ದುನಿಯಾ ವಿಜಯ್ ಅವರ ನಿರ್ದೇಶನದ ಮೊದಲ ಸಿನಿಮಾ ಸಲಗ. ಈ ಸಿನಿಮಾ ಚಿತ್ರೀಕರಣ ಆರಂಭವಾದ ದಿನದಿಂದಲೂ ಕೂಡಾ ಒಂದಲ್ಲಾ ಒಂದು ವಿಶೇಷತೆಯಿಂದ ಎಲ್ಲರ ಗಮನವನ್ನು ಸೆಳೆಯುತ್ತಲೇ ಇದೆ‌‌. ವಿಶೇಷ ಎಂದರೆ ದುನಿಯಾ ವಿಜಯ್ ಅವರು ಈ ಸಿನಿಮಾಕ್ಕೆ ನಾಯಕ ಹಾಗೂ ನಿರ್ದೇಶಕ. ಸಾಕಷ್ಟು ಶ್ರಮವಹಿಸಿ ಒಂದು ಸೂಪರ್ ಹಿಟ್ ಸಿನಿಮಾವನ್ನು ನೀಡಬೇಕೆಂದು, ತಮ್ಮನ್ನು ತಾವು ಕಳೆದ ಕೆಲವು ತಿಂಗಳುಗಳಿಂದ ಕೂಡಾ ಸಂಪೂರ್ಣವಾಗಿ ಸಲಗ ಸಿನಿಮಾದ ಚಿತ್ರೀಕರಣ ಹಾಗೂ ಇನ್ನಿತರೆ ಸಿನಿಮಾ ಸಂಬಂಧಿತ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈಗ ಸಲಗ ಚಿತ್ರೀಕರಣ ನಡೆಯುತ್ತಿದ್ದ ಸ್ಥಳದಲ್ಲಿ ಒಂದು ವಿಶೇಷ ನಡೆದಿದೆ‌. ನಟ ದುನಿಯಾ ವಿಜಯ್ ಅವರು ದಕ್ಷಿಣದ ಸೂಪರ್ ಸ್ಟಾರ್ ರಜನೀಕಾಂತ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಅದಕ್ಕಾಗಿಯೇ ಕೆ.ಆರ್. ಮಾರ್ಕೆಟ್ ರಜನೀಕಾಂತ್ ಅಭಿಮಾನಿಗಳ ಸಂಘದವರು ರಜನೀಕಾಂತ್ ಅವರ ಜನ್ಮದಿನವನ್ನು ಆಚರಣೆ ಮಾಡುವ ಸಲುವಾಗಿ ಸಲಗ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಬಂದು, ಅಲ್ಲಿ ನಟ ನಿರ್ದೇಶಕ ವಿಜಯ್ ಹಾಗೂ ಚಿತ್ರ ತಂಡದೊಂದಿಗೆ ರಜನೀಕಾಂತ್ ಅವರ ಜನ್ಮ ದಿನವನ್ನು ಆಚರಿಸಿದ ಸಂಭ್ರಮ ಪಟ್ಟಿದ್ದಾರೆ.

ಇದೊಂದು ವಿಶೇಷವೇ ಸರಿ. ದುನಿಯಾ ವಿಜಯ್ ಅವರು ಕೂಡಾ ತಾವು ಮೆಚ್ಚಿರುವ, ತಮ್ಮ ಅಭಿಮಾನ ನಟನ ಜನ್ಮದಿನವನ್ನು ಅಭಿಮಾನಿಗಳ ಜೊತೆ ಸೇರಿ ಕೇಕ್ ಕತ್ತರಿಸಿ ಸಂಭ್ರಮ ಪಟ್ಟಿದ್ದಾರೆ. ಸಲಗ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಇತ್ತೀಚೆಗಷ್ಟೇ ಸಲಗ ಸಿನಿಮಾಕ್ಕಾಗಿ ಬೆಂಗಳೂರಿನ ಬಸವನಗುಡಿಯ ಸುಪ್ರಸಿದ್ಧ ಕಡಲೇ ಕಾಯಿ ಪರಿಶೆಯನ್ನು ಕೂಡಾ ಮತ್ತೊಮ್ಮೆ ಸೆಟ್ ಹಾಕಿ ಮಾಡಲಾಗುತ್ತದೆ ಎಂದು ಚಿತ್ರ ನಿರ್ಮಾಪಕ ಶ್ರೀಕಾಂತ್ ಅವರು ಹೇಳಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು. ಸಲಗ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವುದಂತೂ ನಿಜ.ಇದರ ಜೊತೆಗೆ ಇದೇ ತಿಂಗಳ 18 ರಂದು ಸಲಗ ಚಿತ್ರದ ಮೇಕಿಂಗ್ ವೀಡಿಯೋ ಬಿಡುಗಡೆ ಅಗಲಿದ್ದು ಅಭಿಮಾನಿಗಳು ಸಲಗ ಚಿತ್ರದ ಮೇಲೆ ಇಟ್ಟಿರುವ ನಿರೀಕ್ಷೆಯನ್ನು ಈ ಮೇಕಿಂಗ್ ವೀಡಿಯೊ ದುಪ್ಪಟ್ಟು ಮಾಡುವುದು ಗ್ಯಾರಂಟಿ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here