ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಗರ್ಭಿಣಿಯೊಬ್ಬರಿಗೆ ಸಂಚಾರದ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ರೈಲಿನಲ್ಲಿ ಕರ್ತವ್ಯ ನಿರತರಾಗಿದ್ದ ಟಿಟಿಇ ಅವರೇ ಗರ್ಭಿಣಿ ಗೆ ಹೆರಿಗೆ ಮಾಡಿಸುವ ಮೂಲಕ ಎಲ್ಲರಿಂದ ಮೆಚ್ಚುಗೆ ಪಡೆದಿರುವ ಮಾನವೀಯ ಘಟನೆಯೊಂದು ನಡೆದಿದೆ. ಬಸ್ ಗಳಲ್ಲಿ ಹಾಗೂ ರೈಲುಗಳಲ್ಲಿ ಹೆರಿಗೆ ಆಗಿರುವ ಘಟನೆಗಳು ಈಗಾಗಲೇ ಹಲವು ಬಾರಿ ಪ್ರಕಟವಾಗಿದೆ‌. ಆ ಸಾಲಿನಲ್ಲಿ ಈಗ ಇನ್ನೊಂದು ಮಾನವೀಯ ಘಟನೆ ಸೇರಿದ್ದು ಟಿಟಿಇ ಅವರು ಮಾಡಿರುವ ಈ ಹೆರಿಗೆಗೆ ರೈಲ್ವೆ ಇಲಾಖೆ ಕೂಡಾ ಆ ಟಿಟಿಇ ಅವರನ್ನು ಪ್ರಶಂಸೆ ಮಾಡಿದೆ. ದೆಹಲಿ ವಿಭಾಗದಲ್ಲಿ ಟಿಟಿಇ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಹೆಚ್. ಎಸ್ . ರಾಣಾ ಅವರೇ ಈಗ ಎಲ್ಲರಿಂದ ಪ್ರಶಂಸೆಗೆ ಪಾತ್ರವಾಗಿರುವ ವ್ಯಕ್ತಿ.

ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆ ಸಂದರ್ಭದಲ್ಲಿ ಯಾರೂ ವೈದ್ಯರು ಇಲ್ಲದ ಕಾರಣ , ಟಿಟಿಇ ಅವರು ರೈಲಿನಲ್ಲಿ ಇದ್ದ ಸಹ ಪ್ರಯಾಣಿಕರ ನೆರವನ್ನು ಪಡೆದುಕೊಂಡು ಹೆರಿಗೆಯನ್ನು ಮಾಡಿಸಿದ್ದಾರೆ. ಟಿಟಿಇ ಅವರ ಕೆಲಸವನ್ನು ಮೆಚ್ಚಿದ ರೈಲ್ವೆ ಇಲಾಖೆ ಅದರ ಬಗ್ಗೆ ರೈಲ್ವೆ ಸಚಿವಾಲಯವು ಟ್ವೀಟ್ ಮಾಡಿ ತಮ್ಮ ಸಿಬ್ಬಂದಿ ಮಾಡಿದ ಕೆಲಸವನ್ನು ಹೆಮ್ಮೆಯಿಂದ ಜನರಿಗೆ ತಿಳಿಸಿದೆ. ರೈಲ್ವೆ ಇಲಾಖೆ ತನ್ನ ಟ್ವೀಟ್ ನಲ್ಲಿ ದೆಹಲಿ ಡಿವಿಷನ್ ನ ಟಿಟಿಇ ಶ್ರೀ ಹೆಚ್.ಆರ್. ರಾಣಾ ಎಂದು ಗೌರವದಿಂದ ಟ್ವೀಟ್ ಮಾಡಿ ಅವರ ಕಾರ್ಯವನ್ನು ಈ ರೀತಿ ವಿವರಿಸಿದೆ.

ರಾಣಾ ಅವರು ಮಹಿಳೆಯೊಬ್ಬರಿಗೆ ರೈಲಿನಲ್ಲಿ ವೈದ್ಯರಾರು ಇಲ್ಲದೇ ಇದ್ದಾಗ, ಸಹ ಪ್ರಯಾಣಿಕರ ನೆರವು ಪಡೆದು ಮಹಿಳೆಯೊಬ್ಬರ ಹೆರಿಗೆಗೆ ಸಹಕರಿಸಿದ್ದಾರೆ. ಅವರ ಮಾನವೀಯ ಹಾಗೂ ಪರೋಪಕಾರದಿಂದ ರೈಲ್ವೆ ಇಲಾಖೆ ಹೆಮ್ಮೆ ಪಡುತ್ತಿದೆ ಎಂದು ಎಂದು ಟ್ವೀಟ್ ನ ಮೂಲಕ ಅಭಿನಂದನೆ ಸಲ್ಲಿಸಿದೆ ರೈಲ್ವೆ ಸಚಿವಾಲಯ. ಹೆಚ್‌.ಆರ್.‌ರಾಣಾ ಅವರ ಸಮಯಪ್ರಜ್ಞೆಯನ್ನು ಪ್ರತಿಯೊಬ್ಬರೂ ಕೂಡಾ ಮೆಚ್ಚಲೇಬೇಕಾಗಿದೆ. ಟ್ವಿಟರ್ ನಲ್ಲಿ ಸಹಸ್ರಾರು ಜನ ಅವರ ಕಾರ್ಯವನ್ನು ಶ್ಲಾಘನೆ ಮಾಡುತ್ತಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here