ನಿನ್ನೆಯಿಂದ ದಿ ಕ್ಯಾರಾವಾನ್ ನಿಯತ ಕಾಲಿಕೆ ಹೊರಡಿಸಿದ ದಿ ಎಡ್ಡಿ ಡೈರೀಸ್ ವರದಿಯಿಂದ ರಾಜಕೀಯ ವಲಯದಲ್ಲಿ ಒಂದು ಸಂಚಲನವು ಸೃಷ್ಟಿಯಾಗಿತದೆ ಹಾಗೂ ಎಲ್ಲರಿಗೂ ಇದೊಂದು ಕುತೂಹಲ ಹಾಗೂ ರೋಚಕ ವಿಷಯವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರು ಈ ಆರೋಪದ ಬಗ್ಗೆ ಮಾತನಾಡುತ್ತಾ ಈಗ ಪ್ರಚಾರವಾಗಿರುವ ಈ ವಿಷಯ ಸಂಚಕನವಲ್ಲ ಬದಲಿಗೆ ಇದು ಜೋಕ್ ಆಫ್ ದಿ ಇಯರ್. ಹಿಟ್ ಅಂಡ್ ರನ್ ಥರ ಇದು ಎಂದು ಬಹಳ ಕೂಲಾಗಿ ಪ್ರತಿಕ್ರಿಯೆ ನೋಡುತ್ತಾ, ಡೈರಿ ಬರೆಯುವ ಅಭ್ಯಾಸವೇ ಯಡಿಯೂರಪ್ಪ ಅವರಿಗೆ ಇಲ್ಲ ಎಂಬ ವಿಷಯವನ್ನು ಅವರು ತಿಳಿಸಿದ್ದಾರೆ.

ಬಿ.ವೈ. ರಾಘವೇಂದ್ರ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ, ಈ ಹಿಂದೆ ಕಾಂಗ್ರೆಸ್ ನ ನಾಯಕರು ಟೆಂಪಲ್ ರನ್ ಮಾಡಿ ಡ್ರಾಮಾ ಮಾಡುವ ಪ್ರಯತ್ನಗಳಿಗೆ ಕೈ ಹಾಕಿದ್ದರು. ವಿರೋಧ ಪಕ್ಷದವರಿಗೆ ಕನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಹಾಕುವುದಕ್ಕೆ ಬೇರಾವುದೇ ಮಾರ್ಗಗಳು ಇಲ್ಲ. ಆದ್ದರಿಂದಲೇ ಯಡಿಯೂರಪ್ಪನವರ ಮೇಲೆ ಈಗ ಈ ರೀತಿ ಸುಳ್ಳು ಆರೋಪವನ್ನು ಮಾಡುಲು ಮುಂದಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಅದೇ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಕೂಡಾ ಹಂಚಿಕೊಂಡಿದ್ದಾರೆ. ಪ್ರತೀ ಪೇಜಿಗೂ ಸೈನ್ ಹಾಕಿ ಭಗವದ್ಗೀತೆಯಲ್ಲಿ ಇಡೋ ಅಗತ್ಯವೇನಿತ್ತು? ಎಂದು ಅವರು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪನವರ ಹಸ್ತಾಕ್ಷರವನ್ನು ಸೃಷ್ಟಿ ಮಾಡಿ ಈ ರೀತಿಯ ಕೃತ್ಯವನ್ನು ಮಾಡಿದ್ದಾರೆ ಎಂದು ಅವರು ದೂರಿದ್ದಾರೆ. ಕಾಂಗ್ರೆಸ್‍ನವರು ಈಗ ವಾಮ ಮಾರ್ಗದ ಮೂಲಕ ಮುನ್ನಡಿ ಇಟ್ಟಿದ್ದಾರೆ. ಡೈರಿ 2009ರಲ್ಲಿ ಈ ಪುಣ್ಯಾತ್ಮರಿಗೆ ಸಿಕ್ಕಿದೆ ಅಂದಮೇಲೆ ಇದೂವರೆಗೂ ಅದನ್ನ ಇಟ್ಟುಕೊಂಡು ಏನ್ ಮಾಡಿದರು? ಕಳೆದ ಐದು ವರ್ಷ ಸಿದ್ದರಾಮಯ್ಯನವರ ಸರ್ಕಾರ ಇದನ್ನು ಗಮನಿಸದೆ ನಿದ್ದೆ ಮಾಡ್ತಾ ಇತ್ತಾ ಎಂದು ಅವರು ಟೀಕೆ ಮಾಡಿದ್ದಾರೆ. 2009ರಲ್ಲಿ ಯಡಿಯೂರಪ್ಪ ಅವರ ಮೇಲೆ ಯಾವ ಪ್ರಕರಣ ಇತ್ತು? ಎಂದು ವಿರೋಧ ಪಕ್ಷಗಳ ಮುಂದೆ ಪ್ರಶ್ನೆ ಗಳನ್ನು ಹಾಕಿದ್ದಾರೆ. ಈ ಎಲ್ಲಾ ಕೆಲಸಗಳಿಂದ ಲೋಕಸಭೆ ಚುನಾವಣೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಈ ವಿಷಯದ ಕುರಿತಾಗಿ ಸರಿಯಾದ ತನಿಖೆ ನಡೆಸಬೇಕಾದ ಅಗತ್ಯವಿದೆ. ಕಾಂಗ್ರೆಸ್ ತನ್ನ ಯೋಗ್ಯತೆ ಮರೆತು ವಾಮಮಾರ್ಗದಲ್ಲಿ ನಡೆದು ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನ ಮಾಡುತ್ತಿದೆ ಎಂದು ಅವರು ತಮ್ಮ ಕೋಪವನ್ನು ಹೊರಹಾಕಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here