ರಾಮಾಯಣ ಮಹಾಕಾವ್ಯ ಎಂದೊಡನೆ ಭಕ್ತಿ ಭಾವ ಉಕ್ಕಿ ಬರುತ್ತದೆ. ಪಿತೃ ವಾಕ್ಯ ಪರಿಪಾಲನೆ, ಸತಿ ಪ್ರೇಮ, ಸೋದರ ವಾತ್ಯಲ್ಯ, ಸ್ವಾಮಿ ಭಕ್ತಿಯಂತಹ ಅನೇಕ ಮೌಲ್ಯಗಳನ್ನು ಬೋಧಿಸುವ ಈ ಮಹಾ ಖಂಡ ಕಾವ್ಯದಲ್ಲಿ ಭ್ರಾತೃ ವಾತ್ಸಲ್ಯದ ಅತ್ಯುತ್ತಮ ಉದಾಹರಣೆಯಾಗಿ ನಿಂತ ವ್ಯಕ್ತಿಯೆಂದರೆ ಅದು ಲಕ್ಷ್ಮಣ. ರಾಮ ಹಾಗೂ ಸೀತೆ ವನವಾಸಕ್ಕೆ ಹೊರಟು ನಿಂತಾಗ, ಅವರೊಟ್ಟಿಗೆ ತಾನೂ ಕೂಡಾ ಹೊರಟು ನಿಂತ ರಾಮನ ತಮ್ಮ ಲಕ್ಷ್ಮಣ. ಹಿರಿಯಣ್ಣನ ಸೇವೆಯೇ ತನ್ನ ಜೀವನದ ಅರ್ಥ ಮತ್ತು ಸಾರ್ಥಕತೆ ಎಂದು ಅಣ್ಣನ ಹಿಂದೆಯೇ ಅರಣ್ಯ ವಾಸಕ್ಕೆ ಅಡಿಯಿಟ್ಟ ಸಹೋದರ ಲಕ್ಷ್ಣಣ.

ಅರಣ್ಯಕ್ಕೆ ಹೋದ ಮೇಲೆ ಅಲ್ಲಿ ತನ್ನ ಅಣ್ಣ ಅತ್ತಿಗೆಯ ರಕ್ಷಣೆಯನ್ನು ಸದಾ ಕಾಲ ಅಂದರೆ ಹಗಲು ರಾತ್ರಿ ಎಚ್ಚರದಿಂದ ಇದ್ದು ಮಾಡಬೇಕೆಂದು ನಿರ್ಧರಿಸಿದ್ದ. ಆದರೆ ನಿದ್ರೆಯು ಅವನ ಹಾದಿಗೆ ಅಡ್ಡವಾಗಬಹುದೆಂಬ ಆತಂಕವಿದ್ದ ಲಕ್ಷ್ಮಣನು, ನಿದ್ರಾ ದೇವಿಯನ್ನು ಆರಾಧನೆ ಮಾಡಿದಾಗ, ಆಕೆ ಲಕ್ಷ್ಮಣನ ಕೋರಿಕೆಯನ್ನು ಕೇಳಿದಾಗ, ಲಕ್ಷ್ಮಣನು ಹದಿನಾಲ್ಕು ವರ್ಷಗಳು ನಿದ್ರೆಯು ತನ್ನನ್ನು ಆವರಿಸದಂತೆ ವರವನ್ನು ನೀಡು ಎಂದು ಬೇಡಿಕೊಂಡನು. ಆಗ ನಿದ್ರಾದೇವಿಯು ಹಾಗೇ ಆಗಲಿ , ಆದರೆ ಅಷ್ಟು ವರ್ಷಗಳು ಆತನ ನಿದ್ರೆಯನ್ನು ಬೇರೆ ಯಾರಾದರೂ ಸ್ವೀಕರಿಸಬೇಕು ಎಂಬ ಷರತ್ತು ವಿಧಿಸಿದಳು.

 

ಆಗ ಅದನ್ನು ತನ್ನ ಪತ್ನಿ ಊರ್ಮಿಳೆಗೆ ನೀಡಿ ಸರಿದೂಗಿಸಲು ಹೇಳಿದಾಗ, ನಿದ್ರಾ ದೇವಿಯು ಲಕ್ಷ್ಮಣನ ಸಂದೇಶವನ್ನು ಊರ್ಮಿಳೆಗೆ ತಿಳಿಸಿದಾಗ, ಆಕೆ ಪತಿಯ ಮಾತನ್ನು ಒಪ್ಪಿ, ಲಕ್ಷ್ಣಣನ ಭಾಗದ ನಿದ್ರೆಯನ್ನು ತಾನೇ ಸ್ವೀಕರಿಸಿದಳು. ಅತ್ತ ಪತಿ ಹದಿನಾಲ್ಕು ವರ್ಷಗಳು ನಿದ್ರೆಯಿಲ್ಲದೆ ಅಣ್ಣ-ಅತ್ತಿಗೆಯ ರಕ್ಷಣೆಗೆ ನಿಂತರೆ, ಇತ್ತ ಊರ್ಮಿಳೆ ಪತಿಗಾಗಿ ಹದಿನಾಲ್ಕು ವರ್ಷ ನಿದ್ರೆಯಲ್ಲೇ ಕಳೆದಳು. ಲಕ್ಷ್ಮಣನು ಹೀಗೆ ನಿದ್ರೆಯನ್ನು ಗೆದ್ದಿದ್ದರಿಂದ ಲೋಕ ಕಲ್ಯಾಣ ಕೂಡಾ ಆಯಿತು. ರಾವಣನ ಮಗ ಮೇಘನಾದನಿಗೆ ಮೃತ್ಯು ಎಂಬುದು ನಿದ್ರೆಯನ್ನು ಗೆದ್ದವನಿಂದ ಮಾತ್ರ ಸಾಧ್ಯ ಎಂಬ ವರವಿತ್ತು. ಲಕ್ಷ್ಮಣ ನಿದ್ರೆಯನ್ನು ಗೆದ್ದಿದ್ದರಿಂದ ಮೇಘನಾದನ ಸಂಹಾರ ಮಾಡಿದ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here