ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಆ. 5 ರಂದು ರದ್ದುಗೊಳಿಸಿತ್ತು. ಇದಾದ ನಂತರದಲ್ಲಿ ಕಣಿವೆ ರಾಜ್ಯದ ಸ್ಥಿತಿಗತಿಯನ್ನು ನಿಖರವಾಗಿ ಪರಿಶೀಲನೆ ಮಾಡಲು ಕಾಂಗ್ರೆಸ್​ ಸಂಸದರಾದ ರಾಹುಲ್​ ಗಾಂಧಿಯವರ ನೇತೃತ್ವದಲ್ಲಿ ವಿಪಕ್ಷ ನಾಯಕರ ನಿಯೋಗವು ನಾಳೆ ಶ್ರೀ ನಗರಕ್ಕೆ ತೆರಳುತ್ತಿದೆ. ರಾಹುಲ್ ಗಾಂಧಿ ಅವರೊಡನೆ‌
ಕಾಂಗ್ರೆಸ್​ ನ ಹಿರಿಯ ನಾಯಕರಾದ ಗುಲಾಮ್​ ನಬಿ ಆಜಾದ್​, ಆನಂದ್​ ಶರ್ಮಾ, ಸಿಪಿಐನ ಡಿ. ರಾಜಾ, ಸಿಪಿಐ (ಎಂ)ನ ಸೀತಾರಮ್​ ಯೆಚೂರಿ, ಆರ್​ಜೆಡಿಯ ಮನೋಜ್​ ಝಾ ನಿಯೋಗದಲ್ಲಿರಲಿದ್ದಾರೆಂದು ಹೇಳಲಾಗಿದೆ‌.

ಇನ್ನು 370ನೇ ವಿಧಿ ರದ್ದುಗೊಂಡ ನಂತರ ಕಣಿವೆ ರಾಜ್ಯದಲ್ಲಿ ವಿಷಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಹುಲ್​ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಅದಕ್ಕೆ ಪ್ರತ್ಯುತ್ತರವಾಗಿ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾದ ಸತ್ಯಪಾಲ್​ ಮಲಿಕ್​ ಕಾಶ್ಮೀರದ ಪರಿಸ್ಥಿತಿಯನ್ನು ಸ್ವತಃ ಅವಲೋಕನ ಮಾಡಲು ರಾಹುಲ್​ ಗಾಂಧಿ ಅವರನ್ನು ಕಣಿವೆ ರಾಜ್ಯಕ್ಕೆ ಆಹ್ವಾನಿಸುತ್ತೇನೆಂದು ಹೇಳಿಕೆ ನೀಡಿದ್ದರು.

ಸತ್ಯಪಾಲ್​ ಮಲಿಕ್​ ಅವರ ಆಹ್ವಾನವನ್ನು ರಾಹುಲ್​ ಗಾಂಧಿ ಸ್ವೀಕರಿಸಿದ್ದು, ಈಗ ಕಾಂಗ್ರೆಸ್ ನ ಈ ನಿಯೋಗ ಶ್ರೀನಗರದಲ್ಲಿನ ಸ್ಥಳೀಯರು ಮತ್ತು ರಾಜಕೀಯ ನಾಯಕರನ್ನು ಭೇಟಿ ಮಾಡಿ ಅವರೊಂದಿಗೆ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು, ಅಲ್ಲಿನ ಪರಿಸ್ಥತಿಯ ಕುರಿತು ಅಧ್ಯಯನ ಮಾಡುವ ಎಲ್ಲಾ ಅವಕಾಶಗಳು ಇವೆ ಎನ್ನಲಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here