ಕನ್ನಡದ ಸೂಪರ್ ಹಿಟ್ ರಿಯಾಲಿಟಿ ಶೋ ಬಿಗ್ ಬಾಸ್ ಈಗ ಆರನೇ ಸೀಸನ್ ನಡೆಯುತ್ತಿದೆ. ಬಿಗ್ ಬಾಸ್ ಆರಂಭವಾದರೆ ಜನರಿಗೆಲ್ಲಾ ಒಂದು ರೀತಿಯ ಕ್ರೇಜ್. ಇನ್ನು ಈ ಬಾರಿ ಬಿಗ್ ಬಾಸ್ ನಲ್ಲಿ ಅಕ್ಷತಾ ಹಾಗೂ ರಾಕೇಶ್ ಅವರ ನಡವಿನ ಮಾತುಕತೆ, ಅವರ ನಡತೆ ವೀಕ್ಷಕರನ್ನು ಈಗಾಗಲೇ ತಾಳ್ಮೆಗಡುವಂತೆ ಮಾಡಿದ್ದು, ಮಾದ್ಯಮಗಳಲ್ಲಿ , ಬಿಗ್ ಬಾಸ್ ಕನ್ನಡದ ಅಫಿಷೆಯೆಲ್ ಪೇಜ್ ನಲ್ಲಿ ಕೂಡಾ ಇದರ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಹಾಗೂ ಆಕೆಯನ್ನು ಹೊರಗೆ ಕಳುಹಿಸುವಂತೆ ಒತ್ತಾಯ ಹೇರುತ್ತಿದ್ದಾರೆ. ವಿಷಯ ಹೀಗಿರುವಾಗ ಶೋ ದಲ್ಲೇ ಒಂದು ಟಾಸ್ಕ್ ನಡೆಯುವ ಸಂದರ್ಭದಲ್ಲಿ ಇದೇ ವಿಷಯವನ್ನು ಎತ್ತಾಡಿ ರಾಕೇಶ್ ಅವರ ವರ್ತನೆಯ ಬಗ್ಗೆ , ಅವರಿಗೆ ಖಾರವಾಗಿ ಹೇಳಿದ್ದಾರೆ ಸ್ಪರ್ಧಿಯೊಬ್ಬರು.

ಶೋನ ಟಾಸ್ಕ ಒಂದರಲ್ಲಿ ಕವಿತಾ ಮಹಾರಾಣಿಯಾಗಿದ್ದು, ಎರಡು ಟೀಂಗಳು ಆಕೆಯನ್ನು ಒಲಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಈ ಪ್ರಯತ್ನದಲ್ಲಿರುವಾಗ, ಒಂದು ತಂಡದ ನಾಯಕರಾದ ಶಶಿ, ಇನ್ನೊಂದು ತಂಡದ ನಾಯಕರಾದ ರಾಕೇಶ್ ಇಬ್ಬರೂ ಟಾಸ್ಕ್ ಗಳನ್ನು ಕೊಡುತ್ತಿರುತ್ತಾರೆ. ಆಗ ಹಾಡು ಹಾಡಿ ಕವಿತರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ರಾಕೇಶ್ ತಂಡ ಜಯಗಳಿಸುತ್ತದೆ. ಇದಾದ ನಂತರ ಆ್ಯಂಡಿ ಕವಿತ ಟಾಸ್ಕ್ ನಲ್ಲಿ ಮೋಸ ಮಾಡಿದ್ದರೆಂದ ಕೂಗಾಡಿದ್ದಾರೆ.

ಆ್ಯಂಡಿ ಕವಿತ ಅವರ ಬಳಿ, ಜೋರಾಗಿ ಮಾತಾಡುತ್ತಾ ಬೈಯ್ಯುವಾಗ, ಗೆದ್ದ ತಂಡದ ನಾಯಕ ರಾಕೇಶ್ ಆ್ಯಂಡಿಗೆ ಹುಡುಗಿಯರ ವಿಷಯದಲ್ಲಿ ಈ ರೀತಿ ಮಾತನಾಡಬೇಡ ಎಂದಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಆ್ಯಂಡಿ, ರಾಕೇಶ್ ಅವರಿಗೆ ಕಂಡವರ ಹೆಂಡತಿ ಜೊತೆ ನೀನು ಇಲ್ಲಿ ಮಾಡ್ತಾ ಇರೋದೆಲ್ಲಾ ಸರೀನಾ..? ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಅವರ ಆ ಪ್ರಶ್ನೆಗೆ ರಾಕೇಶ್ ಉತ್ತರಿಸದೆ, ಮೌನಕ್ಕೆ ಜಾರಿದರೆ, ಅಕ್ಷತಾ‌ ಕಣ್ಣೀರು ಹಾಕಿದ್ದಾರೆ. ಅಂತೂ ಅಕ್ಷತಾ ಹಾಗೂ ರಾಕೇಶ್ ಇತರರ ಬಾಯಿಗೆ ಒಳ್ಳೆಯ ವಿಷಯವನ್ನು ಕೊಟ್ಟು, ಈಗ‌ ನಗೆ ಪಾಟಲಾಗಿದ್ದಾರೆ.

Photos credit :- voot app

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here