ಭಾರತೀಯ ಕ್ರಿಕೆಟ್ ನ ಜೀವಂತ ದಂತಕಥೆ ದಿ ಗ್ರೇಟ್ ವಾಲ್ ಆಫ್ ಇಂಡಿಯಾ ಎಂದೇಖ್ಯಾತರಾಗಿರುವ ರಾಹುಲ್ ದ್ರಾವಿಡ್ ತಮ್ಮ ಸರಳತೆಯ ಮೂಲಕ ಇಡೀ ಕ್ರಿಕೆಟ್ ವೀಕ್ಷಕರ ಮನಗೆದ್ದಿದ್ದಾರೆ. ಪದೇ ಪದೇ ತಾನೂ ಎಲ್ಲರತೆ ಸಾಮಾನ್ತರಲ್ಲಿ ಸಾಮಾನ್ಯ ಎಂದು ನಿರೂಪಿಸುವ ರಾಹುಲ್ ದ್ರಾವಿಡ್ ಸರಳತೆಗೆ ಉದಾಹರಣೆ ಒಂದೆರಡರಲ್ಲಒಂದೆರಡರಲ್ಲ.ರಾಹುಲ್ ದ್ರಾವಿಡ್ ಒಬ್ಬ ಅಪ್ಪಟ ಕನ್ನಡಿಗ ಅದರಲ್ಲೂ ಬೆಂಗಳೂರಿನ ಸಾಮಾನ್ಯ ವ್ಯಕ್ತಿ ಎಂದರೂ ತಪ್ಪಾಗಲಾರದು  ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ವಸ್ತು ಪ್ರದರ್ಶನಕ್ಕೆ ಸಾಮಾನ್ಯ ವ್ಯಕ್ತಿಯ ಹಾಗೆ ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ಸರತಿ ಸಾಲಿನಲ್ಲಿ ನಿಂತು ಟಿಕೇಟ್ ಪಡೆದು ಹೋಗಿದ್ದರು‌. ಈ ವಿಷಯ ರಾಹುಲ್ ದ್ರಾವಿಡ್ ಅವರ ಸರಳತೆಯ ಬಗ್ಗೆ ಎಲ್ಲೆಡೆ ಪ್ರಶಂಶೆ ಪಡೆದಿತ್ತು.ಅದಾದ ನಂತರ ಮಡಿಕೇರಿಗೆ ತಮ್ಮ ಕುಟುಂಬದ ಜೊತೆ ರಜಾ ದಿನ ಕಳೆಯಲು ಹೋದಾಗಲು ಸಾಮಾನ್ಯರಂತೆ ಸಾಮಾನ್ಯರ ಜೊತೆ ಬೆರೆತು ಪ್ರಕೃತಿ ಸವಿದಿದ್ದ ದ್ರಾವಿಡ್ ಪ್ರವಾಸಿಗರ ಜೊತೆ ನಡೆದುಕೊಂಡಿದ್ದ ರೀತಿಗೆ ಪ್ರವಾಸಿಗರಿಗೂ ಸಾಕಷ್ಡು ಆಶ್ಚರ್ಯ ತಂದುಕೊಟ್ಟಿತ್ತು ಜೊತೆಗೆ ರಾಹುಲ್ ದ್ರಾವಿಡ್ ಅವರಿ ಪರಿಸರದ ಪ್ರೀತಿ ಮತ್ತು ಕಾಳಜಿಯನ್ನು ಎಲ್ಲಾ ಕಡೆ ಹೊಗಳುವಂತೆ ಮಾಡಿತ್ತು.2014 ರ ಸುಮಾರಿನಲ್ಲಿ ಬೆಂಗಳೂರಿನ ಬೀದಿಗಳಲ್ಲಿ ರಾಹುಲ್ ದ್ರಾವಿಡ್ ಸಾಮಾನ್ಯ ವ್ಯಕ್ತಿಯಂತೆ ಅಟೋದಲ್ಲಿ ಪ್ರಯಾಣಿಸಿದ್ದರು. ದ್ರಾವಿಡ್ ಆಟೋದಲ್ಲಿ ಇಷ್ಟು ಆರಾಮಾಗಿ ಸಾಮಾನ್ಯವಾಗಿ ತಿರುಗಾಡುವುದನ್ನು ಗಮನಿಸಿದ್ದ ಖ್ಯಾತ ಕ್ರಿಕೆಟಿಗ ಶೇನ್ ವಾಟ್ಸನ್ ರಾಹುಲ್ ಗೆ ಫಿದಾ ಆಗಿ ತಾನೂ ದ್ರಾವಿಡ್ ಜೊತೆ ಬೆಂಗಳೂರಿನ ಗಲ್ಲಿ ಗಲ್ಲಿ ಸುತ್ತ್ತಿದ್ದರು.ಜೊತೆಗೆ ಅದನ್ನ ಟ್ವಿಟರ್ ನಲ್ಲಿಯೂ ಹಾಕಿದ್ದರು.ಇನ್ನು ಮೊನ್ನೆ ನಡೆದ ಐ.ಪಿ.ಎಲ್ ಪಂದ್ಯದ ವೇಳೆ ತಾನೊಬ್ಬ ಖ್ಯಾತ ಕ್ರಿಕೆಟಿಗನಾದರೂ ಸಾಮಾನ್ಯರಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕ್ರಿಕೆಟ್ ನೋಡಿದ್ದು ಇಡೀ ಕ್ರಿಕೆಟ್ ಲೋಕವೇ ದ್ರಾವಿಡ್ ಸರಳತೆಗೆ ವ್ಹಾವ್ ವಾಲ್ ಎನ್ನುತ್ತಿದೆ.