ನಿನ್ನೆ ರಾತ್ರಿ ಇಡೀ ದೇಶದಲ್ಲಿ ಬಡವ ಬಲ್ಲಿದ ಎಂಬ ಬೇಧವಿಲ್ಲದೆ, ಧರ್ಮ ಜಾತಿಗಳ ಕಟ್ಟಳೆಯನ್ನು ಮೀರಿ ಕೊರೊನಾ ಎಂಬ ರೋಗ ಹರಡಿರುವ ಅಂಧಕಾರದಂತಹ ಪರಿಸ್ಥಿತಿಯಿಂದ ರೋಗ ಮುಕ್ತವಾದ ಬೆಳಕು ಮೂಡಲಿ ಎಂದು ಭಾರತ ವಾಸಿಗಳು ದೀಪಗಳನ್ನು ಬೆಳಗುವ ಮೂಲಕ ಹೊಸ ಹಗಲು ನಮ್ಮದಾಗಲಿ, ಕೊರೊನಾ ಸೋಂಕು ತೊಲಗಲಿ ಎಂದು ಪ್ರಾರ್ಥನೆ ಮಾಡಿದರು. ಆದರೆ ಪ್ರಧಾನಿ ಕೊಟ್ಟ ಸಂದೇಶವನ್ನು ಅಸಂಖ್ಯಾತ ಜನರು ಆಚರಣೆ ಮಾಡಿದರು, ತಮ್ಮ ಏಕತೆಯನ್ನು ಪ್ರದರ್ಶನ ಮಾಡಿದರು. ಆದರೆ ಇದನ್ನು ತೆಗಳುವವರು, ಅಪಹಾಸ್ಯ ಮಾಡಿದವರು ಕೂಡಾ ಇದ್ದಾರೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದಲ್ಲ ಒಂದು ಹೇಳಿಕೆಯ ಮೂಲಕ ವಿವಾದಗಳನ್ನು ಸೃಷ್ಟಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನಿಸಿದೆ. ಕಳೆದ ಕೆಲವೇ ದಿನಗಳ ಹಿಂದೆ ನನಗೆ ಕೊರೊನಾ ಬಂದಿದೆ ಎಂದು ಹೇಳಿ, ಅನಂತರ ಅದು ಏಪ್ರಿಲ್ ಫೂಲ್ ಎಂದು ಹೇಳಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿ ಅನೇಕರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಪ್ರಧಾನಿ ದೀಪ ಹೊತ್ತಿಸುವ ಕುರಿತಾಗಿ ಕೂಡಾ ಅವರೊಂದು ವಿಡಿಯೋ ಪೋಸ್ಟ್ ಮಾಡಿ ಎಲ್ಲರ ಗಮನವನ್ನು ಸೆಳೆದಿರುವುದು ಮಾತ್ರವೇ ಅಲ್ಲದೆ, ಕಾಮೆಂಟ್ ಗಳ ಮೂಲಕ ಟೀಕೆ ಮಾಡಿದ್ದಾರೆ.

ರಾಮ್ ಗೋಪಾಲ್ ವರ್ಮ ಬಾಯಲ್ಲಿ ಸಿಗರೇಟ್ ಇಟ್ಟು ಕೊಂಡು, ಲೈಟರ್ ಅನ್ನು ಹೊತ್ತಿಸಿ ಸಿಗರೇಟ್ ಹೊತ್ತಿಸಿ ದೀಪ ಬೆಳಗುವ ವಿಷಯಕ್ಕೆ ವೈರೈಟಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ವರೈಟಿಯಾಗಿ ಸಿಗರೇಟ್ ಬದಲು ಕಡಪ ಬಾಂಬ್ ಇಟ್ಟುಕೊಂಡಿದ್ದರೆ ಚೆನ್ನಾಗಿರುತ್ತಿತ್ತು ಎಂದರೆ, ಮತ್ತೊಬ್ಬರು ಮ್ಯಾಟರ್ ಏನೇ ಆದರೂ ಪಬ್ಲಿಸಿಟಿ ಚೆನ್ನಾಗಿ ಬರೋತರ ಎಚ್ಚರ ವಹಿಸುತ್ತಾರೆ ಎಂದರೆ, ಇನ್ನೂ ಕೆಲವರು ಈತ ಹೀಗೆ ಮಾಡ್ತಾನೆ ಅಂತ ಮೊದಲೇ ಗೊತ್ತಿತ್ತು ಎಂದು ಟೀಕೆ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here