ರಾಷ್ಟ್ರೀಯ ಕಾಂಗ್ರೆಸ್ ನ ಯುವ ನಾಯಕ ರಾಹುಲ್ ಗಾಂಧಿಯವರು ದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಸುವ ಮೂಲಕ ಮಾತನಾಡುತ್ತಾ ಕೊರೊನಾ ವೈರಸ್‍ನಿಂದಾಗಿ ದೇಶದಲ್ಲಿ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ ಆದರೆ ಇದನ್ನು ತಡೆಯಲು ಕೇವಲ ಲಾಕ್‍ಡೌನ್ ಒಂದೇ ಅಂತಿಮ ಪರಿಹಾರದ ಮಾರ್ಗವಲ್ಲ ಎಂದು ತಿಳಿಸುವ ಜೊತೆಗೆ ದೇಶದಲ್ಲಿ ಕೊರೊನಾ ಪರೀಕ್ಷೆಗಳ ಸಂಖ್ಯೆ ಹೆಚ್ಚಾಗಬೇಕು ಎಂದು ತಿಳಿಸಿದ್ದಾರೆ. ಲಾಕ್ ಡೌನ್ ಕೊರೊನಾವನ್ನು ತಾತ್ಕಾಲಿಕವಾಗಿ ತಡೆದಿದೆ ಅಷ್ಟೇ, ಅದಕ್ಕೆ ಸರ್ಕಾರ ಲಾಕ್ ಡೌನ್ ಮುಗಿಯುವ ವೇಳೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊರೊನಾ ದೇಶದ ಆರೋಗ್ಯ ಮತ್ತು ಆರ್ಥಿಕತೆ ಎರಡರ ಮೇಲೂ ದುಷ್ಪರಿಣಾಮ ಬೀರಿದ್ದು, ಸರ್ಕಾರವು ಎರಡೂ ಕಡೆ ಗಮನ ಹರಿಸಬೇಕು ಎಂದಿರುವ ಅವರು, ಎಲ್ಲೆಡೆ ಅಂದರೆ ಹಾಟ್ ಸ್ಪಾಟ್ ಗಳು ಹಾಗೂ ನಾನ್ ಹಾಟಸ್ಪಾಟ್ ಗಳಲ್ಲೂ ಕೂಡಾ ಸೋಂಕು ಹರಡುವ ವೇಗದಲ್ಲೇ ಪರೀಕ್ಷೆಗಳು ಕೂಡಾ ನಡೆಯಬೇಕು ಎಂದಿದ್ದಾರೆ. ಈಗ ನಡೆದಿರುವ ಟೆಸ್ಟ್ ಗಳ ಸಂಖ್ಯೆ ತುಂಬಾ ಕಡಿಮೆ ಇದೆ ಎಂದು ಅವರು ಹೇಳಿದ್ದಾರೆ. ಕೊರೊನಾ ವಿರುದ್ಧ ಹೋರಾಟ ಆರಂಭವಾಗಿದ್ದು ಈಗಲೇ ಜಯ ಘೋಷಿಸಬಾರದು. ಇದೊಂದು ನಿರಂತರ ಹೋರಾಟ ವಾಗಿದ್ದು ಜನ ಹಾಗೂ ಸರ್ಕಾರ ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಹೇಳಿದ್ದಾರೆ.

ಸರ್ಕಾರವು ವಲಸೆ ಕಾರ್ಮಿಕರ ಕಡೆ ಹೆಚ್ಚು ಗಮನ ನೀಡಬೇಕು. ಅವರಿಗೆ ಆಹಾರ ಪೂರೈಕೆ ಮಾಡಬೇಕು. ಆರೋಗ್ಯ ತಪಾಸಣೆ ನಡೆಸಬೇಕು. ಇಲ್ಲವಾದರೆ ದೊಡ್ಡ ಸಮಸ್ಯೆ ಎದುರಾಗುತ್ತದೆ ಎಂದು ತಿಳಿಸಿದ್ದಾರೆ. ದೇಶದ ಗೋದಾಮುಗಳಲ್ಲಿ ಇರುವ ಆಹಾರ ಉತ್ಪನ್ನಗಳನ್ನು ಜನರಿಗೆ ಹಂಚಬೇಕು, ಹೊಸ ಉತ್ಪನ್ನ ಸಂಗ್ರಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೆ ಲಭ್ಯವಿರುವ ಆಹಾರ ಸಮರ್ಪಕವಾಗಿ ಪೂರೈಕೆ ಆಗಿಲ್ಲವೆಂದು ಅಸಮಾಧಾನವನ್ನು ಹೊರಹಾಕಿದ್ದಾರೆ.
ರಾಜ್ಯಗಳಿಗೆ ಕೊರೊನಾ ತಡೆಯಲು ಹೆಚ್ಚು ಅಧಿಕಾರ ನೀಡಬೇಕು ಎಂದಿದ್ದಾರೆ. ಜನರು ಆತಂಕ ಪಡಬಾರದು, ಭಯದ ಬದಲು ಆತ್ಮವಿಶ್ವಾಸ ಇರಬೇಕು ಎಂದು ಸಲಹೆಯನ್ನು ಕೂಡಾ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here