ಸೌದಿ ಅರೇಬಿಯಾದಲ್ಲಿ ದೊಡ್ಡ ತೈಲ ನಿಕ್ಷೇಪಗಳಿವೆ. ಆಧುನಿಕ ಸೌಲಭ್ಯಗಳನ್ನು ಹೊಂದಿರುವ ನಗರಗಳಿವೆ. ಬೆಟ್ಟಗಳಿವೆ ಹಾಗೂ ವಿಶಾಲವಾದ ಮರುಭೂಮಿಗಳಿವೆ. ಇದೆಲ್ಲಾ ತಿಳಿದಿರುವ ವಿಷಯವೇ ಆಗಿದೆ. ಆದರೆ ಈಗ ಇದೆಲ್ಲದರ ನಡುವೆ ಪ್ರಕೃತಿ ಮಾಡಿದ ಮಾಯೆ ಎಂದರೂ ಸರಿಯೇ ಅಥವಾ ವಿಸ್ಮಯ ಎಂದರೂ ಸರಿಯೇ ಆದರೆ ಅದು ಸೌದಿ ಅರೇಬಿಯಾದತ್ತ ಜನ ಆಶ್ಚರ್ಯದ ಕಣ್ಣುಗಳಿಂದ ನೋಡವಂತೆ ಆಗಿದೆ. ಸೌದಿ ಅರೇಬಿಯಾದಲ್ಲಿ ಅಂತಹ ಏನು ವಿಸ್ಮಯವನ್ನು ಪ್ರಕೃತಿ ಸೃಷ್ಟಿಸಿದೆ ಎಂಬುದನ್ನು ತಿಳಿದರೆ ನಿಜಕ್ಕೂ ಆಶ್ಚರ್ಯ ಪಡುವುದರಲ್ಲಿ ಎರಡು ಮಾತಿಲ್ಲ.

ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಹರಡಿದ ಮರಳಿನ ರಾಶಿಯ ಮೇಲೆ ಈಗ ಹಿಮ ತುಂಬಿ ಕೊಂಡಿದೆ. ಏನು ಮರುಭೂಮಿಯಲ್ಲಿ ಹಿಮವೇ? ಎನ್ನುವುದಾದರೆ ಹೌದು, ಇದು ಪ್ರಕೃತಿ ಸೃಷ್ಟಿಸಿದ ಒಂದು ವಿಸ್ಮಯ. ಸೌದಿಯ ಮರುಭೂಮಿಯಲ್ಲಿ ಸರಿಯಾಗಿ ಮಳೆಯಾಗುವುದೇ ಅಪರೂಪ ಎನ್ನುವಾಗ, ಇದ್ದಕ್ಕಿದ್ದಂತೆ ಸುರಿದ ಹಿಮ ಮಳೆಯು ಅರಬ್ಬರಿಗೆ ಆಶ್ಚರ್ಯ ವನ್ನು ಉಂಟು ಮಾಡಿದೆ. ಅಲ್ಲಿನ ಜನರಿಗೆ ಇದೊಂದು ವಿಸ್ಮಯದ ಜೊತೆಗೆ ಆನಂದವನ್ನು ಹಾಗೂ ಒಂದು ಹೊಸ ಸಂತೋಷವನ್ನು ಕೂಡಾ ನೀಡಿದ್ದು, ಜನ ಹೊಸ ವಾತಾವರಣವನ್ನು ಸಾಕಷ್ಟು ಎಂಜಾಯ್ ಮಾಡಿದ್ದಾರೆ.

ಸೌದಿ ಅರೇಬಿಯಾದ ಕೆಲವು ಜನರು ಹಿಮಪಾತದ ನಂತರ, ಹಿಮದಲ್ಲಿ ಆಡುತ್ತಾ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸೌದಿ ಅರೇಬಿಯಾ ಅಂದರೆ ವಿಶಾಲವಾದ ಮರುಭೂಮಿ, ಹೆಚ್ಚು ಉಷ್ಣಾಂಶ ಮತ್ತು ತೈಲ ನಿಕ್ಷೇಪಗಳು ಮಾತ್ರವಲ್ಲ, ಇನ್ನು ಮುಂದೆ ಹಿಮ ಬೀಳುವ ವಿಷಯದಿಂದಲೂ ಗುರುತಿಸಲ್ಪಡಬೇಕು ಎಂದು ಬರೆದು ಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here