ಲಾಕ್ ಡೌನ್ ನಿಂದ ಅದೆಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ಅದೆಷ್ಟೋ ಜನ ಕಂಗಾಲಾಗಿದ್ದಾರೆ. ಒಪ್ಪೊತ್ತಿನ ಊಟ ಕೂಡಾ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಂಕಷ್ಟದಲ್ಲಿರುವ ಜನರಿಗೆ ತೊಂದರೆಯಾಗದಿರಲೆಂದು ಅನೇಕ ಸೆಲೆಬ್ರಿಟಿಗಳು, ಎನ್.ಜಿ.ಓ.ಗಳು, ಸಂಘ ಸಂಸ್ಥೆಗಳು, ಮುಂದೆ ಬರುತ್ತಿದ್ದಾರೆ. ಇದರ ಹೊರತಾಗಿಯೂ ಅದೆಷ್ಟೋ ಜನರಿಗೆ ಸೌಲಭ್ಯಗಳು ತಲುಪುತ್ತಿಲ್ಲ ಎನ್ನುವುದು ಕೂಡಾ ಸಹಜವಾಗಿದೆ. ಆದರೂ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವವರ ಸೇವೆ ಮಾತ್ರ ಸಾಗುತ್ತಿದ್ದು, ಇದೇ ಹಾದಿಯಲ್ಲಿ ನಟಿಯೊಬ್ಬರು ಸುಮಾರು ಇನ್ನೂರು ಕುಟುಂಬಗಳನ್ನು ದತ್ತು ಪಡೆದು ಅಲ್ಲಿನ ಬಡವರ ನೆರವಿಗೆ ನಿಂತಿದ್ದಾರೆ.

ಟಾಲಿವುಡ್ ನ ಬಹು ಬೇಡಿಕೆಯ ನಟಿ ರಕುಲ್ ಪ್ರೀತ್ ಸಿಂಗ್ ಇಂತಹ ಒಂದು ಅತ್ಯುತ್ತಮ ಎನಿಸಿರುವ ಕಾರ್ಯವನ್ನು ಮಾಡುತ್ತಿದ್ದಾರೆ. ರಕುಲ್ ಗುರು ಗ್ರಾಮದಲ್ಲಿನ ಇನ್ನೂರು ಕುಟುಂಬಗಳನ್ನು ದತ್ತು ಪಡೆದುಕೊಂಡಿದ್ದಾರೆ. ಪ್ರತಿದಿನ ಈ ಕುಟುಂಬಗಳಿಗೆ ಎರಡು ಹೊತ್ತಿನ ಊಟವನ್ನು ನಟಿ ಪೂರೈಕೆ ಮಾಡುತ್ತಿದ್ದಾರೆ. ಎಲ್ಲಾ ಕುಟುಂಬಗಳಿಗೆ ಒಂದೆಡೆ ಆಹಾರವನ್ನು ಸಿದ್ಧಪಡಿಸಿ, ನಂತರ ಅವರಿಗೆ ಅದನ್ನು ತಲುಪಿಸಲಾಗುತ್ತದೆ. ರಕುಲ್ ಪ್ರೀತ್ ಲಾಕ್ ಡೌನ್ ಮುಗಿಯುವವರೆಗೆ ನಾನು ಈ ಕಾರ್ಯವನ್ನು ಮಾಡುವುದಾಗಿ ಹೇಳಿದ್ದಾರೆ.

ಚಿಕ್ಕದೋ, ದೊಡ್ದದೋ ಆದರೆ ಸಹಾಯ ಎನ್ನುವುದು ಈ ಸಂದರ್ಭದಲ್ಲಿ ಮುಖ್ಯ ಎನ್ನುವ ಅವರು, ಜನರಿಗೆ ಊಟ ಪೂರೈಸುವುದು ಮನಸ್ಸಿಗೆ ಸಂತೋಷ ನೀಡುತ್ತದೆ ಎನ್ನುತ್ತಾರೆ. ಇಂತಹ ಸಂದರ್ಭಗಳಲ್ಲಿ ಪ್ರತಿಯೊಬ್ಬರೂ ಕೂಡಾ ತಮ್ಮ ಕೈಲಾದ ಸಹಾಯವನ್ನು ಮಾಡಬೇಕೆಂದು ಆಕೆ ಹೇಳಿದ್ದಾರೆ. ಇದು ನಮ್ಮ ಕರ್ತವ್ಯ ಎಂದಿರುವ ರಕುಲ್ ತಾನು ತನ್ನ ಒಂದು ಸಣ್ಣ ಪ್ರಯತ್ನವನ್ನು ಮಾಡಿರುವುದಾಗಿ ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here