ಜಸ್ಥಾನ ರಾಯಲ್ಸ್​ ಮತ್ತು ಕಿಂಗ್ಸ್​ ಇಲೆವೆನ್​ ಪಂಜಾಬ್​ ನಡುವೆ ಇಂದೋರ್​ನಲ್ಲಿ ಭಾನುವಾರ ನಡೆದ ಐಪಿಎಲ್​ ಟಿ20 ಪಂದ್ಯದಲ್ಲಿ ಪಂಜಾಬ್​ ತಂಡ ಕನ್ನಡಿಗ ಕೆ.ಎಲ್​. ರಾಹುಲ್​ (84) ಅವರ ಭರ್ಜರಿ ಆಟದ ನೆರವಿನೊಂದಿಗೆ ಗೆಲವು ಸಾಧಿಸಿದೆ.
ಪಂಜಾಬ್​ ಪರ ನಿಧಾನವಾಗಿಯಾದರೂ, ಅದ್ಭುತವಾದ ಇನ್ನಿಂಗ್ಸ್​ ಕಟ್ಟಿದ ಆರಂಭಿಕ ಕೆ.ಎಲ್​ ರಾಹುಲ್​ 18.4 ಓವರ್​ಗಳಲ್ಲೇ ಪಂದ್ಯವನ್ನು ಗೆಲುವಿನ ತಡ ಸೇರಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್​ ಮಾಡಿದ್ದ ರಾಜಸ್ಥಾನ ತಂಡ 20 ಓವರ್​ಗಳಲ್ಲಿ 9 ವಿಕೆಟ್​ಗಳನ್ನು ಕಳೆದುಕೊಂಡು 152 ರನ್​ಗಳನ್ನು ಗಳಿಸಿತ್ತು. ಆರಂಭದಲ್ಲಿ ಡಿಜೆಎಂ ಶಾರ್ಟ್​ ಹಾಗೂ ನಾಯಕ ಅಜಿಂಕ್ಯಾ ರಹಾನೆ ಅವರ ವಿಕೆಟ್​ಗಳು ಒಂದರ ಹಿಂದೆ ಒಂದರಂತೆ ಉರುಳಿದರೂ ಬಟ್ಲರ್​ ಅವರ 51 (39) ರನ್​ಗಳ ಸಮಯೋಚಿತ ಆಟ ತಂಡಕ್ಕೆ ಆಸರೆಯಾಯಿತು. ಬಟ್ಲರ್​ ಅವರಿಗೆ ಎಸ್​.ವಿ. ಸ್ಯಾಮ್ಸನ್​ (28) ಉತ್ತಮ ಸಾಥ್​ ನೀಡಿದರು.

ಇದರ ನಂತರದಲ್ಲೂ ವಿಕೆಟ್​ಗಳನ್ನು ಕಳೆದುಕೊಳ್ಳುತ್ತಲೇ ಸಾಗಿದ ರಾಜಸ್ಥಾನ ತಂಡಕ್ಕೆ ಕೊನೆ ಕ್ಷಣಗಳಲ್ಲಿ ಎಸ್​ ಗೋಪಾಲ್​ (24) ಮಿಂಚಿನಾಟದ ಮೂಲಕ ನೆರವಾದರು. ಅಂತಿಮವಾಗಿ 20 ಓವರ್​ಗಳಲ್ಲಿ ರಾಜಸ್ಥಾನ ತಂಡ 152 ರನ್​ಗಳನ್ನಷ್ಟೇ ಗಳಿಸಲು ಶಕ್ತವಾಯಿತು.ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಪರ ಆರಂಭಿಕರಾದ ಕನ್ನಡಿಗ ಕೆ ಎಲ್​ ರಾಹುಲ್​ 84(54) ರನ್​ಗಳ ಮೂಲಕ ನೆರವಾದರು.

ಮೊದಲಿಗೆ ನಿಧಾನಗತಿಯಲ್ಲಿ ಇನ್ನಿಂಗ್ಸ್​ ಆರಂಭಿಸಿದ ರಾಹುಲ್​ ಕೊನೆ ಕೊನೆಯಲ್ಲಿ ಅಬ್ಬರಿಸಿದರು. ರಾಹುಲ್​ ಅವರ ಜತೆಗೆ ಸ್ಕ್ರೀಸ್​ಗೆ ಇಳಿದಿದ್ದ ಗೇಲ್​ ನಿರಾಸೆ ಮೂಡಿಸಿದರು. 11 ಎಸೆತಗಳನ್ನು ಎದುರಿಸಿದ ಅವರು 8 ರನ್​ಗಳನ್ನಷ್ಟೇ ಗಳಿಸಿ ಔಟಾದರು. ಅವರ ಹಿಂದೆಯೇ ಅಗರ್ವಾಲ್​ ಕೂಡ ಔಟಾಗಿ ಪೆವಿಲಿಯನ್​ ಸೇರಿದರು. ನಂತರ ಬಂದ ನಾಯರ್,

ರಾಹುಲ್​ಗೆ ಸಾಥ್​ ನೀಡಿದರಾದರೂ, 31 ಗಳಿಸಿ ಔಟಾದರು. ಕಡೆಗೆ ಬಂದ ಎಂಪಿ ಸ್ಟೋನೀಸ್​ 23(16) ಅಬ್ಬರದಾಟದ ಮೂಲಕ ತಂಡದ ಗೆಲುವಿಗೆ ಸಹಕರಿಸಿದರು.ಅಂತಿಮವಾಗಿ ಇನ್ನೂ 8 ಬಾಲ್​ಗಳಿರುವಾಗಲೇ ಪಂಜಾಬ್​ ತಂಡ ಗೆಲುವಿನ ನಗೆ ಬೀರಿತು.ಗೆಲುವನ್ನು ಸಂಭ್ರಮಿಸಿದ ಪಂಜಾಬ್ ತಂಡದ ವೀಡಿಯೋ ನೋಡಿ..????????????

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here