ಇಂದು ಡಾ.ರಾಜ್‍ಕುಮಾರ್ ಅವರ ಜನ್ಮ‌ ದಿನದ ಸಲುವಾಗಿ ಹಲವು ಗಣ್ಯರು ಶುಭಾಶಯವನ್ನು ಕೋರುತ್ತಾ ಅವರ ಸ್ಮರಣೆಯನ್ನು ಮಾಡುತ್ತಿದ್ದಾರೆ. ಅಂತಹ ಗಣ್ಯರಲ್ಲಿ ಮೈಸೂರು ಅರಸರ ವಾರಸುದಾರ , ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೂಡಾ ಡಾ.ರಾಜ್‍ಕುಮಾರ್ ಅವರನ್ನು ಸ್ಮರಿಸಿದ್ದಾರೆ. ಹಳೆಯ ಕೆಲವು ನೆನಪುಗಳನ್ನು ಸ್ಮರಿಸುವ ಮೂಲಕ ಯದುವೀರ್ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾಮಜಿಕ ಜಾಲತಾಣಗಳಲ್ಲಿ ಪ್ರಮುಖವಾದ ಫೇಸ್ ಬುಕ್ ನಲ್ಲಿ ಹಳೆಯ ಫೋಟೋವೊಂದನ್ನು ಹಾಕುವ ಮೂಲಕ ಯದುವೀರ್ ಅವರು ರಾಜ್ ಅವರನ್ನು ಸ್ಮರಿಸಿದ್ದಾರೆ.

ಯದುವೀರ್ ಅವರು ಫೇಸ್ ಬುಕ್ ನಲ್ಲಿ ಅವರ ತಾತ ಜಯಚಾಮರಜ ಒಡೆಯರ್ ಹಾಗೂ ಡಾ. ರಾಜ್‍ಕುಮಾರ್ ಅವರನ್ನು ಸನ್ಮಾನಿಸುತ್ತಿರುವ ಫೋಟೋವನ್ನು ಹಾಕಿದ್ದಾರೆ. ಈ ಮೂಲಕ ರಾಜ್ ಅವರು ಹಾಗೂ ರಾಜ ಕುಟುಂಬದ ಸಂಬಂಧಗಳ ನೆನಪನ್ನು ಅವರು ಅಭಿಮಾನಿಗಳ ಜೊತಗೆ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಡಾ. ರಾಜ್‍ಕುಮಾರ್ ಅವರು ಕನ್ನಡ ಚಿತ್ರ ರಂಗದ ಧೃವತಾರೆ ಎಂದು ಕೂಡಾ ಹೇಳಿದ್ದಾರೆ. ಯದುವೀರ್ ಅವರು ಶೇರ್ ಮಾಡಿರುವ ಫೋಟೋ ಬಹಳಷ್ಟು ಜನರ ಮೆಚ್ಚುಗೆಯನ್ನು ಪಡೆದಿದೆ.

ಇಂದು ರಾಜ್ಯದೆಲ್ಲೆಡೆ ಅಭಿಮಾನಿಗಳು ಅಣ್ಣಾವ್ರ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಸರ್ಕಾರ ಕೂಡಾ ಅವರ ಜನ್ಮದಿನವನ್ನು ಆಚರಿಸುವುದಾಗಿ ಘೋಷಣೆಯನ್ನು ಮಾಡಿತ್ತು. ಹಲವರು ಈಗಾಗಲೇ ಅಣ್ಣಾವ್ರ ಸಮಾಧಿ ಸ್ಥಳಕ್ಕೆ ಹೋಗಿ ಸಮಾಧಿಯ ದರ್ಶನ ಮಾಡಿ ಬಂದಿದ್ದಾರೆ.‌ ಅವೆಲ್ಲವುಗಳ‌ ನಡುವೆ ಸೆಲೆಬ್ರಿಟಿ ಗಳು ಕೂಡಾ ಅಣ್ಣಾವ್ರ ಫೋಟೋ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಶುಭಾಶಯಗಳನ್ನು ಹೇಳಿದ್ದಾರೆ.

ಕನ್ನಡ ಚಲನಚಿತ್ರರಂಗದ ಮೇರು ನಟ, ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ 90 ನೇ ಜನ್ಮದಿನದಂದು…

Yaduveer Krishnadatta Chamaraja Wadiyar यांनी वर पोस्ट केले मंगळवार, २३ एप्रिल, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here