ನೂತನ ವರ್ಷದ ಸಂದರ್ಭದಲ್ಲಿ ಎ.ಎನ್.ಐ. ಸುದ್ದಿ ಸಂಸ್ಥೆಯ ಸಂಪಾದಕಿಯಾದ ಸ್ಮಿತ ಪ್ರಕಾಶ್ ಅವರು ಪ್ರಧಾನಿ ನರೇಂದ್ರ ಮೋದಿಯವರ ದೀರ್ಘ ಸಂದರ್ಶನವನ್ನು ಮಾಡಿದ್ದರು. ರಾಮಮಂದಿರ ನಿರ್ಮಾಣದ ವಿಷಯ, ಸರ್ಜಿಕಲ್ ಸ್ಟ್ರೈಕ್, ರೈತರ ಸಾಲ ಮನ್ನಾ, ತ್ರಿವಳಿ ತಲಾಕ್ ಇತರೆ ವಿಚಾರಗನ್ನು ಕುರಿತಾಗಿ ಪ್ರಧಾನಿಯವರನ್ನು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಈ ಸಂದರ್ಶನ ಮುಗಿದ ನಂತರ ಒಂದು ವಿವಾದಕ್ಕೆ ಇದು ಕಾರಣವಾಗಿದೆ. ಇಷ್ಟಕ್ಕೂ ಆ ವಿವಾದ ಏನೆನ್ನುವುದಾದರೆ, ಸ್ಮಿತ ಪ್ರಕಾಶ್ ಅವರು ಮೋದಿಯವರ ಸಂದರ್ಶನ ಮುಗಿಸಿದ ನಂತರ ಮಾರನೆಯ ದಿನ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಪತ್ರಿಕಾಗೋಷ್ಠಿ ನಡೆಸಿದ್ದು, ಅದರಲ್ಲಿ ಸಂಪಾದಕಿ ಸ್ಮಿತ ಪ್ರಕಾಶ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿಯವರು ತಾನು ಮಾದ್ಯಮಗಳಿಗೆ ಸದಾ ಕಾಲ ಲಭ್ಯವಿರುತ್ತೇನೆ. ಮಾದ್ಯಮದವರು ಕೇಳುವ ಪ್ರಶ್ನೆಗಳಿಗೆ ಸದಾ ಉತ್ತರಗಳನ್ನು ನೀಡುತ್ತಾ ಇರುತ್ತೇನೆ. ಆದರೆ ನಿನ್ನೆ ಒಬ್ಬ ಸಂಪಾದಕಿ ಮೋದಿಯವರನ್ನು ಸಂದರ್ಶನ ಮಾಡಿದ್ದಾರೆ. ಆಕೆ ಅವರ ಸಂದರ್ಶನ ಮಾಡುವುದನ್ನೇ ದೊಡ್ಡ ಸಾಧನೆ ಎಂದು ಭಾವಿಸಿ ನಗುತ್ತಾ, ಮೋದಿಯವರನ್ನು ಪ್ರಶ್ನೆ ಕೇಳುತ್ತಿದ್ದರು. ಉತ್ತರವನ್ನು ಕೂಡಾ ಅವರೇ ನೀಡುತ್ತಿದ್ದರು ಎಂದೆಲ್ಲಾ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಸಂಪಾದಕಿ ಸ್ಮಿತ ಪ್ರಕಾಶ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.

ಇದಾದ ನಂತರ ಸ್ಮಿತ ಅವರು ಬಹಳ ಖಡಕ್ಕಾಗಿ ಟ್ಟೀಟ್ ಮಾಡಿ ರಾಹುಲ್ ಗಾಂಧಿಯವರಿಗೆ ಉತ್ತರವನ್ನು ನೀಡಿದ್ದಾರೆ. ಟ್ವಿಟರ್ ನಲ್ಲಿ ರಾಹುಲ್ ಅವರಿಗೆ ಉತ್ತರಿಸಿರುವ ಸಂಪಾದಕಿಯವರು ಡಿಯರ್ ರಾಹುಲ್ ಗಾಂಧಿ ನೀವು ಪತ್ರಿಕಾಗೋಷ್ಠಿಯಲ್ಲಿ ನನ್ನ ಬಗ್ಗೆ ಮಾತನಾಡಿರುವುದು ಬಹಳ ಕೀಳುಮಟ್ಟದ್ದಾಗಿದೆ. ನಾನು ಮೋದಿಯವರನ್ನು ಪ್ರಶ್ನೆಗಳನ್ನು ಕೇಳುತ್ತಿದ್ದೆ ಹೊರತು ಉತ್ತರವನ್ನು ಹೇಳುತ್ತಿರಲಿಲ್ಲ. ನಿಮಗೆ ಮೋದಿಯವರ ವಿರುದ್ಧ ವಾಗ್ದಾಳಿ ಮಾಡಬೇಕೆನಿಸಿದರೆ ಹಾಗೆಯೇ ಮಾಡಿ, ಆದರೆ ಅದರ ಮಧ್ಯೆ ನನ್ನನ್ನು ಏಕೆ ಎಳೆದು ತಂದಿರುವಿರಿ? ದೇಶದ ಒಂದು ದೊಡ್ಡ ಪಕ್ಷದ ನಾಯಕನಾಗಿರುವ ನಿಮ್ಮಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

Photos credit :- twitter account

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here