ಸೂಪರ್ ಸ್ಟಾರ್ ರಜನೀಕಾಂತ್ ಅವರ ಸಿನಿಮಾಗಳಿಗೆ ತಮಿಳಿನಲ್ಲಿ ಮಾತ್ರವಲ್ಲದೆ ಭಾರತದ ಇತರೆ ಭಾಗಗಳಲ್ಲೂ ಕೂಡಾ ಬೇಡಿಕೆ ಇದೆ. ರಜನೀಕಾಂತ್ ಅವರ ಅಭಿಮಾನಿಗಳು ವಿಶ್ವದಾದ್ಯಂತ ಇರುವುದು ಅವರ ಸಿನಿಮಾಗಳು ದೊಡ್ಡ ವ್ಯವಹಾರ ಮಾಡಲು ನೆರವು ನೀಡುತ್ತದೆ. ಕರ್ನಾಟಕದಲ್ಲೂ ಕೂಡಾ ರಜನೀಕಾಂತ್ ಅವರ ಸಿನಿಮಾಗಳು ಸಾಕಷ್ಟು ದೊಡ್ಡ ಪ್ರಮಾಣದಲ್ಲಿಯೇ ಲಾಭಗಳಿಸುವುದು ಕೂಡಾ ವಾಸ್ತವ. ಅದಕ್ಕೆ ಕಾರಣವೂ ಇದೆ. ಅದೇನೆಂದರೆ ರಜನೀಕಾಂತ್ ಕರ್ನಾಟಕದಿಂದ ಹೋಗಿ ತಮಿಳಿನಲ್ಲಿ ಸೂಪರ್ ಸ್ಟಾರ್ ಆದವರು ಎಂಬ ಭಾವನೆ.

ಈಗ ರಜನಿಕಾಂತ್ ಅವರ ದರ್ಬಾರ್ ಎಂಬ ಹೊಸ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದ್ದು, ಬಹು ವರ್ಷಗಳ ನಂತರ ರಜನೀಕಾಂತ್ ಅವರು ಖಾಕೀ ಖದರ್ ಅನ್ನು ತೋರಲು ತೆರೆಯ ಮೇಲೆ ಅಬ್ಬರಿಸಲಿದ್ದಾರೆ ಎನ್ನಲಾಗಿದೆ. ಮುರುಗದಾಸ್ ಅವರ ನಿರ್ದೇಶನದ ಈ ಸಿನಿಮಾದ ಮೋಷನ್ ಪೋಸ್ಟರ್ ಮತ್ತು ಒಂದು ಸೊಗಸಾದ ಬಿಜಿಎಂ ಬಿಡುಗಡೆಯಾಗಿದ್ದು, ಲಕ್ಷಾಂತರ ಜನರು ಈಗಾಗಲೇ ಅದನ್ನು ನೋಡಿ ಮೆಚ್ಚಿದ್ದಾರೆ. ಮೆಚ್ಚುಗೆಯ ಜೊತೆ ಜೊತೆಗೆ ಕರ್ನಾಟಕದಲ್ಲಿ ಕೆಲವರಿಗೆ ಇದರ ಬಗ್ಗೆ ಬೇಸರ ಕೂಡಾ ಉಂಟಾಗಿದೆ.

 

ಈ ಬೇಸರಕ್ಕೆ ಪ್ರಮುಖ ಕಾರಣ ದರ್ಬಾರ್ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿಲ್ಲ. ಬಾಲಿವುಡ್ ನ ದಬಾಂಗ್-3 ರಂತಹ ಸಿನಿಮಾವೇ ಡಬ್ಬಿಂಗ್ ಆಗುತ್ತಿದ್ದರೂ, ದರ್ಬಾರ್ ಮಾತ್ರ ತಮಿಳಿನಲ್ಲೇ ಬರಲಿದೆ ಎಂಬುದು ಹಲವರ ಬೇಸರಕ್ಕೆ ಕಾರಣವಾಗಿದೆ. ಡಬ್ಬಿಂಗ್ ಗೆ ಅವಕಾಶ ದೊರೆತ ನಂತರ ದೊಡ್ಡ ದೊಡ್ಡ ಸಿನಿಮಾಗಳೇ ಕನ್ನಡಕ್ಕೆ ಡಬ್ ಆಗುವಾಗ ದರ್ಬಾರ್ ಏಕೆ ಕನ್ನಡದಲ್ಲಿ ಬರುತ್ತಿಲ್ಲ ಎಂಬ ಅಸಮಾಧಾನವನ್ನು ಹುಟ್ಟು ಹಾಕಿದೆ. ಡಬ್ಬಿಂಗ್ ಅವಕಾಶವಿದ್ದರೂ ತಮಿಳಿನಲ್ಲಿ ಏಕೆ ನೋಡಬೇಕು ಎನ್ನುವ ಮನೋಧೋರಣೆ ಹಲವರದಾಗಿದ್ದು, ಇದು ಸರಿ ಕೂಡಾ ಎನಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here