ಖ್ಯಾತ ನಿರ್ದೇಶಕ ರಾಜಮೌಳಿ ಅವರ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ಆದ ವಿಷಯವನ್ನು ಅವರು ಎರಡು ವಾರಗಳ ಹಿಂದೆ ಟ್ವೀಟ್ ಮಾಡಿ ತಿಳಿಸಿದ್ದರು. ಈಗ ಅವರು ಮತ್ತೊಂದು ಗುಡ್ ನ್ಯೂಸ್ ಅನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ರಾಜಮೌಳಿ ಅವರ ಕುಟುಂಬವು ಕೊರೊನಾ ವಿರುದ್ಧ ಹೋರಾಟದಲ್ಲಿ ಜಯ ಗಳಿಸಿದೆ. ರಾಜಮೌಳಿ ಅವರು ನಾವು ಕೊರೊನಾದಿಂದ ಮುಕ್ತರಾಗಿದ್ದೇವೆ ಎಂದು ಟ್ವೀಟ್ ಮಾಡುವ ಮೂಲಕ ತಾವು ಕೊರೊನಾ ಗೆದ್ದು ಬಂದ ವಿಷಯವನ್ನು ತಿಳಿಸಿದ್ದಾರೆ. ವೈದ್ಯರು ನೀಡಿದಂತಹ ಸೂಚನೆಗಳ ಮೇರೆಗೆ ಕುಟುಂಬ ಸದಸ್ಯರೆಲ್ಲರೂ ಹೋಮ್ ಕ್ವಾರಂಟೀನ್​ನಲ್ಲಿ ಇದ್ದರು ಎಂದು ಅವರು ತಿಳಿಸಿದ್ದು, ಕ್ವಾರಂಟೀನ್​ನಲ್ಲಿ ಇರುವಾಗಲೂ ಕೂಡಾ ಅವರು ಆಗಾಗ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆರೋಗ್ಯದ ಬಗ್ಗೆ ತಿಳಿಸುತ್ತಿದ್ದರು ಕೂಡಾ.

ಈಗ ಅವರು ಮತ್ತೊಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಂತೋಷ ಉಂಟು ಮಾಡುವ ವಿಷಯವನ್ನು ತಿಳಿಸಿದ್ದಾರೆ. ತಮ್ಮ ಟ್ವೀಟ್ ನಲ್ಲಿ ಅವರು , ‘2 ವಾರಗಳ ಕಾಲ ಕ್ವಾರಂಟೀನ್​ನಲ್ಲಿ ಇದ್ದೆವು. ನಮಗೆ ಕೊರೊನಾದ ಯಾವುದೇ ಲಕ್ಷಣಗಳು ಕಾಣಿಸಿರಲಿಲ್ಲವಾದರೂ ಮುನ್ನೆಚ್ಚರಿಕೆಯಿಂದಾಗಿ ಪರೀಕ್ಷೆ ಮಾಡಿಸಿದ ನಂತರ ಬಂದ ವರದಿಯಲ್ಲಿ ನೆಗೆಟಿವ್ ಎಂದು ದೃಢಪಟ್ಟಿದೆ. ವೈದ್ಯರು ನಾವು ಪ್ಲಾಸ್ಮಾ‌ದಾನ ಮಾಡಲು ಸಶಕ್ತರಾಗಲು, ನಮಗೆ ಇನ್ನೂ ಮೂರು ವಾರಗಳ ಕಾಲ ಕಾಯುವಂತೆ ಹೇಳಿದ್ದಾರೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here