ಸುಮಲತ ಅಂಬರೀಶ್ ಅವರು ಬುಧವಾರ ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ , ಅವರು ಬಹಳ ಅರ್ಥಪೂರ್ಣವಾದ ಮಾತುಗಳನ್ನು ಆಡಿದ್ದಾರೆ. ಸುಮಲತ ಅವರು ಮಾತನಾಡುತ್ತಾ ಅಂಬರೀಶ್ ಅವರ ಸ್ಮಾರಕ ನಿಧಾನವಾಗಿಯೇ ಆಗಲಿ, ಅದರಿಂದ ನಮಗೆ ಸಮಸ್ಯೆಯೇನಿಲ್ಲ. ಆದರೆ ಅದಕ್ಕಿಂದ ಮೊದಲು, ಡಾ. ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಈ ಇಬ್ಬರು ನಟರ ಸ್ಮಾರಕಗಳ ಕಾರ್ಯ ಪೂರ್ಣವಾಗಲಿ, ಅದಾದ ನಂತರವೇ ಅಂಬರೀಶ್ ಅವರು ಸ್ಮಾರಕ ಆಗಲಿ ಎಂದು ಹೇಳಿದ್ದಾರೆ‌. ಇಂದು ರಾಜ್ ಕುಮಾರ್ ಅವರ ಜನ್ಮದಿನದ ಈ ಸಂದರ್ಭದಲ್ಲಿ ಸುಮಲತ ಅವರು ಹೇಳಿರುವ ಮಾತು ಆಲೋಚಿಸಲೇ ಬೇಕಾದ ವಿಷಯವಾಗಿದೆ.

ಬೆಂಗಳೂರಿನಲ್ಲಿ ಅವರು ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡುತ್ತಾ,   ಅಂಬರೀಶ್ ಅವರೊಂದಿಗಿನ ನೆನಪುಗಳು ಐದು ತಿಂಗಳು ಅಲ್ಲ ಐದು ಕ್ಷಣವೂ ಕೂಡಾ ಮಾಸುವಂತದ್ದಲ್ಲ ಎಂದಿದ್ದಾರೆ. ಅಲ್ಲದೆ ಅಂಬರೀಶ್ ಅವರ ಪುಣ್ಯ ಸ್ಮರಣೆ ಹಾಗೂ ಅಣ್ಣಾವ್ರ ಹುಟ್ಟುಹಬ್ಬ ಒಟ್ಟಿಗೆ ಇರೋದು ಕಾಕತಾಳಿಯ. ಇಬ್ಬರು ಇದ್ದಾಗ ಬಹಳ ಆತ್ಮೀಯವಾಗಿದ್ದರು. ಅವರು ಸಾಕಷ್ಟು ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದರು. ಎಂದು ಎಂದು ಡಾ. ರಾಜ್ ಕುಮಾರ್ ಮತ್ತು ಅಂಬರೀಶ್ ಅವರ ಸ್ನೇಹವನ್ನು ಸ್ಮರಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಚುನಾವಣೆ ವಿಚಾರವಾಗಿ ಬೆಟ್ಟಿಂಗ್ ಅನ್ನುವುದು ನಿಜಕ್ಕೂ ತಪ್ಪು ಅದನ್ನು ನಾನು ವಿರೋಧಿಸುತ್ತೆನೆ ಎಂದ ಅವರು, ಯಾರೂ ಕೂಡಾ ಬೆಟ್ಟಿಂಗ್ ಕಟ್ಟಬಾರದು ಎಂದು ಮನವಿಯೊಂದನ್ನು ಮಾಡಿದ್ದಾರೆ. ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬವಾದ ಇಂದು, ರಾಜ್ ಅವರು ಸಮಾಧಿಗೆ ತೆರಳಿ ರಾಜ್ ಕುಮಾರ್ ಸಮಾಧಿಗೆ ನಮಸ್ಕರಿಸಿ, ಹಿರಿಯ ನಟನ ಆಶೀರ್ವಾದವನ್ನು ಅವರು ಪಡೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here