
ಮನುಷ್ಯ ಮದುವೆಯಾಗಿ ಜೀವನ ಸರಿಯಾಗಿ ನಡೆಯದಿದ್ದಾಗ ಮದುವೆ ಮುರಿಯಲು ಕೋರ್ಟ್ ಮೆಟ್ಟಿಲೇರಿ ಡೈವೋರ್ಸ್ ಮಾಡಿಕೊಂಡು ಬೇರೆಯಾಗುವುದನ್ನು ನೋಡಿರುತ್ತೀರಿ. ಜಗತ್ತಿನಲ್ಲಿ ಇಂತಹ ಹಲವು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ದಂಪತಿ ವಿಚ್ಛೇದನ ತೆಗೆದುಕೊಳ್ಳುವ ಪ್ರಕರಣ ದಿನನಿತ್ಯ ನಡೆಯುತ್ತಲೇ ಇರುತ್ತದೆ, ಆದರೆ ಕಪ್ಪೆಗಳಿಗೆ ವಿಚ್ಛೇದನ ಕೊಡಿಸಿರೋ ವಿಚಿತ್ರ ಪ್ರಕರಣವೊಂದು ಮಧ್ಯ ಪ್ರದೇಶದಲ್ಲಿ ನಡೆದಿದೆ.
ಹೌದು. ಇದೇನಪ್ಪ ಕಪ್ಪೆಗಳಿಗೂ ವಿಚ್ಛೇದನವಾ ಎಂದು ಶಾಕ್ ಆಗಬಹುದು. ಆದರೂ ಇದು ನಿಜ. ಹಳೆ ಕಾಲದಿಂದಲೂ ಊರಿಗೆ ಬರಗಾಲ ಬಂದರೇ ಕಪ್ಪೆಗಳ ಮದುವೆ ಮಾಡಿಸಿ, ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವ ಸಂದ್ರದಾಯ ರೂಡಿಯಲ್ಲಿದೆ. ಅದರಂತೆ ಮಳೆ ಬರಲಿ ಎಂದು ಭೋಪಾಲ್ನ ಓಂ ಶಿವ ಸೇವಾ ಶಕ್ತಿ ಮಂಡಳಿಯ ಭಕ್ತರು ಕಳೆದ ಜುಲೈ ತಿಂಗಳಲ್ಲಿ ಎರಡು ಕಪ್ಪೆಗಳಿಗೆ ಮದುವೆ ಮಾಡಿಸಿ ಸುದ್ದಿಯಾಗಿದ್ದರು.
ಕಪ್ಪೆಗಳಿಗೆ ಮದುವೆ ಮಾಡಿಸಿದ್ದಕ್ಕೆ ಮಳೆ ಹೆಚ್ಚಾಗಿ ಪ್ರವಾಹ ಬಂತು, ಅವುಗಳಿಗೆ ವಿಚ್ಛೇದನ ಕೊಡಿಸಿದರೆ ಮಳೆ ಕಡಿಮೆಯಾಗುತ್ತೆ ಎಂದು ಕೆಲವರು ಸಲಹೆ ನೀಡಿದ್ದು, ತಡ ಮಾಡದೇ ಮದುವೆ ಮಾಡಿಸಿದ್ದ ಭಕ್ತರು ಬುಧವಾರ ಕಪ್ಪೆಗಳನ್ನು ಹಿಡಿದು, ವಿಚ್ಛೇದನ ಕೊಡಿಸಿದ್ದಾರೆ.
ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.