ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್ ವಿಶ್ವದಾದ್ಯಂತ ಹೆಸರು ಮಾಡಿದ್ದ ಈಗ ಇತಿಹಾಸ. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ.ಸೂಪರ್​ಸ್ಟಾರ್​ ರಜಿನಿಕಾಂತ್​ ತಮ್ಮ ಸ್ಟೈಲ್​​ಗೆ ಫೇಮಸ್​. ಹಲವಾರು ಸಿನಿಮಾಗಳಲ್ಲಿ ರಜಿನಿ ವಿಭಿನ್ನವಾಗಿ ಸಿಗರೆಟ್ ಸೇದೋ ಸ್ಟೈಲ್​ ನೋಡಿ ಅಭಿಮಾನಿಗಳು ಕೂಡ ಅದನ್ನ ಅನುಕರಿಸಿದ್ದಾರೆ. ಹಾಗೇ ರಜಿನಿಯ ಲುಕ್, ವಾಕಿಂಗ್​ ಸ್ಟೈಲ್​​ ಕೂಡ ಅಷ್ಟೇ ಫೇಮಸ್​. ಈಗ ಸ್ಟೈಲ್​​​ನಲ್ಲಿ ರಜಿನಿಗೆ ಕಾಂಪಿಟಿಷನ್​ ಕೊಡೋಕ್ ಒಬ್ರು ರೆಡಿಯಾಗ್ತಿದ್ದಾರೆ. ಅವರು ಬೇರೆ ಯಾರು ಅಲ್ಲ, ರಜಿನಿಕಾಂತ್ ಮೊಮ್ಮಗ ವೇದ್​.

ಹೌದು, ವೇದ್​​ ಥೇಟ್​​ ರಜಿನಿಕಾಂತ್​ ರೀತಿಯೇ ಜೇಬಲ್ಲಿ ಕೈ ಇಟ್ಟುಕೊಂಡು ನಿಂತಿರೋ ಫೋಟೋವನ್ನ ರಜಿನಿ ಪುತ್ರಿ ಸೌಂದರ್ಯ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ರಜಿನಿಕಾಂತ್​​ ಫೋಟೋ ಜೊತೆ ಮಗನ ಫೋಟೋ ಕಂಪೇರ್​ ಮಾಡಿ ಹಾಕಿದ್ದು, “ತಾತ ಹೇಗೋ ಮೊಮ್ಮಗನೂ ಹಾಗೇ” ಅಂತ ಬರೆದುಕೊಂಡಿದ್ದಾರೆ. ಇನ್ನು ಅಭಿಮಾನಿಗಳು ಈ ಫೋಟೋ ಮೆಚ್ಚಿ ಕಮೆಂಟ್​ ಮಾಡ್ತಿದ್ದು, ನೆಕ್ಸ್ಟ್​​ ಜೆನರೇಷನ್​​ ರಜಿನಿ ರೆಡಿ ಅಂತ ಹೇಳ್ತಿದ್ದಾರೆ.

ಅಂದ್ಹಾಗೆ ವೇದಾ ಕಳೆದ ಫೆಬ್ರವರಿಯಲ್ಲಿ ನಟ, ಉದ್ಯಮಿ ವಿಶಾಗನ್ ವಾನಂಗಮುಡಿ ಜೊತೆ ಮದುವೆಯಾದರು. ಇದಕ್ಕೂ ಮುನ್ನ 2010ರಲ್ಲಿ ಉದ್ಯಮಿ ಆರ್​​. ಅಶ್ವಿನ್​​ ಅವರನ್ನ ಸೌಂದರ್ಯ ವರಿಸಿದ್ದರು. 2017ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಸೌಂದರ್ಯ ಹಾಗೂ ಅಶ್ವಿನ್​ ಮಗನೇ ವೇದ್..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here