ಕಾಂಗ್ರೆಸ್ ಸಂಸದ, ರಾಷ್ಟ್ರೀಯ ಕಾಂಗ್ರೆಸ್ ನ ಯುವ ನಾಯಕ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಆಗಾಗ ಹಲವು ವಿಚಾರಗಳಲ್ಲಿ ಅನೇಕ ಆರೋಪಗಳನ್ನು ಮಾಡುತ್ತಲೇ ಇರುತ್ತಾರೆ. ಈಗಾಗಲೇ ಅವರು ರಫೇಲ್ ವಿಮಾನಗಳ ಖರೀದಿ ವಿಚಾರ, ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಪ್ರಕರಣಗಳ ನಡೆದಾಗ ಕೂಡಾ ಕೇಂದ್ರವನ್ನು ನೂರಾರು ಪ್ರಶ್ನೆಗಳನ್ನು ಕೇಳಿದ್ದು ಮಾತ್ರವೇ ಅಲ್ಲದೇ ಕೆಲವು ಆರೋಪಗಳನ್ನು ಕೂಡಾ ಮಾಡಿದ್ದರು‌. ಕೆಲವೇ ದಿನಗಳ ಹಿಂದೆ ಗಡಿಯಲ್ಲಿ ಚೀನಾ ಮತ್ತು ಭಾರತ ಯೋಧರ ನಡುವೆ ಘರ್ಷಣೆ ನಡೆದಾಗಲು ಕೂಡಾ ಪ್ರಶ್ನೆಗಳನ್ನು ಕೇಳಿದ್ದ ರಾಹುಲ್ ಈಗ ಸರ್ಕಾರವ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್ ಒಂದನ್ನು ಮಾಡಿ, ದೇಶ ಭಾವನಾತ್ಮಕವಾದಾಗೆಲೆಲ್ಲಾ, ಫೈಲ್‌ಗಳು ಕಣ್ಮರೆಯಾದವು. ಮಲ್ಯ ಅಥವಾ ರಾಫೆಲ್, ಮೋದಿ ಅಥವಾ ಚೋಕ್ಸಿ ಕಾಣೆಯಾದ ಫೈಲ್ ಗಳ ಪಟ್ಟಿಯಲ್ಲಿ ಈಗ ಹೊಸ ಸೇರ್ಪಡೆ ಚೀನೀ ಅತಿಕ್ರಮಣ ಹೊಂದಿರುವ ಇತ್ತೀಚಿನ ದಾಖಲೆಗಳು. ಇದು ಕಾಕತಾಳೀಯವಲ್ಲ, ಇದು ಮೋದಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಪ್ರಯೋಗವಾಗಿದೆ ಎಂದು ಬರೆದು ಸರ್ಕಾರದ ನೀತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ದೇಶದ ರಕ್ಷಣಾ ಸಚಿವಾಲಯವು ಭಾರತದ ಪ್ರದೇಶಗಳನ್ನ ಚೀನಾ ಅತಿಕ್ರಮಣ ಮಾಡಿಕೊಂಡಿದೆ ಅಂತ ಒಪ್ಪಿಕೊಂಡಿದೆ ಎಂಬಂತೆ ಅದರ ಸಂಬಂಧಿತ ದಾಖಲೆಗಳನ್ನ ವೆಬ್​ಸೈಟ್​ನಲ್ಲಿ ಹಾಕಿತ್ತು. ಆದರೆ ಅದಾದ ಕೆಲವೇ ನಿಮಿಷಗಳಲ್ಲಿ ಅದನ್ನು ತೆಗೆದು ಹಾಕಿದೆ ಎಂಬುದು ರಾಹುಲ್ ಗಾಂಧಿಯವರ ಆರೋಪವಾಗಿದೆ. ಅದೇ ಕಾರಣದಿಂದ ಈಗ ಅವರು ಕೇಂದ್ರ ಸರ್ಕಾರದ ಒಂದು ಗಂಭೀರ ಆರೋಪವನ್ನ ಮಾಡುವ ಮೂಲಕ ದೇಶ ಭಾವನಾತ್ಮಕವಾದಾಗಲೆಲ್ಲಾ ಫೈಲ್ ಗಳು ಕಣ್ಮರೆಯಾಗುತ್ತದೆ ಎಂದು ಟೀಕೆ ಮಾಡಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here