ಬೆಂಗಳೂರು: ರಾಜ್ಯದಲ್ಲಿ ಸದ್ಯದಲ್ಲೇ ಸಾರಿಗೆ ಇಲಾಖೆಯಲ್ಲಿ ಸುಮಾರು 8 ಸಾವಿರ ಹುದ್ದೆಗಳ ನೇಮಕಾತಿಗೆ ಸರ್ಕಾರ ನಿರ್ದಾರ ಮಾಡಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಶಕ್ತಿ ಯೋಜನೆ ನೂರಕ್ಕೆ ನೂರು ಸಕ್ಸಸ್ ಆಗಿದೆ. 80 ಕೋಟಿ ಜನ ಮಹಿಳೆಯರು ಸಂಚಾರ ಮಾಡಿದ್ದಾರೆ. ಹಿಂದಿನ ಸರ್ಕಾರ ಕಳೆದ 4 ವರ್ಷಗಳಿಂದ ಬಸ್ ಖರೀದಿ ಮಾಡಿಲ್ಲ. ಈಗ ಎಲ್ಲಾ ಪ್ರೋಸಸ್ ಆಗಿದೆ, ಐದು ಸಾವಿರ ಹೊಸ ಬಸ್ ಬರಲಿದೆ. 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎಲ್ಲ ರೀತಿಯ ಬಸ್ ಖರೀದಿ ಮಾಡ್ತೀವಿ. 2016 ರಿಂದ 13,800 ಜನ ನಿವೃತ್ತರಾಗಿದ್ದಾರೆ. 8 ಸಾವಿರ ಹುದ್ದೆಗಳ ನೇಮಕಾತಿಗೆ ಸೂಚನೆ ನೀಡಲಾಗಿದೆ ಎಂದರು.
ಸಿಎಂ ಬಳಿ ವೆಹಿಕಲ್ಗೆ ಟ್ಯಾಕ್ಸ್ ಎಗ್ಸೆಂಪ್ಷನ್ ಕೊಡಲು ಕೋರಿದ್ದೇವೆ. 5 ರಿಂದ 15 ಲಕ್ಷದ ವಾಹನಗಳಿಗೆ ಲೈಫ್ ಟ್ಯಾಕ್ಸ್ ಹಾಕಲಾಗುತ್ತಿತ್ತು. ಈ ಬಗ್ಗೆ ಸಂಘಗಳು ಕೇಳಿದ್ದವು. ಹೀಗಾಗಿ ಸಿಎಂ ಬಳಿ ಮನವಿ ಮಾಡಿದ್ದೇವೆ. ಎಲ್ಲೋ ಬೋರ್ಡ್ ನವರು ಲೋನ್ ತಗೋತಾರೆ. ಹಳೆ ಗಾಡಿ ತಗೋತಾರೆ. ಹಾಗಾಗಿ ಹಿಂದಿನ ರೀತಿಯಲ್ಲೇ ಟ್ಯಾಕ್ಸ್ ಇರಲಿದೆ ಎಂದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.