ತಾನು ಈ ಹಿಂದೆ ನೀಡಿದ್ದ ಒಂದು ಭರವಸೆಯನ್ನು ತಲೈವಾ ರಜನಿಕಾಂತ್ ಅವರು ನೆರವೇರಿಸಿದ್ದಾರೆ. ರಜನೀಕಾಂತ್ ಅವರ ತಮ್ಮ ನಿರ್ಮಾಪಕ ಕಲೈಗ್ನಾನಂ ಅವರಿಗೆ ಸುಮಾರು 1 ಕೋಟಿ ರೂ.ಬೆಲೆ ಬಾಳುವ ಮನೆಯನ್ನು ಖರೀದಿಸಿ ಕಾಣಿಕೆಯಾಗಿ ನೀಡಿದ್ದಾರೆ.
ಆಗಸ್ಟ್ 14, 2019 ರಂದು ಕಲೈಜ್ಞಾನಂ ಅವರ 90 ನೇ ಹುಟ್ಟುಹಬ್ಬ ಮತ್ತು ಅವರು 50 ವರ್ಷಗಳನ್ನು ಚಲನಚಿತ್ರೋದ್ಯಮದಲ್ಲಿ ಪೂರೈಸಿದ ನೆನಪಿಗಾಗಿ ಅವರ ಗೌರವಾರ್ಥವಾಗಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಕಲೈಗ್ನಾನಂಗೆ ಮನೆ ಉಡುಗೊರೆಯಾಗಿ ನೀಡುವುದಾಗಿ ರಜನೀಕಾಂತ್ ಅವರು ಭರವಸೆ ನೀಡಿದ್ದರು. ಈ ಕಾರ್ಯಕ್ರಮವನ್ನು ಹಿರಿಯ ನಿರ್ದೇಶಕ ಭಾರತಿರಾಜ ಅವರು ಚೆನ್ನೈನಲ್ಲಿ ಆಯೋಜಿಸಿದ್ದರು.

ರಜನೀಕಾಂತ್ ಅವರನ್ನು ಸೋಲೋ ನಾಯಕನಾಗಿ ಚಿತ್ರವೊಂದರಲ್ಲಿ ನಿರ್ಮಾಪಕ ಹಾಗೂ ಬರಹಗಾರರಾದ ಕಲೈಜ್ಞಾನಂ ಅವರು 1978 ರಲ್ಲಿ ತಮ್ಮ ಭೈರವಿ ಸಿನಿಮಾ ಮೂಲಕ ಪರಿಚಯಿಸಿದ್ದರು ಎನ್ನುವುದು ವಿಶೇಷ. ರಜನೀಕಾಂತ್ ಅವರು ಮನೆ ವಿಷಯ ಮಾತನಾಡುತ್ತಾ, ನನಗೆ ಇತ್ತೀಚಿಗೆ ಕಲೈಜ್ಞಾನಂ ಅವರು ಬಾಡಿಗೆ ಮನೆಯಲ್ಲಿರುವ ವಿಷಯ ತಿಳಿಯಿತು. ಅಲ್ಲದೆ ಮಂತ್ರಿ ಕಡಂಬೂರು ರಾಜು ಅವರು ಸಿಎಂ ಅವರೊಡನೆ ಮಾತನಾಡಿ ಕಲೈಜ್ಞಾನಂ ಅವರಿಗೆ ಮನೆ ಕೊಡಿಸುವುದಾಗಿ ಭರವಸೆ ನೀಡಿದ್ದಕ್ಕೆ ಧನ್ಯವಾದಗಳು. ಆದರೆ ನಾನು ಈ ಅವಕಾಶವನ್ನು ಬೇರೆ ಯಾರಿಗೂ ಕೊಡಲಾರೆ. ಅದಕ್ಕಾಗಿ ಅವರಿಗಾಗಿ ನಾನೇ ಮನೆ ಖರೀದಿ ಮಾಡಿರುವುದಾಗಿ ಹೇಳಿದ್ದಾರೆ.

ಕಲೈಜ್ಞಾನಂ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ರಜನಿಕಾಂತ್ ಹೊಸ ಮನೆಗೆ ಪ್ರವೇಶಿಸುವ ವಿಡಿಯೋ ಮತ್ತು ಚಿತ್ರಗಳು ಸೋಮವಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 1320 ಚದರ ಅಡಿ ಮನೆ ಅಪಾರ್ಟ್ಮೆಂಟ್ನ ನೆಲ ಮಹಡಿಯಲ್ಲಿದೆ. ರಜನಿಕಾಂತ್ ಅವರನ್ನು ಕಲೈಗ್ನಾನಮ್ ಮತ್ತು ಅವರ ಕುಟುಂಬ ಸ್ವಾಗತಿಸಿದ ಮತ್ತು ಹೊಸ ಮನೆಯಲ್ಲಿ ದೀಪವನ್ನು ಬೆಳಗಿಸಲಾದ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ರಜನೀಕಾಂತ್ ಅವರು ಈ ಹಿಂದೆ ಹಲವರಿಗೆ ಸಹಾಯ ನೋಡಿರುವುದನ್ನು ನಾವು ಸ್ಮರಿಸಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here