ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತಾಗಿ ಸುಪ್ರೀಂ ಕೋರ್ಟ್ ಆದೇಶ ಹೊರ ಬಿದ್ದ ಕೂಡಲೇ ಕಳೆದ 27 ವರ್ಷಗಳಿಂದ ಉಪವಾಸ ಮಾಡುತ್ತಿದ್ದ ಜಬಲ್ಪುರದ 87 ವಯಸ್ಸಿನ ಊರ್ಮಿಳಾ ಚತುರ್ವೇದಿ ಅವರು ಇತರೆ ಎಲ್ಲರಗಿಂತ ಸಾಕಷ್ಟು ಸಂತಸ ಹಾಗೂ ಸಂಭ್ರಮವನ್ನು ಪಟ್ಟಿದ್ದಾರೆ. ಏಕೆಂದರೆ ಅವರು ಕಳೆದ 27 ವರ್ಷಗಳಿಂದ ರಾಮನಿಗಾಗಿ ಉಪವಾಸ ಮಾಡುತ್ತಿದ್ದರು ಎಂಬುದು ಸತ್ಯ. ಶ್ರೀ ರಾಮನ ಪರಮ ಭಕ್ತೆ ಎನಿಸಿರುವ ಊರ್ಮಿಳಾ ಚತುರ್ವೇದಿ ಅವರನ್ನು ಜಬಲ್ಪುರದ ಶಬರಿ ಎಂದೇ ಕರೆಯಲಾಗಿದ್ದು, 27 ವರ್ಷಗಳ ಅವರ ನಿರೀಕ್ಷೆಗೆ ಈಗ ಫಲ ಸಿಕ್ಕಿದೆ.

87 ವರ್ಷದ ಉರ್ಮಿಲಾ ಚತುರ್ವೇದಿ 1992 ರ ನಂತರ ಆಹಾರವನ್ನು ಸೇವಿಸದೆ ಉಪವಾಸ ಮಾಡುತ್ತಿದ್ದರು. ಅಯೋಧ್ಯೆಯ ವಿವಾದಿತ ರಚನೆಯ ಧ್ವಂಸವಾದ ನಂತರ ದೇಶದಲ್ಲಿ ಗಲಭೆಗಳು ಭುಗಿಲೆದ್ದವು, ರಕ್ತಪಾತ ನಡೆದು ಹಿಂದೂ-ಮುಸ್ಲಿಂ ಸಹೋದರರು ಪರಸ್ಪರ ರಕ್ತ ಹರಿಸಿದರು. ಇದೆಲ್ಲವನ್ನು ನೋಡಿ ದುಃಖಿತರಾದ ಊರ್ಮಿಳಾ ಚತುರ್ವೇದಿ ಅವರು ತುಂಬಾ ದುಃಖಿತರಾಗಿದ್ದು, ಆ ದಿನವೇ ಅವರು ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣವಾಗಿ, ದೇಶದಲ್ಲಿ ಮತ್ತೆ ಹಿಂದು ಮುಸ್ಲಿಂ ಸಹೋದರತ್ವ ಮೂಡಿದಾಗಲೇ ತಾನು ಆಹಾರ ಸೇವಿಸುವುದಾಗಿ ಪ್ರತಿಜ್ಞೆ ಮಾಡಿದ್ದರು.

ನವೆಂಬರ್ 9 ರಂದು ಸುಪ್ರೀಂಕೋರ್ಟ್ ತೀರ್ಪು ಬಂದಾಗ ಊರ್ಮಿಳಾ ಚತುರ್ವೇದಿ ಬಹಳ ಸಂತೋಷ ,ಸಂಭ್ರಮ ಪಟ್ಟು, ಮನೆಯಲ್ಲಿ ರಾಮನಿಗೆ ಭಕ್ತಿಯಿಂದ ವಂದಿಸಿದ್ದಾರೆ. ಬಾಳೆಹಣ್ಣು ಹಾಗೂ ಚಹಾ ಕುಡಿಯುತ್ತಲೇ 27 ವರ್ಷ ಕಳೆದ ಊರ್ಮಿಳಾ ಅವರು ತನ್ನ ಉಪವಾಸ ಸಾರ್ಥಕ ವಾಯಿತು ಎನ್ನುವ ಆಶಾ ಭಾವದಲ್ಲಿ ಇದ್ದಾರೆ. ನಿಜಕ್ಕೂ ಕಲಿಯುಗದಲ್ಲಿ ಕೂಡಾ ದೇವರ ಮೇಲೆ ಅಪಾರ ನಂಬಿಕೆಯನ್ನಿಟ್ಟು, ತಾಳ್ಮೆಯಿಂದ 27 ವರ್ಷಗಳ ಕಾಲ ಉಪವಾಸ ಮಾಡಿದ ಈ ಕಲಿಯುಗದ ಶಬರಿಗೆ ಮೆಚ್ಚುಗೆ ಸೂಚಿಸೋಣ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here