ಸುಪ್ರೀಂ ಕೋರ್ಟ್ ಆದೇಶದಂತೆ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ಅನ್ನು ಬುಧವಾರ ಲೋಕಸಭೆಯಲ್ಲಿ ಪ್ರಧಾನಮಂತ್ರಿಗಳು ಘೋಷಿಸಿದ ಬೆನ್ನಲ್ಲೇ, ಏ.೧೨ರಂದು ರಾಮನವಮಿ ದಿನವೇ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ರಾಮಜನ್ಮಭೂಮಿ ನ್ಯಾಸ್‌ನ ಹಿರಿಯ ಸದಸ್ಯ ಕಮಲ್ ನಯನ್ ತಿಳಿಸಿದ್ದಾರೆ. ಅಂದು ನಿರ್ಮಾಣವೇ ಆರಂಭವಾಗುವುದೋ ಅಥವಾ ಕೇವಲ ಶಿಲಾನ್ಯಾಸ ನಡೆಯಲಿದೆಯೋ ಎನ್ನುವುದನ್ನು ಅವರು ಖಚಿತಪಡಿಸಿಲ್ಲ.

ಆದರೆ ಮಂದಿರ ನಿರ್ಮಾಣ ಪೂರ್ಣಗೊಳ್ಳಲು ಎರಡರಿಂದ ಮೂರು ವರ್ಷಗಳ ಕಾಲ ಹಿಡಿಯುತ್ತದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.ಸೋಮನಾಥ, ವೈಷ್ಣೋ ದೇವಿ, ಅಮರನಾಥ ಮಂದಿರಗಳ ಮಾದರಿಯಲ್ಲಿಯೇ ಶ್ರೀರಾಮ ಮಂದಿರ ಟ್ರಸ್ಟ್ ಕಾರ್ಯ ನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.  ಈ ನಡುವೆ ಮಸೀದಿ ಜಾಗ ಊರಿನಿಂದ ದೂರವಾಗಿದೆ ಎಂದು ಮುಸ್ಲಿಂ ಅರ್ಜಿದಾರರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಸೋಹಾವಲ್ ತಾಲೂಕಿನ ಧನ್ನಿಪುರ ಗ್ರಾಮದಲ್ಲಿ ಸುನ್ನಿ ವಕ್ಫ್‌ಬೋರ್ಡ್‌ಗೆ ಜಮೀನು ಹಂಚಿಕೆ ಪತ್ರ ನೀಡಲಾಗಿದೆ. ಜಿಲ್ಲಾ ಕೇಂದ್ರದಿಂದ ಇದು ೨೫ ಕಿ.ಮೀ ದೂರವಿದ್ದು, ಮಹತ್ವದ ಜಾಗವಾಗಿಲ್ಲ ಎಂದು ಮುಸ್ಲಿಂ ಪರ ಅರ್ಜಿದಾರರಾದ ಮೊಹಮ್ಮದ್ ಉಮರ್ ತಿಳಿಸಿದ್ದಾರೆ. ಮತ್ತೊಬ್ಬ ಅರ್ಜಿದಾರ ಹಸ್ಬುಲ್ಲಾ ಬಾದಶಾಹ್ ಖಾನ್, ಮಸೀದಿ ಮತ್ತು ದೇವಸ್ಥಾನ ೬೭ ಎಕರೆ ಜಾಗದ ವ್ಯಾಪ್ತಿಯಲ್ಲೇ ಇರಬೇಕು ಎಂದು ಆಗ್ರಹಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here