ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಎಂದರೆ ಒಂದು ವಿಶೇಷ ಗೌರವ ಇದೆ. ಕಲಾಸೇವೆಗಾಗಿಯೇ ಇಡೀ ಕುಟುಂಬ ತೊಡಗಿಸಿಕೊಂಡಿದೆ.ಕನ್ನಡ ಚಿತ್ರರಂಗವನ್ನು ಉನ್ನತಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಕೂಡ ದೊಡ್ಮನೆಗೆ ಸಲ್ಲುತ್ತದೆ. ಅಂದು ಅಣ್ಣಾವ್ರು ಬೆಳೆಸಿದ ಕನ್ನಡ ಚಿತ್ರರಂಗ ಇಂದು ವಿಶ್ವಾದ್ಯಂತ ಹೆಸರು ಮಾಡಿದೆ. ಕನ್ನಡಿಗರ ಆರಾಧ್ಯದೈವ ಆಗಿದ್ದ ವರನಟ ಡಾ.ರಾಜ್ ಕುಮಾರ್ ಅವರು ಇಡೀ ಜೀವನದುದ್ದಕ್ಕೂ ಚಿತ್ರರಂಗ ಹಾಗೂ ಕನ್ನಡನಾಡಿಗಾಗಿಯೇ ಸೇವೆ ಸಲ್ಲಿಸಿದ್ದರು. ಇನ್ನು ಅಣ್ಣಾವ್ರ ಮಕ್ಕಳಲ್ಲೂ ಸಹ ಅಣ್ಣಾವ್ರ ಗುಣಗಳೇ ಮೈಗೂಡಿಕೊಂಡಿವೆ. ಅಣ್ಣಾವ್ರ ಮೊದಲ ಮಗ ಶಿವರಾಜಕುಮಾರ್ ಕನ್ನಡ ಚಿತ್ರರಂಗ ದಲ್ಲಿ ಕಳೆದ ಮೂವತ್ತೆರಡು ವರ್ಷಗಳಿಂದ ನಿರಂತರವಾಗಿ ಚಿತ್ರಗಳಲ್ಲಿ ಅಭಿನಯಿಸಿ ಜನಮಾನಸದಲ್ಲಿ ಪ್ರೀತಿ ಗಳಿಸಿದ್ದಾರೆ‌.

ಇನ್ನು ಮೂರನೇ ಪುತ್ರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇಂದಿನ ಯುವಜನತೆಯ ಹಾಟ್ ಫೇವರೇಟ್ ಹೀರೋ . ಎರಡನೇ ಪುತ್ರರಾದ  ರಾಘವೇಂದ್ರ ರಾಜ್‍ಕುಮಾರ್ ಅವರು ಸಹ ನಂಜುಂಡಿ ಕಲ್ಯಾಣ , ಅನುಕೂಲಕ್ಕೊಬ್ಬ ಗಂಡ,ಗಜಪತಿ ಗರ್ವಭಂಗ , ಕಲ್ಯಾಣ ಮಂಟಪ ,ಟುವ್ವಿ ಟುವ್ವಿ ಟುವ್ವಿ ಅಂತಹ ಸೂಪರ್ ಹಿಟ್ ಚಲನಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರಿಗೆ ಚಿರಪರಿಚಿತ ನಟರಾಗಿದ್ದಾರೆ. ಆದರೆ ಮಧ್ಯದಲ್ಲಿ ಸಿನಿಮಾ ಹಿಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ರಾಘವೇಂದ್ರ ರಾಜ್‍ಕುಮಾರ್ ಅವರು ಸಿನಿಮಾಗಳಲ್ಲಿ ಅಭಿನಯಿಸುವುದು ನಿಲ್ಲಿಸಿದ್ದರು.ನಂತರದ ಕೆಲವು ದಿನಗಳಲ್ಲಿ ತಮ್ಮ ಪುತ್ರ ವಿನಯ್ ರಾಜ್‍ಕುಮಾರ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ರಾಘಣ್ಣ ಈಗ ಅಭಿಮಾನಿಗಳ ಆಸೆಯಂತೆ ಮತ್ತೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ‌. ರಾಘವೇಂದ್ರ ರಾಜ್‍ಕುಮಾರ್ ಅವರು ಇದೀಗ ಮತ್ತೆ ಹೊಸ ಹಾಗೂ ವಿಭಿನ್ನ ಲುಕ್ ನಲ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ರಾಘಣ್ಣ ಅವರ ಹೊಸ ಸಿನಿಮಾದ ಹೆಸರು ಅಮ್ಮನ ಮನೆ. ನಿಖಿಲ್ ಮಂಜು ಅವರು ನಿರ್ದೇಶನ ಮಾಡುತ್ತಿರುವ ಅಮ್ಮನ ಮನೆ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ನಟಿಸುತ್ತಿದ್ದು ಈಗಾಗಲೇ ಅಮ್ಮನ ಮನೆ ಚಿತ್ರದ ಫೋಟೋ ಶೂಟ್ ಮುಕ್ತಾಯವಾಗಿದ್ದು ರಾಘವೇಂದ್ರ ರಾಜ್‍ಕುಮಾರ್ ಅವರ ನ್ಯೂ ಲುಕ್ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.ರಾಘವೇಂದ್ರ ರಾಜ್‍ಕುಮಾರ್ ಅಭಿನಯದ ಅಮ್ಮನ ಮನೆ ಚಿತ್ರವು ಆಗಸ್ಟ್15 ರಂದು ಮುಹೂರ್ತ ಆಗುತ್ತದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ 15 ರಾಘವೇಂದ್ರ ರಾಜ್‍ಕುಮಾರ್ ಅವರ ಜನ್ಮದಿನ ಇರುವುದರಿಂದ ಚಿತ್ರದ ಮುಹೂರ್ತ ಅಂದೇ ನಡೆಯಲಿದೆ.ಆತ್ಮಶ್ರೀ ಮತ್ತು ಆರ್ ಎಸ್ ಕುಮಾರ್ ಎನ್ನುವವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here