ಭಾರತ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಭಾನುವಾರ ನಡೆದ ಆರ್‌ಸಿಬಿ-ಕೆಕೆಆರ್ ಪಂದ್ಯವನ್ನು ಸಾಮಾನ್ಯ ವ್ಯಕ್ತಿಯಂತೆ ಕುಳಿತು ವೀಕ್ಷಿಸಿದ್ದಾರೆ.ಭಾನುವಾರ ಆರ್‌ಸಿಬಿಯನ್ನು ಬೆಂಬಲಿಸೋಕ್ಕೆ ರಾಹುಲ್ ದ್ರಾವಿಡ್ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದರು. ಆದರೆ ಅವರನ್ನು ಅಲ್ಲಿ ನೋಡಿ ಅಭಿಮಾನಿಗಳು ಆಶ್ಚರ್ಯಪಟ್ಟರು. ದ್ರಾವಿಡ್ ವಿಐಪಿ ಬಾಕ್ಸ್ ನಲ್ಲಿ ಕುಳಿತುಕೊಳ್ಳದೇ ಅಭಿಮಾನಿಗಳ ನಡುವೆ ಸಾಮಾನ್ಯ ಜನರಂತೆ ಕುಳಿತುಕೊಂಡಿದ್ದರು.ದ್ರಾವಿಡ್ ಕುಳಿತುಕೊಂಡಿದ್ದ ವಿಡಿಯೋವನ್ನು ಐಪಿಎಲ್ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ. “ಆರ್‌ಸಿಬಿಯನ್ನು ಬೆಂಬಲಿಸಲು ಯಾರು ಬಂದಿದ್ದಾರೆ ನೋಡಿ. ದಿ-ವಾಲ್, ದಿ ಲೆಜೆಂಡ್, ರಾಹುಲ್ ದ್ರಾವಿಡ್” ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು, ರಾಹುಲ್ ದ್ರಾವಿಡ್ ಅವರನ್ನು ನೋಡಿ ಅಭಿಮಾನಿಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಹುಲ್ ದ್ರಾವಿಡ್ ಅವರನ್ನು ಆರ್‌ಸಿಬಿ ಕೋಚ್ ಮಾಡಿ ಎಂದು ಕೆಲವು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.ಇನ್ನೂ ಕೆಲವರು ದ್ರಾವಿಡ್ ಕ್ರಿಕೆಟ್‍ನಲ್ಲಿ ಮಾತ್ರ ನನ್ನ ರೋಲ್ ಮಾಡಲ್ ಅಲ್ಲ, ನನ್ನ ಬದುಕಿನಲ್ಲೂ ಅವರು ನನ್ನ ರೋಲ್ ಮಾಡಲ್ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಹೀಗೆ ಮತ್ತೊಬ್ಬರು ನಿಮಗಾಗಿ ನಾನು ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಿದ್ದಿನಿ ಎಂದು ಅಭಿಮಾನಿಗಳು ಟ್ವಿಟ್ಟರ್ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.ಈ ಮೂಲಕ ರಾಹುಲ್ ದ್ರಾವಿಡ್ ಅಲೆ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಲ್ಲಿ ಇನ್ನೂ ನೆಲೆಯೂರಿದೆ ಎನ್ನಬಹುದು. ದಿ ಗ್ರೇಟ್ ವಾಲ್ ಅಭಿಮಾನಿಗಳು ಬಹಳ ದಿನಗಳ ನಂತರ ದ್ರಾವಿಡ್ ಕಣ್ತುಂಬಿಕೊಂಡು ಖುಷಿಯಾಗಿದ್ದಾರೆ.ಎಷ್ಟೇ ಆದರೂ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಅಲ್ಲವೇ ಸರಳತೆ ಕನ್ನಡದ ಮಣ್ಣಲ್ಲೇ ಇದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here