ಪುಲ್ವಾಮದಲ್ಲಿ ಉಗ್ರರ ಧಾಳಿ ನಡೆದು ಭಾರತೀಯ ಯೋಧರು ಹುತಾತ್ಮರಾಗಿ ಇಂದಿಗೆ ವರ್ಷವಾಗಿದೆ. ಕಳೆದ ವರ್ಷ ಇದೇ ಪ್ರೇಮಿಗಳ ದಿನ ಇಡೀ ಭಾರತ ದೇಶದ ಗಡಿಕಾಯುವ ಯೋಧರಿಗಾಗಿ ಕಂಬನಿ ಮಿಡಿಯುವಂತಾಗಿತ್ತು. 40 ಜನ ಸೈನಿಕರು ಹುತಾತ್ಮರಾಗಿದ್ದರು, ಈ ಹುತಾತ್ಮ ಯೋಧರನ್ನು ದೇಶ ಇಂದಿಗೂ ಮರೆತಿಲ್ಲ. ಈ ಎಲ್ಲದರ ನಡುವೆ ಇದೀಗ ಎಐಸಿಸಿ ಯುವ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಡಿರುವ ಟ್ವೀಟ್ವ್ ಒಂದು ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ. ರಾಹುಲ್ ಗಾಂಧಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹುತಾತ್ಮ ಯೋಧರನ್ನು ನೆನೆಯುತ್ತಾ, ಮಾಡಿರುವ ಟ್ವೀಟ್ ನಲ್ಲಿ ಕೇಳಿರುವ ಪ್ರಶ್ನೆಗಳು ಬಿಜೆಪಿಯನ್ನು ಕೆರಳಿಸಿದೆ.

ರಾಹುಲ್ ಗಾಂಧಿ ಅವರು ತಮ್ಮ ಟ್ವೀಟ್ ನಲ್ಲಿ ಇಂದು ನಾವು ಮ ಪುಲ್ವಾಮಾ ಅಟ್ಯಾಕ್‌ನಲ್ಲಿ ನಮ್ಮ 40 ಸಿಆರ್‌ಪಿಎಫ್ ಹುತಾತ್ಮರನ್ನು ನೆನಪಿಸಿಕೊಳ್ಳುತ್ತಿದ್ದಂತೆ, ನಾವು ಕೇಳೋಣ ಎಂದು ಮೂರು ಪ್ರಶ್ನೆಗಳನ್ನು ಹಾಕಿದ್ದಾರೆ.
1. ದಾಳಿಯಿಂದ ಹೆಚ್ಚು ಲಾಭ ಪಡೆದವರು ಯಾರು? 2. ದಾಳಿಯ ವಿಚಾರಣೆಯ ಫಲಿತಾಂಶ ಏನು?
3. ದಾಳಿಗೆ ಅವಕಾಶ ನೀಡಿದ ಭದ್ರತಾ ಕೊರತೆಗಳಿಗೆ ಬಿಜೆಪಿ ಸರ್ಕಾರದಲ್ಲಿ ಇನ್ನೂ ಯಾರು ಹೊಣೆಗಾರರಾಗಿದ್ದಾರೆ? ಎಂಬ ಪ್ರಶ್ನೆಗಳನ್ನು ಹಾಕಿದ್ದಾರೆ. ಇನ್ನು ಇದಕ್ಕೆ ಉತ್ತರವಾಗಿ ರಾಜ್ಯದಲ್ಲಿ ಕೂಡಾ ಬಿಜೆಪಿ ತನ್ನ ಟ್ವೀಟ್ ಮಾಡಿದೆ.

ಕರ್ನಾಟಕ ಬಿಜೆಪಿ ರಾಹುಲ್ ಅವರ ಪ್ರಶ್ನೆಗಳಿಗೆ
ಈ ಮನುಷ್ಯನ “ರಣಹದ್ದು ರಾಜಕೀಯ” ಕ್ಕೆ ಅಂತ್ಯವಿಲ್ಲವೇ? ವಿಭಜನೆಯಿಂದ ಭಯೋತ್ಪಾದಕ ದಾಳಿಗಳು ಮತ್ತು ಹಗರಣಗಳವರೆಗೆ, ಕೇವಲ ಒಂದು ರಾಜವಂಶವು 1947 ರಿಂದ ಪ್ರತಿ ಫಲಿತಾಂಶದಿಂದ ಲಾಭ ಪಡೆಯುವತ್ತ ಗಮನಹರಿಸಿದೆ. ರಾಹುಲ್ ಅವರು ಮರೆತಿರಬಹುದು, ಇದು ನೆಹರೂ ರಾಜವಂಶಕ್ಕೆ ಸೇರಿದ್ದು, ಅದು ಎಲ್ಲಾ “ಪ್ರಯೋಜನಗಳನ್ನು” ಪಡೆದುಕೊಂಡಿದೆ ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here