ಕನ್ನಡ ಚಿತ್ರರಂಗದ ವರನಟ ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರ ಮೊದಲ ಚಿತ್ರ ಬೇಡರ ಕಣ್ಣಪ್ಪ. ಕನ್ನಡ ಚಿತ್ರರಂಗಕ್ಕೆ ಮುತ್ತುರಾಜ್ ಅವರನ್ನು ಪರಿಚಯಿಸಿದ ಚಿತ್ರ ಇದು.ಅಂದಿನ ಕಾಲದಲ್ಲಿ ಕನ್ನಡ ಚಿತ್ರಗಳನ್ನು ತಯಾರು ಮಾಡುವುದು ಸುಲಭದ ವಿಷಯವಾಗಿರಲಿಲ್ಲ.

ವರ್ಷಕ್ಕೆ ಒಂದು ಸಿನಿಮಾ ತಯಾರು ಮಾಡಿ ಅದನ್ನು ಪ್ರದರ್ಶನ ಮಾಡುವುದು ದೊಡ್ಡ ಸಾಹಸವಾಗಿತ್ತು.1954 ರಲ್ಲಿ ತೆರೆಗೆ ಬಂದ ಬೇಡರ ಕಣ್ಣಪ್ಪ ಚಿತ್ರ ರಾಜ್‍ಕುಮಾರ್ ಅವರಿಗೂ ಮೊಟ್ಟಮೊದಲ ಚಿತ್ರವಾಗಿತ್ತು.

ಬೇಡರ ಕಣ್ಣಪ್ಪ ಚಿತ್ರವನ್ನು ಸುಮಾರು ಆರು ತಿಂಗಳುಗಳ ಕಾಲ ಚಿತ್ರಿಸಲಾಗಿತ್ತು.ಆರು ತಿಂಗಳಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ಅಭಿನಯಿಸಿದ್ದ ರಾಜ್‍ಕುಮಾರ್ ಅವರಿಗೆ ಒಟ್ಟು 1800 ರೂಪಾಯಿಗಳನ್ನು ಸಂಭಾವನೆ ರೂಪದಲ್ಲಿ ಕೊಡಲಾಗಿತ್ತು .

ಅಂದರೆ ತಿಂಗಳಿಗೆ 300 ರೂಗಳನ್ನು ಬೇಡರ ಕಣ್ಣಪ್ಪ ಚಿತ್ರತಂಡ ರಾಜ್‍ಕುಮಾರ್ ಅವರಿಗೆ ಕೊಟ್ಟಿತ್ತು.1953 ರ ಆಗಸ್ಟ್ ತಿಂಗಳಲ್ಲಿ ಬೇಡರ ಕಣ್ಣಪ್ಪ ಚಿತ್ರೀಕರಣ ಆರಂಭವಾಗಿತ್ತು.ಬೇಡರ ಕಣ್ಣಪ್ಪ ಚಿತ್ರ 1954 ರ ಮೇ 7 ರಂದು ರಾಜ್ಯದ ಸುಮಾರು 20 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಅಲ್ಲಿಯವರೆಗೂ 20 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಯಾವುದೇ ಕನ್ನಡ ಚಿತ್ರ ಇರಲಿಲ್ಲ.20 ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಬೇಡರ ಕಣ್ಣಪ್ಪ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಕಲೆಕ್ಷನ್ ಮಾಡಿದ ಮೊದಲ ಚಿತ್ರವಾಗಿ ಹೊರಹೊಮ್ಮಿತು.

ರಾಜ್‍ಕುಮಾರ್ ಅವರ ಮೊದಲ ಚಿತ್ರವೇ ರಾಜ್‍ಕುಮಾರ್ ಅವರಿಗೆ ಬಿಗ್ ಬ್ರೇಕ್ ನೀಡಿತು.ರಾಜ್‍ಕುಮಾರ್ ಅಂದೇ ಕನ್ನಡ ಚಿತ್ರರಂಗದ ಜನಪ್ರಿಯ ನಟರಾಗಿ ಪ್ರಖ್ಯಾತಿಯಾದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here