ರಶ್ಮಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬ್ರೇಕಪ್ ಆಗಿ ವರುಷವೇ ಕಳೆದಿದ್ದು, ರಶ್ಮಿಕಾ ಹಾಗೂ ರಕ್ಷಿತ್ ಅವರ ಪ್ರೇಮ, ಅವರ ನಿಶ್ಚಿತಾರ್ಥ ಇದೆಲ್ಲಾ ಆಗ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ನಿಶ್ಚಿತಾರ್ಥ ಆದ ಕೆಲವೇ ದಿನಗಳಲ್ಲಿ ಅವರ ನಡುವೆ ಬ್ರೇಕಪ್ ಆದಾಗ ಅದು ಕೂಡಾ ಸಾಕಷ್ಟು ಸುದ್ದಿಯಾಗಿ ಸದ್ದು ಮಾಡಿತ್ತು. ಈ ವಿಚಾರವಾಗಿ ಇಬ್ಬರೂ ಕೂಡಾ ನಿಖರವಾದ ಕಾರಣವನ್ನು ಮಾತ್ರ ಎಲ್ಲೂ ಹೇಳಿರಲಿಲ್ಲ. ರಕ್ಷಿತ್ ಅವರು ಕೆಲವು ದಿನಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ಕೂಡಾ ದೂರವಾಗಿದ್ದರು‌. ಅಲ್ಲದೆ ಅವರ ಬ್ರೇಕಪ್ ಗೆ ಹಲವು ಕಾರಣಗಳು ವದಂತಿಗಳಾಗಿ ಹರಡಿದ್ದವು.

ರಶ್ಮಿಕಾ ಅವರು ವಿಜಯ್ ದೇವರಕೊಂಡ ಜೊತೆ ಸಿನಿಮಾದಲ್ಲಿ ಲಿಪ್ ಲಾಕ್ ಮಾಡಿದ್ದರಿಂದ ರಕ್ಷಿತ್ ಮತ್ತು ರಶ್ಮಿಕಾ ಅವರ ನಡುವೆ ಬ್ರೇಕ್ ಅಪ್ ಆಯಿತೆಂದೂ, ರಶ್ಮಿಕಾ ಗೆ ತೆಲುಗಿನಲ್ಲಿ ಸಾಕಷ್ಟು ಅವಕಾಶಗಳು ಬಂದಿದ್ದರಿಂದ ಅವರು ಬ್ರೇಕಪ್ ಮಾಡಿಕೊಂಡರೆಂದು ಕೂಡಾ ವದಂತಿಗಳು ಹರಡಿತ್ತು. ಆದರೆ ಈಗ ಖಾಸಗಿ ವೆಬ್ಸೈಟ್ ಒಂದು ಅವರ ನಡುವಿನ ಬ್ರೇಕಪ್ ಗೆ ನಿಜವಾದ ಕಾರಣ ಏನು ಎಂಬುದನ್ನು ಬಹಿರಂಗ ಪಡಿಸಿದ್ದು, ಹರಡಿದ್ದ ವದಂತಿಗಳಿಗೆ ಬ್ರೇಕ್ ಹಾಕಿದೆ. ಹಾಗಾದರೆ ಏನದು ? ಕಾರಣ ತಿಳಿಯೋಣ ಬನ್ನಿ.

ರಕ್ಷಿತ್ ಅವರು ಮದುವೆಗೆ ಮುನ್ನು ಬೆಂಗಳೂರಿನಲ್ಲಿ ಒಂದು ದೊಡ್ಡ ಮನೆ ಕಟ್ವಬೇಕೆಂದು ಬಯಸಿದ್ದರಂತೆ. ಅಲ್ಲದೆ ಈ ವಿಷಯವನ್ನು ರಶ್ಮಿಕಾ ಅವರ ಮನೆಯವರಿಗೆ ತಿಳಿಸಿದಾಗ ಅವರು ಅದಕ್ಕೆ ಅಷ್ಟಾಗಿ ಆಸಕ್ತಿ ತೋರಿಸದೆ, ಎರಡು ಕುಟುಂಬಗಳ ನಡುವೆ ವೈಮನಸ್ಯ ಉಂಟಾಗಿತ್ತು ಎನ್ನಲಾಗಿದೆ. ರಕ್ಷಿತ್ ಅವರು 60 ಕೋಟಿ ವೆಚ್ಚದ ಮನೆಯನ್ನು ಕಟ್ಟುವ ಆಸೆ ಹೊಂದಿದ್ದು, ಅದೇ ಕಾರಣದಿಂದ ನಿಶ್ಚಿತಾರ್ಥ ಮುರಿದು ಬಿತ್ತು. ಆದರೆ ರಕ್ಷಿತ್ ಅವರು ತಮ್ಮ ಮನೆ ಕಟ್ಟುವ ಕನಸನ್ನು ಕೈ ಬಿಡದೆ, ಮದುವೆಯಾಗುವ ಮೊದಲೇ ಮನೆ ಕಟ್ಟುವ ಆಲೋಚನೆ ಮಾಡಿದ್ದಾರೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here