ರಾಹುಲ್ ದ್ರಾವಿಡ್ ಅವರಿಗೆ ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗವಿದೆ.ರಾಹುಲ್ ದ್ರಾವಿಡ್ ಅವರ ವ್ಯಕ್ತಿತ್ವ ಕೂಡ ಬಹಳ ಮೃದು ಸ್ವಭಾವದ್ದು ಇಂತಹ ಅಪರೂಪದ ವ್ಯಕ್ತಿತ್ವದ ರಾಹುಲ್ ದ್ರಾವಿಡ್ ಗೆ ತವರು ನೆಲ ಬೆಂಗಳೂರಿನಲ್ಲಿ ಅಭಿಮಾನಿಗಳ ಸಂಖ್ಯೆಗೆ ಲೆಕ್ಕವಿಲ್ಲ.

ರಾಹುಲ್ ದ್ರಾವಿಡ್ ಅವರ ಜನ್ಮದಿನದಂದು ಬೆಂಗಳೂರಿನ ರಾಹುಲ್ ದ್ರಾವಿಡ್ ಫ್ಯಾನ್ಸ್ ಅಸೋಸಿಯೇಷನ್ ತಂಡ ತಮ್ಮ ಕೈಲಾದ ಹಣವನ್ನು ಸೇರಿಸಿ ವೈಟ್ ಫೀಲ್ಡ್ ನಲ್ಲಿ ಇರುವ ದಿವ್ಯ ಜ್ಯೋತಿ ಅಂಧರ ಸೇವಾ ಸಂಸ್ಥಗೆ ಸುಮಾರು 18000 ಸಾವಿರ ರೂಗಳ ನೆರವು ನೀಡುವ ಮೂಲಕ ನಿಜವಾದ ಅಭಿಮಾನ ತೋರಿದ್ದಾರೆ.

ಈಗಿನ ಯುವ ಜನತೆ ಸಿಕ್ಕಿದ ಹಣವನ್ನು ಬರ್ತಡೇ ನೆಪದಲ್ಲಿ ಮೋಜುಮಸ್ತಿಗೆ ಬಳಸಿ ವೆಚ್ಚ ಮಾಡುತ್ತಿರುವಾಗ ತಮ್ಮ ಹಣವನ್ನು ಸಂಗ್ರಹಿಸಿ ಅಂಧ ಮಕ್ಕಳ ಸಂಸ್ಥೆಗೆ ಹಣ ಸಹಾಯ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ರಾಹುಲ್ ದ್ರಾವಿಡ್ ಅಭಿಮಾನಿಗಳ ಕಾರ್ಯಕ್ಕೆ ನಾವು ಅಭಿನಂದಿಸಬೇಕು

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here