ಇದೀಗ ಕೊರೊನಾ ವಿರುದ್ಧ ಹೋರಾಟಕ್ಕೆ ಕೂಡಾ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ, ಹಾಯ್ ಸ್ನೇಹಿತರೇ ಮತ್ತು ಅಭಿಮಾನಿಗಳೇ, ನಿಮ್ಮೆಲ್ಲರೊಂದಿಗೆ ಒಂದು ಸಂತೋಷದ ಸುದ್ದಿ ಹಂಚಿಕೊಳ್ಳಲು ನಾನು ಬಯಸುತ್ತೇನೆ. ನನ್ನ ಮುಂದಿನ ಪ್ರಾಜೆಕ್ಟ್ಗಳಲ್ಲಿ ಒಂದು ನನ್ನ ಥಲೈವರ್ (ರಜನಿಕಾಂತ್) ಅವರ ಚಲನಚಿತ್ರ ಚಂದ್ರಮುಖಿ 2, ಪಿ. ವಾಸು ಸರ್ ನಿರ್ದೇಶಿನವಿರುವ ಮತ್ತು ನನ್ನ ಅದೃಷ್ಟದ ನಿರ್ಮಾಪಕ ಸೂರ್ಯ ಪಿಕ್ಚರ್ಸ್ ನ ಕಲಾನಿತಿ ಮಾರನ್ ಸರ್ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಥಲೈವರ್ ಅವರ ಅನುಮತಿ ಮತ್ತು ಆಶೀರ್ವಾದದೊಂದಿಗೆ ನಟಿಸಲು ಅವಕಾಶ ದೊರೆತಿರುವುದಕ್ಕೆ ನಾನು ತುಂಬಾ ಅದೃಷ್ಟಶಾಲಿ.
ಅಲ್ಲದೆ ಈ ಸಿನಿಮಾಕ್ಕಾಗಿ ನಾನು ಪಡೆಯುತ್ತಿರುವ ಮುಂಗಡದೊಂದಿಗೆ, ಕೊರೊನಾವೈರಸ್ ಪರಿಹಾರ ನಿಧಿಗೆ 3 ಕೋಟಿ ಕೊಡುಗೆ ನೀಡುವುದಾಗಿ ನಾನು ವಿನಮ್ರವಾಗಿ ಪ್ರತಿಜ್ಞೆ ಮಾಡುತ್ತೇನೆ.

ಪಿಎಂ – ಕೇರ್ಸ್ ನಿಧಿಗೆ 50 ಲಕ್ಷ, ಸಿಎಂ ಪರಿಹಾರ ನಿಧಿಗೆ (ತಮಿಳುನಾಡು) 50 ಲಕ್ಷ, ಫೆಫ್ಸಿ ಯೂನಿಯನ್‌ಗೆ 50 ಲಕ್ಷ ಮತ್ತು ನನ್ನ ನರ್ತಕರ ಸಂಘಕ್ಕೆ 50 ಲಕ್ಷ ಮತ್ತು ನನ್ನ ದೈಹಿಕ ಸಾಮರ್ಥ್ಯದ ಹುಡುಗರಿಗೆ 25 ಲಕ್ಷ ಮತ್ತು 75 ಲಕ್ಷ ದಿನಗೂಲಿ ಕಾರ್ಮಿಕರಿಗೆ ದಿನನಿತ್ಯದ ಕಾರ್ಮಿಕರಿಗೆ ನೀಡಲು ಬಯಸುತ್ತೇನೆ. ನನ್ನ ಜನ್ಮಸ್ಥಳವಾದ ರಾಯಪುರಂ, ದೇಸಿಯಾನಗರ ಜನರಿಗೆ ಲಕ್ಷ ರೂ. ಎಲ್ಲಾ ಆಹಾರ ಅಗತ್ಯ ವಸ್ತುಗಳನ್ನು ಸರಿಯಾದ ಸುರಕ್ಷತೆಯೊಂದಿಗೆ ಪೊಲೀಸರ ಸಹಾಯದಿಂದ ತಲುಪಿಸಲಾಗುವುದು. ಸೇವೆಯೇ ದೇವರು ಎಂದು ಬರೆದುಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here