ಟಗರು ಸದ್ಯ ಸ್ಯಾಂಡಲ್ ವುಡ್ ನ ಸೆನ್ಸೇಸನಲ್ ಮೂವಿ.ಟಗರು ಸೌಂಡ್ ಹೆಚ್ಚುಕಡಿಮೆ ದೇಶ ವಿದೇಶಗಳಲ್ಲಿ ಜೋರಾಗಿದೆ. ಟಗರು ತೆರೆಗೆ ಬಂದು 35 ದಿನಗಳು ಕಳೆದರೂ ಟಗರು ಕ್ರೇಜ್ ಇನ್ನೂ ನಿಂತಿಲ್ಲ.ಟಗರು ಇಂದಿಗೂ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಟಗರು ಚಿತ್ರವನ್ನು ಇಂದು ಬೆಂಗಳೂರಿನಲ್ಲಿ ಭಾರತ ಚಿತ್ರರಂಗದ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮ ನೋಡಿದ್ದಾರೆ.ಟಗರು ಸಿನಿಮಾವನ್ನು ನಗರದ ಒರಿಯನ್ ಮಾಲ್ ನ  ಸ್ಕ್ರೀನ್ ನಲ್ಲಿ ಟಗರು ಚಿತ್ರದ ನಿರ್ದೇಶಕರಾದ ಸೂರಿ ಮತ್ತು ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್ ಜೊತೆ ಪೂರ್ತಿಯಾಗಿ ಸಿನಿಮಾ ವೀಕ್ಷಿಸಿದರು.

ಟಗರು ಸಿನಿಮಾ ನೋಡಿ ತನ್ನ ಟ್ವಿಟರ್ ಖಾತೆಯಲ್ಲಿ ಟಗರು ಬಗ್ಗೆ ಹಾಡಿಹೊಗಳಿದ್ದಾರೆ .ಟಗರು ಚಿತ್ರದ ಸೂರಿ ಅವರ ನಿರ್ದೇಶನದ ಬಗ್ಗೆ ಫುಲ್ ಫಿದಾ ಆಗಿದ್ದಾರೆ.ಸೂರಿ ಅವರದ್ದು ಅಸಮಾನ್ಯ ನಿರ್ದೇಶನ.ಮಾನ್ವಿತಾ ಹರೀಶ್ ಅಭಿನಯದಲ್ಲಿ ಕರೆಂಟ್ ರೀತಿಯಲ್ಲಿ ಫೈರ್ ಇದೆ.

ಇನ್ನು ಶಿವರಾಜ್ ಕುಮಾರ್ ಅಭಿನಯದ ವಿಷಯದಲ್ಲಿ ದಿ ಲೆಜೆಂಡ್ ಟಗರು ನಿಜಕ್ಕೂ ನಾನು ನೋಡಿದ ಅದ್ಭುತವಾದ ಚಿತ್ರಗಳಲ್ಲಿ ಒಂದು ಎಂದು ತಿಳಿಸಿದ್ದಾರೆ.ಧನಂಜಯ್ ಅವರ ಅಭಿನಯ ತುಂಬಾ ಚೆನ್ನಾಗಿದೆ.ಇಂತಹ ಬ್ಲಾಕ್‌ಬಸ್ಟರ್ ಸಿನಿಮಾ ನೋಡಿದ್ದು ಬಹಳ ಖುಷಿಯಾಗಿದೆ ಎಂದು ಥ್ರಿಲ್ ಆಗಿ ಟ್ವೀಟ್ ಮಾಡಿದ್ದಾರೆ.ಟಗರು ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here