ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಯವ ವಿಚಾರವಾಗಿ ರಾಹುಲ್ ಗಾಂಧಿ ಅವರು ತಮ್ಮ ರಾಜೀನಾಮೆ ಪತ್ರವನ್ನು ತಮ್ಮ ಟ್ವಿಟರ್ ಖಾತೆಯ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಇನ್ನು ಅವರ ಈ ಪತ್ರದ ಕುರಿತಾಗಿ ಅವರ ಸಹೋದರಿ ಪ್ರಿಯಾಂಕ ಗಾಂಧಿಯವರು ಹೇಳಿಕೆಯೊಂದನ್ನು ನೀಡಿ ಸಹೋದರನ ಆ ರಾಜೀನಾಮೆ ಪತ್ರದ ಫೋಟೋ ಹಾಕಿರುವ ಟ್ವೀಟ್ ಗೆ ತಮ್ಮ ಹೇಳಿಕೆಯ ಟ್ವೀಟ್ ಟ್ಯಾಗ್ ಮಾಡಿ, ತಮ್ಮ ಸಹೋದರನ ಸಾಧನೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ನಿನ್ನೆ ರಾಹುಲ್ ಗಾಂಧಿಯವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿ, ರಾಜೀನಾಮೆ ಪತ್ರವನ್ನು ಟ್ವಿ ಟರ್ ನಲ್ಲಿ ಪ್ರಕಟಿಸಿದ್ದರು‌.

ಪ್ರಿಯಾಂಕ ಗಾಂಧಿಯವರು ಕೆಲವರಿಗೆ ಮಾತ್ರ ಇಂತಹ ಕಾರ್ಯ ಮಾಡಲು ಧೈರ್ಯವಿರುತ್ತದೆ. ನೀನು ಅದನ್ನು ಮಾಡಿರುವೆ, ನಿನ್ನ ಈ ಕಾರ್ಯಕ್ಕೆ ಹಾಗೂ ನಿರ್ಧಾರವನ್ನು ಮನಸ್ಸಿನಾಳದಿಂದ ನಾನು ಗೌರವಿಸುತ್ತೇನೆ ಎಂದು ಟ್ವೀಟ್ ಮಾಡಿ ತಮ್ಮ ಸಹೋದರನ ನಡೆಯನ್ನು ಹೊಗಳಿದ್ದಾರೆ. ಅವರ ಧೈರ್ಯವನ್ನು ಮೆಚ್ಚಿ ಅಂತಹ ಧೈರ್ಯ ಕೆಲವರಿಗೆ ಮಾತ್ರವೇ ಇರುತ್ತದೆ ಎಂದು ಅವರು ಹೇಳಿದ್ದಾರೆ. ರಾಹುಲ್ ಗಾಂಧಿಯವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಸೋಲಿನ ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ಇನ್ನೊಂದು ವಾರದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನ ನೂತನ ಅಧ್ಯಕ್ಷರನ್ನು ಆರಿಸಲಾಗುವುದು ಎನ್ನಲಾಗಿದೆ. ತಮ್ಮ ರಾಜೀನಾಮೆ ಪತ್ರದಲ್ಲಿ ಕೂಡಾ ರಾಹುಲ್ ಗಾಂಧಿಯವರು ಅಧ್ಯಕ್ಷ ಎನ್ನುವ ಪದದ ಬದಲಾಗಿ ಕಾಂಗ್ರೆಸ್ ಸದಸ್ಯ ಹಾಗೂ ಸಂಸದ ಎನ್ನುವ ಪದಗಳನ್ನು ಮಾತ್ರ ಟ್ವಿಟರ್ ನಲ್ಲಿ ಉಳಿಸಿಕೊಂಡಿದ್ದಾರೆ. ರಾಜೀನಾಮೆ ಪತ್ರದಲ್ಲಿ ಅವರು ದೇಶಕ್ಕಾಗಿ ಸೇವೆ ಮಾಡಲು ವೇದಿಕೆ ನಿರ್ಮಿಸಿಕೊಟ್ಟ ಕಾಂಗ್ರೆಸ್ ಗೆ ಧನ್ಯವಾದಗಳನ್ನು ಕೂಡಾ ಅರ್ಪಿಸಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here