ಕನ್ನಡ ಚಿತ್ರರಂಗದ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅವರಿಗೆ ಅವರ ಅಭಿಮಾನಿಗಳು ಸಾಕಷ್ಟು ಬಿರುದುಗಳನ್ನು ನೀಡಿ ಸನ್ಮಾನಿಸಿದ್ದಾರೆ.ಹಲವಾರು ಬಿರುದುಗಳಿಂದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್ ಅವರನ್ನು ಕರೆಯುವ ಅಭಿಮಾನಿಗಳು ಆಗಾಗ್ಗೆ ಹೊಸ ಹೊಸ ಬಿರುದುಗಳನ್ನು ನೀಡುತ್ತಲೇ ಇರುತ್ತಾರೆ. ಇದೀಗ ಡಾ.ಶಿವರಾಜಕುಮಾರ್ ಅವರಿಗೆ ಕನ್ನಡ ಚಿತ್ರರಂಗದ ನಿರ್ದೇಶಕರೊಬ್ಬರು ಹೊಸ ಬಿರುದು ನೀಡಿ ಗೌರವಿಸಿದ್ದಾರೆ. ಯಾರು ಆ ನಿರ್ದೇಶಕ ಅಂತೀರ. ಅವರೇ ರಘರಾಮ್ . ಜೋಗಿ ಚಿತ್ರದ ಯೋಗೀಶ ಪಾತ್ರದ ಮೂಲಕ ಕನ್ನಡ ಸಿನಿರಸಿಕರಿಗೆ ಮನೆಮಾತಾದ ರಘುರಾಮ್ ಅವರು ನಂತರದ ದಿನಗಳಲ್ಲಿ ಹಲವು ಕನ್ನಡ ಚಿತ್ರಗಳನ್ನು ನಿರ್ದೇಶನ ಮಾಡಿದರು.

ಡಾ ಶಿವರಾಜಕುಮಾರ್ ಮತ್ತು ಪ್ರೇಮ್ ಜೊತೆಯಾಗಿ ನಟಿಸಿದ್ದ ವಿಶ್ವದ ಏಳು ಅದ್ಬುತವಾದ ಜಾಗಗಳಲ್ಲಿ ಚಿತ್ರೀಕರಣ ಮಾಡಿದ್ದ ಚೆಲುವೆಯೇ ನಿನ್ನೇ ನೋಡಲು ಎಂಬ ಚಿತ್ರವನ್ನು ಸಹ ಡಾ.ಶಿವರಾಜಕುಮಾರ್ ಅವರಿಗಾಗಿ ನಿರ್ದೇಶನ ಮಾಡಿದ್ದರು ರಘುರಾಮ್ . ಅಪ್ಪಟ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ಅಭಿಮಾನಿಯಾಗಿರುವ ರಘುರಾಮ್ ಅವರಿಗೆ ಶಿವರಾಜಕುಮಾರ್ ಎಂದರೂ ಬಹಳ ಅಚ್ಚುಮೆಚ್ಚು. ಶಿವರಾಜಕುಮಾರ್ ಅವರ ಸರಳತೆ ಬಗ್ಗೆ ಹೆಚ್ಚಾಗಿ ಮಾತನಾಡುವ ರಘುರಾಮ್ ಅವರು ಇದೀಗ ಶಿವರಾಜಕುಮಾರ್ ಅವರಿಗೆ ಹೊಸ ಬಿರುದು ನೀಡಿದ್ದಾರೆ.ಅದ್ಯಾವುದು ಆ ಬಿರುದು ಅಂತೀರ. ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಸರಳ ಸಜ್ಜನಿಕೆಯ ನಟ ಎಂದೇ ಕರೆದುಕೊಳ್ಳುವ ಶಿವಣ್ಣ ಅವರಿಗೆ ರಘುರಾಮ್

 

ಅವರು ” ವಿನಯವಂತಿಕೆಯ ರಾಯಭಾರಿ ” ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ.ಈ ‌ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ನಿರ್ದೇಶಕ ಡಿ ಪಿ ರಘುರಾಮ್ ಅವರು‌ ಹ್ಯಾಟ್ರಿಕ್ ಹೀರೋ ,ಕರುನಾಡ ಚಕ್ರವರ್ತಿ ,ಸೆಂಚುರಿ ಸ್ಟಾರ್ ಜೊತೆಗೆ ನನ್ನದೊಂದು ಅಭಿಮಾನದ ಪುಟ್ಟ ಬಿರುದು ವಿನಯವಂತಿಕೆಯ ರಾಯಭಾರಿ ಎಂದು ಶಿವಣ್ಣ ಅವರಿಗೆ ಅಭಿಮಾನ ತೋರಿಸಿದ್ದಾರೆ.ಸದ್ಯ ಡಿ ಪಿ ರಘುರಾಮ್ ಅವರು ಫಸ್ಟ್ ರಾಂಕ್ ರಾಜು ಖ್ಯಾತಿಯ ರಘುನಂದನ್ ಅಭಿನಯದ ಮಿಸ್ಸಿಂಗ್ ಬಾಯ್ ಚಿತ್ರವನ್ನು ‌ನಿರ್ದೇಶನ ಮಾಡುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here