ರಫೇಲ್ ಯುದ್ಧ ವಿಮಾನಗಳ ಕುರಿತಾಗಿ ಕಳೆದ ಕೆಲವು ದಿನಗಳಿಂದ ಕೂಡಾ ಮಾದ್ಯಮಗಳಲ್ಲಿ ದೊಡ್ಡ‌ ಸುದ್ದಿಯಾಗಿದೆ. ರಫೇಲ್ ಯುದ್ಧ ವಿಮಾನಗಳಿಂದ ದೇಶದ ಸೇನೆಗೆ ಮತ್ತಷ್ಟು ಬಲ ಸೇರಿದೆ. ಇನ್ನು ಈ ರಫೇಲ್ ಯುದ್ಧ ವಿಮಾನಗಳ ವಿಷಯವಾಗಿ ಭಾರತ ಸರ್ಕಾರ ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿ ಜೊತೆಗೆ 59,000 ಕೋಟಿ ರೂ.ಗಳ ರಫೇಲ್ ಒಪ್ಪಂದ ಮಾಡಿಕೊಂಡ ನಂತರ ಅದಕ್ಕೆ ಅದಕ್ಕೆ ಉದ್ಯಮಿ ಅನಿಲ್ ಅಂಬಾನಿಯನ್ನು ಮಧ್ಯವರ್ತಿಯನ್ನಾಗಿ ಮಾಡಿತ್ತು.

ಆ ದಿನದಿಂದ ಇಂದಿನವರೆಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಎದುರು ಅನೇಕ ಪ್ರಶ್ನೆಗಳನ್ನು ಮುಂದಿಡುತ್ತಲೇ ಬಂದಿದ್ದಾರೆ.ಈಗ ರಫೇಲ್ ವಿಮಾನಗಳು ಭಾರತವನ್ನು ತಲುಪಿದ್ದಾಗಿದೆ. ಈಗ ಮತ್ತೆ ರಾಹುಲ್ ಗಾಂಧಿಯವರು ಸರ್ಕಾರದ ಮುಂದೆ ಮೂರು ಪ್ರಶ್ನೆಗಳನ್ನು ಇಟ್ಟು, ಉತ್ತರದ ನಿರೀಕ್ಷೆಯಲ್ಲಿ ಇದ್ದಾರೆ. ರಾಹುಲ್ ಕೇಳಿರುವ ಮೂರು ಪ್ರಶ್ನೆಗಳು ಈ ರೀತಿ ಇವೆ.

1) ಪ್ರತಿ ಯುದ್ಧ ವಿಮಾನಕ್ಕೆ 526 ಕೋಟಿ ರೂ. ಬದಲಾಗಿ 1670 ಕೋಟಿ ರೂ. ವೆಚ್ಚ ಮಾಡಿದ್ದು ಏಕೆ?

2) 126 ಯುದ್ಧ ವಿಮಾನಗಳ ಬದಲು ಕೇವಲ 36 ವಿಮಾನಗಳನ್ನು ಮಾತ್ರ ಏಕೆ ಖರೀದಿಸಲಾಗುತ್ತಿದೆ ?

3) 30,000 ಕೋಟಿ ರಫೇಲ್ ಗುತ್ತಿಗೆಯನ್ನು ಹೆಚ್ಎಎಲ್ ಬದಲಾಗಿ ಅನಿಲ್ ಅಂಬಾನಿಗೆ ನೀಡಿದ್ದೇಕೆ? ಎಂಬ ಪ್ರಶ್ನೆಗಳನ್ನು ಅವರು ಸರ್ಕಾರದ ಮುಂದಿಟ್ಟಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here