ಕನ್ನಡದ ಮೇರು ನಟ ಎಂದರೆ ತಟ್ಟನೆ ನೆನಪಾಗುವುದು ನಟಸಾರ್ವಭೌಮ ಡಾ.ರಾಜ್‍ಕುಮಾರ್. ಅವರು ಬೆಳೆದ ಎತ್ತರವನ್ನು ನಾವು ಊಹೆ ಮಾಡಿಕೊಳ್ಳುವುದು ಕೂಡಾ ಸಾಧ್ಯವಿಲ್ಲ. ಅವರ ಘನತೆಯನ್ನು ವರ್ಣಿಸಲು ಪದಗಳು ಸಾಲವು. ಡಾ.ರಾಜ್‍ಕುಮಾರ್ ಅವರ ಜೀವನವೇ ಒಂದು ಬೃಹತ್ ಗ್ರಂಥ. ಅವರ ವಿಚಾರಧಾರೆ ಗಳು ಬಹಳ ಉನ್ನತವಾದವು. ಇಷ್ಟೆಲ್ಲಾ ಘನತೆ ಗೌರವವೆತ್ತ ಅಣ್ಣಾವ್ರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುವ ಗುಣ ಹೊಂದಿದ್ದರು. ತನ್ನ ಸ್ಥಾನದ ಬಗ್ಗೆ, ಜನರು ತನ್ನನ್ನು ಅಭಿಮಾನಿಸುವ ಪರಿಯನ್ನು ನೋಡಿ ಗರ್ವ ಪಟ್ಟವರು ಅಲ್ಲವೇ ಅಲ್ಲ. ಚಿತ್ರರಂಗದಲ್ಲಿದ್ದ ಇತರ ನಟರು ಕೂಡಾ ತನ್ನಂತೆ, ಅವರಿಗೂ ತನಗೆ ಸಿಗುವಂತ ಗೌರವ ಸಿಗಬೇಕೆಂಬ ಹೃದಯ ಶ್ರೀಮಂತಿಕೆಯನ್ನು ಹೊಂದಿದ್ದವರು ಅಣ್ಣಾವ್ರು.

ತಾನು ಇತರರಿಗಿಂತ ಎಂದೂ ದೊಡ್ಡವನಲ್ಲ ಎಂಬ ಮಾನೋಭಾವ ಹೊಂದಿದ್ದರು ಎಂಬುದಕ್ಕೆ ಒಂದು ಘಟನೆ ಸಾಕ್ಷಿಯಾಗುತ್ತದೆ. ಅದು ಒಡಹುಟ್ಟಿದವರು ಸಿನಿಮಾ ಬಿಡುಗಡೆಯಾಗುವ ಸಮಯ. ಈ ಚಿತ್ರದಲ್ಲಿ ಅಣ್ಣಾವ್ರು ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರು ಸೋದರರಾಗಿ ನಟಿಸಿದ್ದರು. ಆದ್ದರಿಂದಲೇ ಇಬ್ಬರೂ ನಟರ ಅಭಿಮಾನಿಗಳಿಗೆ ಅದೊಂದು ಹಬ್ಬ. ಆ ಸಂದರ್ಭದಲ್ಲಿ ಕಪಾಲಿ ಚಿತ್ರ ಮಂದಿರದ ಬಳಿ ಡಾ.ರಾಜ್ ಅವರ 63 ಅಡಿಗಳ ಕಟೌಟ್ ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದ್ದಂತೆ. ಆಗ ಅಣ್ಣಾವ್ರು ನಿರ್ದೇಶಕರನ್ನು ಅಂಬರೀಶ್ ಅವರ ಎಷ್ಟು ಅಡಿ ಎತ್ತರದ ಕಟೌಟ್ ಇಡುವಿರಿ. ಇಟ್ಟರೆ ನನ್ನ ಕಟೌಟ್ ಗಿಂತ ಸ್ವಲ್ಪ ಎತ್ತರವಾಗಿ ಅಂಬರೀಶ್ ಅವರದು ಇರಬೇಕು ಎಂದರಂತೆ.

ನಿರ್ದೇಶಕರು ನಿಮ್ಮ ಕಟೌಟ್ ಎತ್ತರ ಕಡಿಮೆಯಾದರೆ ಅಭಿಮಾನಿಗಳು ಬೇಸರಿಸಿಕೊಳ್ಳುತ್ತಾರೆ ಎಂದಾಗ ರಾಜ್‍ಕುಮಾರ್ ಅವರು ಹಾಗಾದರೆ ಅಂಬರೀಶ್ ಅವರ ಕಟೌಟ್ ಕೂಡಾ ನನ್ನ ಕಟೌಟ್ ಗೆ ಸರಿಸಮಾನವಾಗಿ ಇರಬೇಕೆಂದು ತಾಕೀತು ಮಾಡಿದರಂತೆ. ಅಲ್ಲದೆ ಒಂದರ್ಧ ಅಡಿ ಕಡಿಮೆಯಾದರೆ ನಾನೇ ಅದನ್ನು ತೆರವುಗೊಳಿಸುವುದಾಗಿಯೂ ಹೇಳಿದರಂತೆ. ಆಗ ಅಣ್ಣಾವ್ರ ಇಚ್ಚೆಯಂತೆ ಅಂಬರೀಶ್ ಅವರ ಕಟೌಟ್ ಅನ್ನು ಅಣ್ಣಾವ್ರ ಕಟೌಟನ ಸರಿ ಸಮಾನವಾಗಿ ನಿಲ್ಲಿಸಿದರಂತೆ. ಅಲ್ಲದೆ ಅಣ್ಣಾವ್ರೇ ಸ್ವತಃ ನಿರ್ದೇಶಕರ ಜೊತೆಗೆ ಕಾರಿನಲ್ಲಿ ಸಿನಿಮಾ ಮಂದಿರದ ಬಳಿ ಹೋಗಿ ಕಟೌಟಗಳನ್ನು ನೋಡಿ ಬಂದರಂತೆ.. ಈ ಒಂದು ಘಟನೆ ಸಾಕು ಅಣ್ಣಾವ್ರ ಹೃದಯವಂತಿಕೆಯನ್ನ ತಿಳಿಯಲು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here