ಅಯೋಧ್ಯೆಯಲ್ಲಿ ಬರಲಿರುವ ಆಗಸ್ಟ್ 5 ರಂದು ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮವು ನಡೆಯಲಿದ್ದು, ಅದಕ್ಕೆ ಈಗಾಗಲೇ ಮುಹೂರ್ತ ನಿರ್ಣಯವಾಗಿದ್ದು, ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ‌ ಈ ಸಂದರ್ಭದಲ್ಲಿ ಈ ಶಿಲಾನ್ಯಾಸ ಕಾರ್ಯಕ್ರಮಕ್ಕೆ ದಲಿತ ಶ್ರೀಗಳಾದ ಮಹಾಮಂಡೇಶ್ವರ ಕನ್ಹಯ್ಯ ಪ್ರಭುನಂದನ್ ಗಿರಿ ಅವರಿಗೆ ಆಹ್ವಾನ ನೀಡಬೇಕೆಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.‌ ಇದರಿಂದ ದೇಶದಲ್ಲಿ ಜಾತಿರಹಿತ ಸಮಾಜವನ್ನು ಸ್ಥಾಪಿಸುವ ಸಾಂವಿಧಾನಿಕ ಉದ್ದೇಶದ ಮೇಲೆ ಒಳ್ಳೆಯ ಪರಿಣಾಮ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ.

ಶಿಲಾನ್ಯಾಸ ಕಾರ್ಯಕ್ರಮಕ್ಕೆ ತನಗೆ ಆಹ್ವಾನ ನೀಡಿಲ್ಲ ಎಂದು ಪ್ರಭುನಂದನ ಗಿರಿ ಶ್ರೀಗಳವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮಾದ್ಯಮಗಳಲ್ಲಿ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಮಾಯಾವತಿಯವರ ಹೇಳಿಕೆ ಗಮನ ಸೆಳೆದಿದೆ. ಅಲ್ಲದೇ ಮಾಯಾವತಿ ಅವರು ಟ್ವೀಟ್ ಮಾಡಿ, ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಶಿಲಾನ್ಯಾಸ ಸಮಾರಂಭಕ್ಕೆ ಆಹ್ವಾನ ನೀಡಿರುವ 200 ಜನ ಸಂತರೊಂದಿಗೆ ದಲಿತ ಶ್ರೀಗಳಿಗೂ ಕೂಡಾ ಆಹ್ವಾನ ನೀಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here