ಉತ್ತರ ಪ್ರದೇಶದಲ್ಲಿನ ಸಾರಿಗೆ ನಿಗಮವು ಕಳೆದ ಮೂರು ವರ್ಷಗಳಿಂದಲೂ ಸಹಾ ರಕ್ಷಾ ಬಂಧನದ ವಿಶೇಷವಾಗಿ ಮಹಿಳೆಯರಿಗೆ ಉಡುಗೊರೆಗಳನ್ನು ನೀಡುತ್ತಾ ಬರುತ್ತಿದೆ. ಈ ವರ್ಷ ಕೂಡಾ ಅದೇ ಸಂಪ್ರದಾಯವನ್ನು ಮುಂದುವರೆಸಿರುವ ಸರ್ಕಾರವು ಇಂದು ರಕ್ಷಾ ಬಂಧನದ ಪರ್ವ ದಿನದಂದು ಮಹಿಳೆಯರಿಗಾಗಿ ಫ್ರೀ ರೈಡ್ ಅಥವಾ ಉಚಿತ ಪ್ರಯಾಣದ ಕೊಡುಗೆಯನ್ನು ರಕ್ಷಾ ಬಂಧನದ ಉಡಗೊರೆಯನ್ನು ನೀಡಿದೆ.‌ ಇಂದು ಇಲ್ಲಿನ ಮಹಿಳೆಯರಿಗೆ ಎಲ್ಲಾ ಮಾದರಿಯ ಬಸ್ ಗಳಲ್ಲಿ ಕೂಡಾ ಉಚಿತ ಪ್ರಯಾಣವನ್ನು ಕಲ್ಪಿಸುವಂತೆ ಸಿಎಂ ಯೋಗಿ ಆದಿತ್ಯಾನಾಥ್ ಅವರು ಆದೇಶವನ್ನು ನೀಡಿದ್ದಾರೆ.

ಭಾನುವಾರ ಆಗಸ್ಟ್​​ 3 ರಕ್ಷಾ ಬಂಧನದ ದಿನವಾಗಿದ್ದು, ಈ ದಿನ ಎಲ್ಲಾ ಸಿಹಿ ತಿನಿಸುಗಳ ಅಂಗಡಿಗಳನ್ನು ಕೂಡಾ ತೆರೆಯಲು ಇಲ್ಲಿನ ಸರ್ಕಾರವು ಸೂಚನೆಯನ್ನು ನೀಡಲಾಗಿದೆ‌.‌ ಇದೇ ರೀತಿಯಲ್ಲಿ ರಾಜಸ್ಥಾನದಲ್ಲಿ ಕೂಡಾ ಮಹಿಳೆಯರಿಗೆ ಇಂದು ಉಚಿತ ಬಸ್ ಪ್ರಯಾಣವನ್ನು ಇಲ್ಲಿನ ಸರ್ಕಾರವು ನೀಡಿದೆ‌. ಕಳೆದ ಗುರುವಾರದಂದು ಈ ವಿಚಾರವಾಗಿ ಸಿಎಂ ಅಶೋಕ್ ಗೆಹ್ಲೋಟ್ ಬಗ್ಗೆ ಘೋಷಣೆ ಮಾಡಿದ್ದರು. ಆದರೆ ಉತ್ತರ ಪ್ರದೇಶದಲ್ಲಿ ಇದ್ದಂತಹ ಕೊಡುಗೆಗೆ ರಾಜಸ್ಥಾನದಲ್ಲಿನ ಕೊಡುಗೆಗೆ ಸ್ವಲ್ಪ ವಿಭಿನ್ನವಾಗಿದೆ.

ರಾಜಸ್ಥಾನದಲ್ಲಿ ಮಹಿಳೆಯರಿಗೆ ಎ.ಸಿ, ವೋಲ್ವೋ ಹಾಗೂ ಆಲ್​ ಇಂಡಿಯಾ ಪರ್ಮಿಟ್​ ಬಸ್​ಗಳನ್ನ ಹೊರತುಪಡಿಸಿ, ರಾಜಸ್ಥಾನದ ಸಾರಿಗೆಯ ಸಾಮಾನ್ಯ ಹಾಗೂ ಎಕ್ಸ್​ಪ್ರೆಸ್​ ಬಸ್​​ಗಳಲ್ಲಿ ರಕ್ಷಾ ಬಂಧನದ ಪ್ರಯುಕ್ತ ಉಚಿತವಾದ ಪ್ರಯಾಣ ಸೌಲಭ್ಯ ಒದಗಿಸಿದ್ದು, ಹಬ್ಬದಂದು ಮಹಿಳೆಯರಿಂದ ಬಸ್ ನಲ್ಲಿ ಟಿಕೆಟ್​ ಹಣ ಪಡೆಯುವುದಿಲ್ಲ ಎಂದು ತಿಳಿಸಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here