ಕನ್ನಡ ಚಿತ್ರರಂಗದ ಡಾ.ಶಿವರಾಜ್ ಕುಮಾರ್ ಅಭಿನಯದ ಸೂರಿ ನಿರ್ದೇಶನದ ಮತ್ತು ಕೆ ಪಿ ಶ್ರೀಕಾಂತ್ ನಿರ್ಮಾಣದ  ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಟಗರು ಚಿತ್ರವನ್ನು ಸೂಪರ್‌ಸ್ಟಾರ್ ರಜನಿಕಾಂತ್ ಅವರು ಇಂದು ಮಧ್ಯಾಹ್ನ ಚೆನೈ ನಲ್ಲಿ ವೀಕ್ಷಿಸಲಿದ್ದಾರೆ. ಇಂದು ಮಧ್ಯಾಹ್ನ ಮೂರು ಗಂಟೆಗೆ ಚೆನೈ ನ ಮಲ್ಟಿಪ್ಲೆಕ್ಸ್ ನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಟಗರು ಚಿತ್ರವನ್ನು ವೀಕ್ಷಿಸಲಿದ್ದಾರೆ.

ಕಳೆದ ತಿಂಗಳು 23 ರಂದು ದೇಶಾದ್ಯಂತ ತೆರೆಕಂಡಿದ್ದ ಡಾ.ಶಿವರಾಜಕುಮಾರ್ ಅಭಿನಯದ ಟಗರು ಚಿತ್ರಕ್ಕೆ ದಾಖಲೆಯ ಓಪನಿಂಗ್ ಸಿಕ್ಕಿತ್ತು.ಟಗರು ಚಿತ್ರದ ಪಾತ್ರಗಳು ಜನರ ಬಾಯಲ್ಲಿ ನಲಿದಾಡುತ್ತಿದ್ದು ನಿರ್ದೇಶಕ ಸೂರಿ ಅವರ ಸ್ಕ್ರೀನ್ ಪ್ಲೇ ಸಿನಿರಸಿಕರಿಗೆ ಮೋಡಿ ಮಾಡಿದೆ.ಇಂದಿಗೂ ಸಹ ತೆರೆಕಂಡ ಎಲ್ಲಾ ಸೆಂಟರ್ ಗಳಲ್ಲೂ ಮೆಚ್ಚುಗೆಯ ಜೊತೆ ತುಂಬಿದ ಪ್ರದರ್ಶನ ಕಾಣುತ್ತಿರುವ ಟಗರು ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ಪೋಲೀಸ್ ಅಧಿಕಾರಿ ಆಗಿ ಅದ್ಬುತವಾಗಿ ಅಭಿನಯಿಸಿದ್ದಾರೆ.

ಇನ್ನು ಟಗರು ಚಿತ್ರದಲ್ಲಿ ಖಡಕ್ ಖಳನಟರಾಗಿ ಧನಂಜಯ್ ,ವಸಿಷ್ಠ ಅದ್ಬುತವಾದ ಅಭಿನಯ ನೀಡಿದ್ದಾರೆ.ಕಳೆದ ವಾರವಷ್ಟೇ ಕನ್ನಡದ ಖ್ಯಾತ ಸಾಹಿತಿ ನಿಸಾರ್ ಅಹಮದ್ ಮತ್ತು ಖ್ಯಾತ ಚಿತ್ರನಟ ಸುದೀಪ್ ಅವರು ಟಗರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಟಗರು ಚಿತ್ರದ ಹಾಡುಗಳು ಕೂಡ ಸಾಕಷ್ಟು ಜನಪ್ರಿಯತೆ ಪಡೆದಿವೆ.ಈಗ ಎಲ್ಲೆಲ್ಲೂ ಟಗರು ಜ್ವರ ಜೋರಾಗಿದೆ.ಅಷ್ಟೇ ಅಲ್ಲದೆ ಟಗರು ಚಿತ್ರ ಮುಂದಿನ ವಾರ ಹೊರದೇಶಗಳಲ್ಲಿ ಅತಿ ಹೆಚ್ಚಿನ ಪ್ರದರ್ಶನ ಕಾಣುವ ಮೂಲಕ ಹೊಸ ದಾಖಲೆ ಸಹ ಬರೆಯಲಿದೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here