ನಮ್ಮ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ದಿ ವಾಲ್ ಎಂದೇ ಕರೆಸಿಕೊಳ್ಳುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ತಮ್ಮ ಸೌಮ್ಯ ಮತ್ತು ಪ್ರಾಮಾಣಿಕ ಸ್ವಭಾವದಿಂದಲೇ ಖ್ಯಾತಿಗಳಿಸಿದವರು ಇದೀಗ ಅಂತಹುದೇ ಪ್ರಾಮಾಣಿಕತೆಯಿಂದ ರಾಹುಲ್ ದ್ರಾವಿಡ್ ಇದೀಗ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಣ ನೋಡಿದರೆ ಹೆಣ ಕೂಡ ಬಾಯಿ ಬಿಡುತ್ತಂತೆ.. ಎಂಬ ಮಾತಿದೆ. ಆದರೆ ನಮ್ಮ ರಾಹುಲ್ ದ್ರಾವಿಡ್ ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದ್ದು ತಮ್ಮನ್ನೇ ಅರಿಸಿಕೊಂಡ ಬಂದ ಹಣವನ್ನು ಬೇಡ ಎಂದು ಹೇಳುವ ಮೂಲಕ ದೊಡ್ಡತನ ಮೆರೆದಿದ್ದಾರೆ.
ಇತ್ತೀಚಿಗಷ್ಟೇ ಅಂಡರ್ 19 ರ ವಿಶ್ವಕಪ್ ಗೆದ್ದ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದ ಅಂಡರ್ 19 ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಪ್ರಶಸ್ತಿ ಘೋಷಣೆ ಮಾಡಿತ್ತು. ಅದರಂತೆ ಕೋಚ್ ದ್ರಾವಿಡ್ ಗೆ 50 ಲಕ್ಷ ಅವರ ಸಹಾಯಕ ಕೋಚ್ ಗಳಿಗೆ ತಲಾ 20 ಲಕ್ಷ ಘೋಷಣೆ ಮಾಡಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೋಟ್ ರಾಹುಲ್ ದ್ರಾವಿಡ್, ತಂಡದ ಯಶಸ್ಸಿನಲ್ಲಿ ಎಲ್ಲರ ಪಾತ್ರ ಪ್ರಮುಖವಾದದ್ದು. ಹೀಗಾಗಿ ಎಲ್ಲರಿಗೂ ಸಮಾನ ಪುರಸ್ಕಾರ ನೀಡಬೇಕು. ನಗದು ಬಹುಮಾನ ಎಲ್ಲರಿಗೂ ಒಂದೇ ರೀತಿ ಇರಬೇಕು. ತಮಗೆ ನೀಡುವ ನಗದು ಬಹುಮಾನದ ಮೊತ್ತವನ್ನು ಕಡಿಮೆ ಮಾಡಿ. ತಮ್ಮನ್ನು ಹಾಗೂ ಕೋಚಿಂಗ್ ಬಳಗದ ಸದಸ್ಯರನ್ನು ಸಮಾನವಾಗಿ ಪರಿಗಣಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು.
ಅಷ್ಟು ಮಾತ್ರವಲ್ಲದೇ ಬಿಸಿಸಿಐ ತಮಗೆ ಘೋಷಣೆ ಮಾಡಿದ್ದ 50 ಲಕ್ಷ ರೂ.ಗಳನ್ನೂ ಕೂಡ ನಿರಾಕರಿಸಿದ್ದರು. ಇದೀಗ ರಾಹುಲ್ ದ್ರಾವಿಡ್ ಒತ್ತಾಯಕ್ಕೆ ಮಣಿದಿರುವ ಬಿಸಿಸಿಐ ತಂಡದ ಎಲ್ಲ ಸದಸ್ಯರಿಗೂ ತಲಾ 25 ಲಕ್ಷ ರೂ. ಘೋಷಣೆ ಮಾಡಿದೆ. ದ್ರಾವಿಡ್ ಅವರ ನಿಲುವಿನ ಬಗ್ಗೆ ಬಿಸಿಸಿಐ ಸದಸ್ಯರು ಅಚ್ಚರಿ ವ್ಯಕ್ತಪಡಿಸಿದ್ದರೂ, ಇದೀಗ ಅವರ ಮನವಿಯನ್ನು ಒಪ್ಪಿಕೊಂಡಿದೆ.
ಈ ಹಿಂದೆ ಭಾರತದ ಅಂಡರ್-19 ತಂಡ ವಿಶ್ವಕಪ್ ಜಯಿಸಿದ ಬೆನ್ನಲ್ಲೇ ಬಿಸಿಸಿಐ ತಂಡದ ಕೋಚ್ ರಾಹುಲ್ ದ್ರಾವಿಡ್‌ಗೆ 50 ಲಕ್ಷ ರೂ, ಆಟಗಾರರಿಗೆ 30 ಲಕ್ಷ ರೂ. ಮತ್ತು ಕೋಚಿಂಗ್ ಸಿಬ್ಬಂದಿಗಳಿಗೆ ತಲಾ 20 ಲಕ್ಷ ರೂ. ನಗದು ಬಹುಮಾನ ಪ್ರಕಟಿಸಿತ್ತು.
ರಾಹುಲ್ ದ್ರಾವಿಡ್ ಅವರ ಔದಾರ್ಯತೆಯಿಂದಾಗಿ ಸಹಾಯಕ ಕೋಚ್ ಗಳು ಇದೀಗ ತಲಾ 5 ಲಕ್ಷ ರೂ. ನಗದು ಪುರಸ್ಕಾರವನ್ನು ಹೆಚ್ಚುವರಿಯಾಗಿ ಪಡೆಯುವಂತಾಗಿದೆ.ರಾಹುಲ್ ದ್ರಾವಿಡ್ ಅವರಿಂದಾಗಿ ಸಹಾಯಕರಿಗೆ ಈ ಗೌರವ ದೊರಕಿದಂತಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here