ಕೊರೊನಾ ವೈರಸ್ ನ ಆಯುಷ್ಯ ಯಾವುದೇ ವಸ್ತು, ಮೆಟಲ್ ಪದಾರ್ಥಗಳ ಮೇಲೆ ಸುಮಾರು ಎಂಟು ಗಂಟೆಗಳು ಎನ್ನಲಾಗಿದೆ. ಕೊರೊನಾ ಸೋಂಕಿತ ವ್ಯಕ್ತಿ ಮುಟ್ಟಿದ , ಅವರ ದೇಹದ ಯಾವುದೇ ಒಂದು ದ್ರವ ಸೋಕಿದ ವಸ್ತುವಿನ ಮೇಲೆ ಕೊರೊನಾ ವೈರಸ್ ಸುಮಾರು ಎಂಟರಿಂದ ಹತ್ತು ಗಂಟೆಗಳ ಕಾಲ ಇದ್ದು, ಅದನ್ನು ಇತರರು ಮುಟ್ಟಿದರೆ ಸೋಂಕು ಹರಡುವ ಸಂಭವ ಇರುತ್ತದೆ. ಇದನ್ನು ತಡೆಯುವ ಉದ್ದೇಶದಿಂದಲೇ ಜನತಾ ಕರ್ಫ್ಯೂ ಎನ್ನಲಾಗಿದೆ. ಒಂದು ದಿನದ ಕರ್ಫ್ಯೂ ಇಂದ ಅದೆಷ್ಟೋ ಪ್ರಮಾಣದಲ್ಲಿ ಸೋಂಕು ಹರಡುವಿಕೆಯನ್ನು ತಡೆಯಬಹುದು ಎಂಬುದು ಮೋದಿಯವರ ಯೋಜನೆಯ ಉದ್ದೇಶ ಎನ್ನಲಾಗಿದೆ.

ಕೊರೊನ ಜಾಗೃತಿಗಾಗಿ ಇದೇ ಭಾನುವಾರ “ಜನತಾ ಕರ್ಫ್ಯೂ” ಹಮ್ಮಿಕೊಳ್ಳಲು ರಾಷ್ಟ್ರದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚಿಸಿದ್ದಾರೆ. “ಜನತಾ ಕರ್ಫ್ಯೂ” ಎಂದರೆ ಭಾನುವಾರ ಬೆಳಿಗ್ಗೆ 7ಗಂಟೆಯಿಂದ 9:00 ಗಂಟೆ ತನಕ ಯಾರೂ ಸಹ ಮನೆಗಳಿಂದ ಹೊರಗಡೆ ಬರದೇ ಮನೆಯಲ್ಲಿದ್ದುಕೊಂಡೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಮನವಿ ಮಾಡಿದ್ದಾರೆ. ಇನ್ನು ಆದಷ್ಟು ಮನೆಯಲ್ಲಿದ್ದುಕೊಂಡೇ ಎಲ್ಲರೂ ಇನ್ನೂ ಎರಡು-ಮೂರು ವಾರಗಳ ಕಾಲ ಕೆಲಸವನ್ನು ಮಾಡಿಕೊಳ್ಳುವುದು ಉತ್ತಮ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಇದೇ ವೇಳೆ ಭಾನುವಾರ ಸಂಜೆ 5 ಗಂಟೆಗೆ ಎಲ್ಲರೂ ನಿಮ್ಮ ಮನೆಗಳಿಂದ ನಿಮ್ಮ ಮನೆಯ ಕಿಟಕಿಗಳಿಂದ ಚಪ್ಪಾಳೆ ತಟ್ಟುವ ಮೂಲಕ ಕೊರೊನ ವಿರುದ್ಧ ಹೋರಾಡುತ್ತಿರುವ ಎಲ್ಲಾ ವೈದ್ಯಕೀಯ ಸಿಬ್ಬಂದಿ ಹಾಗೂ ಎಲ್ಲಾ ರೀತಿಯ ಜನತೆಗೆ ಅಭಿನಂದನೆಗಳನ್ನು ತಿಳಿಸಬೇಕು ಎಂದು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ.

ಮೋದಿಯವರು ಕರೆಕೊಟ್ಟಿರುವ ಜನತಾಕರ್ಫ್ಯೂ  ಅಭಿಯಾನಕ್ಕೆ ಕರ್ನಾಟಕದ ದೊಡ್ಮನೆ ಕುಟುಂಬ ಸಹ ಸಾಥ್ ನೀಡಿದೆ.  ಈ ಬಗ್ಗೆ ಡಾ. ರಾಜಕುಮಾರ್ ಕುಟುಂಬದ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್ ಗಳು ಸೇರಿದಂತೆ  ರಾಘವೇಂದ್ರ ರಾಜ್ ಕುಮಾರ್ ಅವರು ಸಹ ಜನತಾ ಕರ್ಫ್ಯೂ ಬೆಂಬಲಿಸುವಂತೆ ಪೋಸ್ಟ್ ಶೇರ್ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here