ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಳೆದ ೧೫ ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿದ್ದ ಬಂಗಲೆಯನ್ನು ಖಾಲಿ ಮಾಡಬೇಕಿದೆ. ಯಾವ್ಯಾವ ಸಂಸದರು ಬಂಗಲೆ ತೆರವು ಮಾಡಬೇಕು ಎಂಬ ಅಧಿಸೂಚನೆ ಲೋಕಸಭೆ ಕಾರ್ಯದರ್ಶಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಕಳೆದ ಹದಿನೈದು ವರ್ಷಗಳಿಂದ ರಾಹುಲ್ ಗಾಂಧಿಯವರು ದೆಹಲಿಯ ಬಂಗಲೆಯಲ್ಲಿ ನೆಲೆಸಿದ್ದರು. ಇದೀಗ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿ ಲೋಕಸಭಾ ಕ್ಷೇತದಿಂದ ಸೋತ ಹಿನ್ನೆಲೆಯಲ್ಲಿ ಬಂಗಲೆ ಖಾಲಿ ಮಾಡಬೇಕಿದೆ.

ಇದರಲ್ಲಿ ರಾಹುಲ್ ಗಾಂಧಿ ಅವರ ಅತಿಗಣ್ಯರ ಶ್ರೇಣಿ-೮ ಅಧಿಕೃತ ನಿವಾಸ ನಂ. ೧೨, ತುಘಲಕ್ ರಸ್ತೆಯ ಬಂಗಲೆ ಸೇರಿದಂತೆ ೧೨ ಸಂಸದರ ನಿವಾಸ ಖಾಲಿ ಮಾಡಲು ಸೂಚಿಸಲಾಗಿದೆ. ೨೦೦೪ರಲ್ಲಿ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ಬಳಿಕ ಈ ಬಂಗಲೆಯನ್ನು ಅಧಿಕೃತ ನಿವಾಸ ಮಾಡಿಕೊಂಡಿದ್ದರು.

೨೦೧೯ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಸೋಲು ಕಂಡಿದ್ದು, ಕೇರಳದ ವಯನಾಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ೧೨ ಬಂಗಲೆಗಳನ್ನು ಖಾಲಿ ಮಾಡಲು ಸೂಚನೆ ನೀಡಿರುವುದಲ್ಲದೆ, ೫೧೭ ಬಂಗಲೆಗಳನ್ನು ಹೊಸ ಸಂಸದರಿಗೆ ಹಂಚಿಕೆ ಮಾಡಲು ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಇರುವ ಬಂಗಲೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here